ಬೆಂಗಳೂರು: ಕನ್ನಡ ಗೊತ್ತಿಲ್ಲ ಉರ್ದುನಲ್ಲಿ ಮಾತನಾಡಿ ಎಂದಿದ್ದರು. ಬಳಿಕ ಚಾಕುವಿನಿಂದ ಇರಿದು ಚಂದ್ರುವನ್ನು ಕೊಲೆ ಮಾಡಿದ್ದಾರೆ ಎಂದು ಇದೀಗ ಸ್ನೇಹಿತ ಸೈಮನ್ ರಾಜ್ ತಿಳಿಸಿದ್ದಾರೆ.
Advertisement
ಚಂದ್ರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನನ್ನ ಹುಟ್ಟಹಬ್ಬ ಇತ್ತು. ನಾನು ಮತ್ತು ಚಂದ್ರು ಚಿಕನ್ ರೋಲ್ ತಿನ್ನಲು ಹಳೆಗುಡ್ಡದಹಳ್ಳಿಗೆ ಹೋಗಿದ್ದೆವು. ಆದರೆ ಚಿಕನ್ ರೋಲ್ ಅಂಗಡಿ ಕ್ಲೋಸ್ ಆಗಿತ್ತು. ಬಳಿಕ ಅಲ್ಲಿದ್ದ ಬೇಕರಿಗೆ ಹೋಗುವ ವೇಳೆ ಬೈಕ್ ಟಚ್ ಆದ ವಿಚಾರವಾಗಿ ಸ್ಥಳೀಯ ಯುವಕರ ನಡುವೆ ಮಾತಿನ ಚಕಮಕಿ ನಡೆಯಿತು. ಆ ಬಳಿಕ ಮೂರು ಜನ ಬಂದು ಚಾಕು ತೆಗೆದಾಗ ನಾನು ಅವರನ್ನು ತಳ್ಳಿ ಓಡಿ ಹೋಗಿದ್ದೆ. ಚಂದ್ರುವನ್ನು ಓಡಲು ಹೇಳಿದ್ದೆ ಬಳಿಕ ಚಂದ್ರುಗೆ ಫೋನ್ ಮಾಡಿದಾಗ ಫೋನ್ ತೆಗೆದಿರಲಿಲ್ಲ. ನಂತರ ಘಟನಾ ಸ್ಥಳಕ್ಕೆ ವಾಪಸ್ ಬಂದಾಗ ಆತ ರಕ್ತದ ಮಡುವಿನಲ್ಲಿ ಬಿದ್ದಿದ್ದ ನಂತರ ಆಟೋದಲ್ಲಿ ಹಾಕಿಕೊಂಡು ಹೋಗಿ ಆಸ್ಪತ್ರೆಗೆ ಸೇರಿಸಿದ್ದೆ ಅಷ್ಟೋತ್ತಿಗೆ ಆತ ಮೃತಪಟ್ಟಿದ್ದ ಎಂದು ದುಃಖಿತರಾದರು. ಇದನ್ನೂ ಓದಿ: ನಾನು ಯಾವುದೇ ಸುಳ್ಳು ಹೇಳಿಲ್ಲ: ಕಮಲ್ ಪಂಥ್ ಸ್ಪಷ್ಟನೆ
Advertisement
ಈ ಮೊದಲು ಕಮಿಷನರ್ ಕಮಲ್ ಪಂಥ್ ಪ್ರಕರಣ ಸಂಬಂಧಿಸಿದಂತೆ ಮಾಧ್ಯಮಗಳೊಂದಿಗೆ ಮಾತನಾಡಿ, ನಾನು ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಸುಳ್ಳು ಹೇಳಿಲ್ಲ. ನಮ್ಮ ತನಿಖೆ ಪ್ರಕಾರ ಬೈಕ್ ಟಚ್ ಆಗಿದ್ದಕ್ಕೆ ಚಂದ್ರು ಕೊಲೆ ನಡೆದಿದೆ. ಚಂದ್ರು ಕೊಲೆ ಪ್ರಕರಣದ ತನಿಖೆಯಲ್ಲಿ ಕಂಡುಕೊಂಡ ವಿಚಾರವನ್ನಷ್ಟೇ ಹೇಳಿದ್ದೇನೆ. ನಮ್ಮ ತನಿಖೆಯಲ್ಲಿ ಮೃತ ಚಂದ್ರು ಜೊತೆಗೆ ಘಟನೆ ವೇಳೆ ಇದ್ದ ಸೈಮನ್ ಹೇಳಿಕೆ ನೀಡಿದ್ದಾನೆ. ನಮ್ಮ ತನಿಖೆ ವೇಳೆ ಬೈಕ್ ಟಚ್ ಆಗಿದ್ದರಿಂದಲೇ ಚಾಕುವಿನಿಂದ ಇರಿದಿದ್ದಾಗಿ ಸೈಮನ್ ಹೇಳಿಕೆ ನೀಡಿದ್ದಾನೆ. ಈ ಹಿನ್ನೆಲೆ ತನಿಖೆ ಮಾಡಿದ್ದ ಬಳಿಕ ಕಂಡುಕೊಂಡ ವಿಚಾರದ ಬಗ್ಗೆ ಮಾಹಿತಿ ನೀಡಿದ್ದೇನೆ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು. ಇದನ್ನೂ ಓದಿ: ಪೊಲೀಸ್ ಕಮಿಷನರ್ ಸುಳ್ಳು ಹೇಳಿದ್ದಾರೆ, ಚಂದ್ರು ಕೊಲೆಗೆ ಉರ್ದು ಕಾರಣ: ರವಿಕುಮಾರ್
Advertisement
Advertisement
ಪೊಲೀಸ್ ಕಮಿಷನರ್ ಕಮಲ್ ಪಂಥ್ ಸುಳ್ಳು ಹೇಳಿದ್ದಾರೆ. ಚಂದ್ರು ಸ್ನೇಹಿತ ಸೈಮನ್ ರಾಜ್ ಹೇಳಿರುವುದೇ ಸತ್ಯ. ಚಂದ್ರು ಮನೆಯವರು ಹೇಳಿರುವಂತೆ ಉರ್ದು ಕಾರಣಕ್ಕಾಗಿಯೇ ಚಂದ್ರು ಕೊಲೆ ಆಗಿರುವುದು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಆರೋಪಿಸಿದ್ದರು. ಇದಕ್ಕೆ ಪೂರಕ ಎಂಬಂತೆ ಸೈಮನ್ ರಾಜ್ ಉರ್ದು ಮಾತನಾಡದ್ದಕ್ಕೆ ಕೊಲೆ ಆಗಿದೆ ಎಂದು ಹೇಳಿಕೆ ನೀಡಿರುವುದು ಮತ್ತು ಕೊಲೆಯಾದ ದಿನವೇ ಪೋಷಕರಿಂದಲೂ ಇದೇ ಆರೋಪ ಕೇಳಿಬಂದಿರುವುದು ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಅನುಮಾನಗಳು ಮೂಡಲಾರಂಭಿಸಿದೆ. ಇದೀಗ ಚಂದ್ರು ಕೊಲೆ ಪ್ರಕರಣದಲ್ಲಿ ಟ್ವಿಸ್ಟ್ ಹಿನ್ನೆಲೆ ಪೊಲೀಸರಿಂದ ಮತ್ತೊಮ್ಮೆ ಸೈಮನ್ ರಾಜ್ ವಿಚಾರಣೆಗಾಗಿ ಜೆಜೆನಗರ ಪೊಲೀಸರು ಕರೆಸಿಕೊಂಡಿದ್ದಾರೆ.