ಬೆಂಗಳೂರು: ಬ್ರ್ಯಾಂಡ್ ಬೆಂಗಳೂರಿಗೆ(Bengaluru) ಮತ್ತೆ ಧಕ್ಕೆಯಾಗಿದೆ. ಸ್ವಚ್ಛ ಸರ್ವೇಕ್ಷಣ್ ರ್‍ಯಾಂಕಿಂಗ್ ಪಟ್ಟಿಯಲ್ಲಿ(Swachh Survekshan 2022 list) ಬೆಂಗಳೂರು ಕುಸಿದಿದೆ.
ಕೇಂದ್ರ ಸರ್ಕಾರದ ನಗರಾಭಿವೃದ್ಧಿ ಸಚಿವಾಲಯ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಕಳೆದ ವರ್ಷ 28ನೇ ಸ್ಥಾನದಲ್ಲಿ ಬೆಂಗಳೂರು ಈ ಬಾರಿ 43ನೇ ಸ್ಥಾನಕ್ಕೆ ಕುಸಿದಿದೆ.
Advertisement
10 ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆ ಇರುವ 45 ನಗರಗಳನ್ನು ಅಧ್ಯಯನ ನಡೆಸಿ ಈ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮಧ್ಯಪ್ರದೇಶದ ಇಂದೋರ್ ಸತತ 6ನೇ ಬಾರಿ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲೇ ಮುಂದುವರಿಯುತ್ತಿದೆ. ಚೆನ್ನೈ ಮತ್ತು ಮಧುರೈ ಕೊನೆಯ ಸ್ಥಾನಗಳನ್ನು ಪಡೆದುಕೊಂಡಿದೆ. ಇದನ್ನೂ ಓದಿ: ಯುವಕರ ಸಾಹಸ – ಭೂಗಳ್ಳರ ಕೈಯಿಂದ ಶಾಲೆಗೆ ಸೇರಿತು ಕೋಟ್ಯಂತರ ಮೌಲ್ಯದ ಜಮೀನು
Advertisement
Advertisement
ನಗರದ ಸ್ವಚ್ಛತೆ, ನೈರ್ಮಲ್ಯ ಹಾಗೂ ಘನತ್ಯಾಜ್ಯ ನಿರ್ವಹಣೆಗೆ ಪಾಲಿಕೆಯಿಂದ ಕೈಗೊಂಡ ಕ್ರಮಗಳು, ಸಾರ್ವಜನಿಕ ಸ್ಥಳಗಳಲ್ಲಿನ ಸ್ವಚ್ಛತೆ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವುದಕ್ಕೆ ಕೈಗೊಂಡ ಕ್ರಮ ಸೇರಿದಂತೆ ಹಲವು ಮಾನದಂಡಗಳ ಆಧಾರದ ಮೇಲೆ ರ್‍ಯಾಂಕ್ ನೀಡಲಾಗುತ್ತದೆ.
Advertisement
ಕುಟುಕಿದ ಪೈ
ಉದ್ಯಮಿ ಮೋಹನ್‌ದಾಸ್ ಪೈ(Mohandas Pai), ಬಿಗ್‍ಶೇಮ್. ನಮ್ಮ ಶಾಸಕರು, ಸಂಸದರು ಮತ್ತೆ ವಿಫಲರಾಗಿದ್ದಾರೆ. ತುಂಬಾ ಶಾಸಕರು ಭ್ರಷ್ಟ್ಟಾಚಾರಿಗಳು ಎಂದು ಬರೆದು ಸಿಎಂ ಬೊಮ್ಮಾಯಿ ಸೇರಿದಂತೆ ಬೆಂಗಳೂರಿನ ಮಂತ್ರಿ ಮತ್ತು ಸಂಸದರಿಗೆ ಟ್ಯಾಗ್ ಮಾಡಿ ಕುಟುಕಿದ್ದಾರೆ.