‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋನಲ್ಲಿ ಇದೀಗ ಮತ್ತೊಂದು ಹೊಸ ಟ್ವಿಸ್ಟ್ ಎದುರಾಗಿದೆ. ಈಗಾಗಲೇ ಹಲವು ತಿರುವುಗಳಿಂದ ಗಮನ ಸೆಳೆಯುತ್ತಿರುವ ಶೋಗೆ ಮೂವರು ಹೊಸ ಸ್ಪರ್ಧಿಗಳು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದಾರೆ. ಕಿಚ್ಚ ಸುದೀಪ್ ಅವರು ಹೊಸ ಸ್ಪರ್ಧಿಗಳನ್ನು ಬಿಗ್ ಬಾಸ್ ಮನೆಗೆ ಸ್ವಾಗತಿಸಿದ್ದಾರೆ.
ಭಾನುವಾರದ ಸಂಚಿಕೆಯ ಪ್ರೋಮೋವನ್ನು ‘ಕಲರ್ಸ್ ಕನ್ನಡ’ ವಾಹಿನಿ ಹಂಚಿಕೊಂಡಿದ್ದು, ಇದರಲ್ಲಿ ಮೂವರು ವೈಲ್ಡ್ ಕಾರ್ಡ್ ಸ್ಪರ್ಧಿಗಳ ಎಂಟ್ರಿಯ ಝಲಕ್ ತೋರಿಸಲಾಗಿದೆ. ಆದರೆ ಪ್ರೋಮೋದಲ್ಲಿ ಈ ಮೂವರು ಯಾರು ಎಂಬುದನ್ನು ಮಾತ್ರ ಬಹಿರಂಗಪಡಿಸಿಲ್ಲ. ಹೀಗಾಗಿ ಹೊಸ ಸ್ಪರ್ಧಿಗಳ ಗುರುತು ತಿಳಿಯಲು ವೀಕ್ಷಕರು ಸಂಜೆಯ ಸಂಚಿಕೆಗಾಗಿ ಕಾಯುವಂತಾಗಿದೆ.
ಮೂವರು ಹೊಸ ಸ್ಪರ್ಧಿಗಳ ಎಂಟ್ರಿಯಿಂದ ಬಿಗ್ಬಾಸ್ ಮನೆಯ ವಾತಾವರಣವೂ ಬದಲಾಗುವ ಸಾಧ್ಯತೆ ಇದೆ. ಈಗಾಗಲೇ ಮನೆಯೊಳಗೆ ಹಲವು ವಿಚಾರಗಳ ಬಗ್ಗೆ ಚರ್ಚೆ, ಗೊಂದಲ ಮತ್ತು ಭಿನ್ನಾಭಿಪ್ರಾಯಗಳು ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಹೊಸ ಸ್ಪರ್ಧಿಗಳ ಆಗಮನ ಕುತೂಹಲ ಹೆಚ್ಚಿಸಿದೆ.

ಮನೆಯವರಿಗೆ ಪ್ರಶ್ನೆಗಳ ಸುರಿಮಳೆ
ಮನೆಗೆ ಎಂಟ್ರಿ ಕೊಟ್ಟ ಕೂಡಲೇ ಹೊಸ ಸ್ಪರ್ಧಿಗಳಲ್ಲಿ ಒಬ್ಬರು ಮನೆಯಲ್ಲಿರುವ ಸ್ಪರ್ಧಿಗಳಿಗೆ ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳಿದ್ದಾರೆ. ಗಗನ್ಗೆ, ‘ನಿಮ್ಮ ಮೊದಲ ದಿನದ ರಾವಣ ಎಲ್ಲಿ?’ ಎಂದು ಪ್ರಶ್ನೆ ಮಾಡಿದ್ದಾರೆ. ಸೌಂದರ್ಯಗೆ, ‘ಡಾನ್ ಕ್ಯಾರೆಕ್ಟರ್ ಎಲ್ಲಿ?’ ಎಂದು ಕೇಳಿದ್ದಾರೆ.
ಇನ್ನು ಆಸಿಯಾಗೆ, ‘ನೀವು ಸೋತಾಗ ವಿಕ್ಟಿಮ್ ಕಾರ್ಡ್ ಪ್ಲೇ ಮಾಡಿದ್ದು ಯಾಕೆ?’ ಎಂಬ ರೀತಿಯಲ್ಲಿ ಪ್ರಶ್ನೆ ಕೇಳಲಾಗಿದೆ. ಮತ್ತೊಂದೆಡೆ ಮಂಜನ ಕುರಿತಾಗಿಯೂ ಹೊಸ ಸ್ಪರ್ಧಿ ಪ್ರಶ್ನೆ ಎತ್ತಿರುವುದು ಪ್ರೋಮೋದಲ್ಲಿ ಕಂಡುಬಂದಿದೆ. ಇದನ್ನೂ ಓದಿ: ಕಿರುತೆರೆಗೆ ಮರಳಿದ ಮೋಕ್ಷಿತಾ ಪೈ – ʻಜಗದ್ಧಾತ್ರಿʼ ಪಾತ್ರಕ್ಕೆ ಜೀವ ತುಂಬಿದ ನಟಿ
ಹೊಸ ಸ್ಪರ್ಧಿಗಳು ಮೊದಲ ದಿನವೇ ಮನೆಯವರ ಆಟ, ವರ್ತನೆ ಮತ್ತು ಹಿಂದಿನ ಘಟನೆಗಳ ಬಗ್ಗೆ ಪ್ರಶ್ನೆಗಳನ್ನು ಕೇಳಿರುವುದು ಕುತೂಹಲ ಮೂಡಿಸಿದೆ. ಈ ಪ್ರಶ್ನೆಗಳಿಗೆ ಮನೆಯ ಸದಸ್ಯರು ಹೇಗೆ ಪ್ರತಿಕ್ರಿಯಿಸುತ್ತಾರೆ? ಹೊಸ ಸ್ಪರ್ಧಿಗಳ ಎಂಟ್ರಿಯಿಂದ ಮನೆಯೊಳಗೆ ಏನೆಲ್ಲಾ ಬದಲಾವಣೆ ಆಗಲಿದೆ ಕಾದು ನೋಡಬೇಕಿದೆ.ಇದನ್ನೂ ಓದಿ: ಹಾಲಿನ ಪ್ರೋತ್ಸಾಹ ಧನ 15ಕ್ಕೆ ಏರಿಕೆ ಮಾಡಿ 6ನೇ ಗ್ಯಾರಂಟಿ ಅಂತ ಕೊಡಿ: ದರ ಏರಿಕೆಗೆ ಹೆಚ್ಡಿಕೆ ವಿರೋಧ

