ಬೀದರ್ : ಸುರ್ಜೆವಾಲ ಟ್ವೀಟ್‌ಗೆ ಯಾವುದೇ ಕಿಮ್ಮತ್ತಿಲ್ಲ, ಅವರ ಹತ್ತಿರ ಏನಾದ್ರು ಆಧಾರ ಇದ್ದರೆ ಕೊಡಲಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ.
ಬಿಟ್ ಕಾಯಿನ್ ಬಗ್ಗೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಸುರ್ಜೆವಾಲ ಟ್ವೀಟ್ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಿಎಂ, ಸುಮ್ಮನೆ ಟ್ವೀಟ್ ಮಾಡಿದರೆ ಏನು ಪ್ರಯೋಜನೆ ಇಲ್ಲ. ಈ ಬಗ್ಗೆ ಸದನದಲ್ಲೇ ಹೇಳಿದ್ದೇನೆ ಎಂದು ಸುರ್ಜೆವಾಲಗೆ ಟಾಂಗ್ ನೀಡಿದ್ದಾರೆ. ಇದನ್ನೂ ಓದಿ: ಬರೋಬ್ಬರಿ 12 ಕಂಪನಿಗಳನ್ನು ಹ್ಯಾಕಿಂಗ್ ಮಾಡಿದ್ದ ಶ್ರೀಕಿ
Advertisement
ವಕ್ಫ್ ಬೋರ್ಡ್ ಬ್ಯಾನ್ ಬಗ್ಗೆ ಪ್ರಮೋದ್ ಮುತಾಲಿಕ್ ಹೇಳಿಕೆ ವಿಚಾರ ಪ್ರತಿಕ್ರಿಯೆ ನೀಡಿದ ಸಿಎಂ, ಅವರು ಯಾವ ಅಭಿಯಾನ ಬೇಕಾದರೂ ಮಾಡಲಿ. ಅದಕ್ಕೂ ನಮಗೂ ಸಂಬಂಧವಿಲ್ಲ. ನಾವು ಕಾನೂನು ಸುವ್ಯವಸ್ಥೆ ಶಾಂತಿ ಕಾಪಾಡಬೇಕು ಎಂದಿದ್ದಾರೆ. ಇದನ್ನೂ ಓದಿ: ಚಂದ್ರು ಹತ್ಯೆ ಕೇಸ್‌ಗೆ ಬಿಗ್ ಟ್ವಿಸ್ಟ್- ಘಟನೆಯ ಇಂಚಿಂಚು ಮಾಹಿತಿ ನೀಡಿದ ಸ್ನೇಹಿತ ಸೈಮನ್ ರಾಜ್
Advertisement
Advertisement
ಕಾನೂನಿನಲ್ಲಿ ಎಲ್ಲರೂ ಸಮಾನರು. ಹೀಗಾಗಿ ಸರ್ಕಾರ ಕಾನೂನಿನಲ್ಲಿ ಏನಿದೆ ಅದನ್ನು ಪಾಲನೆ ಮಾಡುತ್ತದೆ. ಕಲ್ಯಾಣದಲ್ಲಿ ಯಾತ್ರಾ ಪರ್ವ ವಿಶೇಷ ಕಾರ್ಯಕ್ರಮ ಆಗುತ್ತಿದ್ದು, ನಾನು ಸಮಗ್ರ ಚಿಂತನೆ ಹೊತ್ತು ಬಸವಕಲ್ಯಾಣಕ್ಕೆ ಬಹಳ ಸಂತೋಷದಿಂದ ಬಂದಿದ್ದೇನೆ ಎಂದು ಹೇಳಿದ್ದಾರೆ.
Advertisement