ಅಯೋಧ್ಯೆ: ರಾಮಮಂದಿರದಲ್ಲಿ (Ram Mandir) ಬಾಲಕ ರಾಮನ (Balak Ram) ಪ್ರಾಣಪ್ರತಿಷ್ಠಾಪನೆ ಬಳಿಕ ದರ್ಶನಕ್ಕೆ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಿದ್ದಾರೆ. ಮಂಗಳವಾರ ಸುಮಾರು 5 ಲಕ್ಷ ಜನ ಭೇಟಿ ನೀಡಿದ್ದರು. ಇಂದು (ಜ.24) ಸಹ ಲಕ್ಷಾಂತರ ಭಕ್ತರು ಬಾಲಕ ರಾಮನ ದರ್ಶನಕ್ಕೆ ಮುಂಜಾನೆಯಿಂದಲೇ ಕಾದು ಕುಳಿತಿದ್ದಾರೆ.
ಬಾಲಕ ರಾಮನ ದರ್ಶನಕ್ಕೆ ಅವಕಾಶ ಕೊಟ್ಟ ಮೊದಲ ದಿನ, ಮುಂಜಾನೆ 3 ಗಂಟೆ ಸುಮಾರಿಗೆ ಲಕ್ಷಾಂತರ ಭಕ್ತರು ಸೇರಿದ್ದರು. ಈ ವೇಳೆ ರಾಮ ಮಂದಿರದ ಬಾಗಿಲು ತೆರೆಯುತ್ತಿದ್ದಂತೆ ದರ್ಶನಕ್ಕೆ ನೂಕು ನುಗ್ಗಲು ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ದೇವಾಲಯದ ಒಳಗೆ ಪ್ರವೇಶಿಸುವ ಭಕ್ತರನ್ನು ಮೆಟಲ್ ಡಿಟೆಕ್ಟರ್ ಮೂಲಕ ಪರಿಶೀಲಿಸಲಾಗುತ್ತಿದೆ. ಇದನ್ನೂ ಓದಿ: ರಾಮಮಂದಿರದಲ್ಲಿರೋ ಮೂರ್ತಿಗೆ `ಬಾಲಕ ರಾಮ’ ಹೆಸರು: ಪ್ರತಿಷ್ಠಾಪನೆಯ ಅರ್ಚಕ ಅರುಣ್ ದೀಕ್ಷಿತ್ ಮಾಹಿತಿ
Advertisement
Advertisement
ಮಂದಿರಕ್ಕೆ ಜನರನ್ನು ಬಿಡುವಾಗ ಸರದಿಯಲ್ಲಿ ಬಿಡಲಾಗುತ್ತಿದ್ದು, ಶಿಸ್ತು, ಸಂಯಮ ಪಾಲನೆಗೆ ಮನವಿ ಮಾಡಲಾಗುತ್ತಿದೆ. ಯಾವುದೇ ಅಹಿತಕರ ಘಟನೆಗಳಾಗದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದಕ್ಕಾಗಿ ಹೆಚ್ಚಿನ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
Advertisement
Advertisement
ಭಕ್ತರಿಗೆ ಬಾಲಕ ರಾಮನ ದರ್ಶನಕ್ಕೆ ಸಮಯ ನಿಗದಿ: ಬಾಲಕ ರಾಮನ ದರ್ಶನಕ್ಕೆ ಬರುವ ಭಕ್ತರಿಗೆ, ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ವೆಬ್‍ಸೈಟ್‍ನಲ್ಲಿ ನಿರ್ದಿಷ್ಟ ಸಮಯದ ಸ್ಲಾಟ್‍ಗಳನ್ನು ಒದಗಿಸಿರುವ ಮಾಹಿತಿ ಇದೆ. ಇದರಂತೆ ನಿತ್ಯ ಬೆಳಗ್ಗೆ 7 ರಿಂದ 11:30 ರವರೆಗೆ ಮತ್ತು ಮಧ್ಯಾಹ್ನ 2 ರಿಂದ ಸಂಜೆ 7 ರವರೆಗೆ ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಲಾಗಿದೆ.
ಬೆಳಗ್ಗೆ 6:30ಕ್ಕೆ ಆರತಿ ಹಾಗೂ ಅಲಂಕಾರ ನಡೆಯಲಿದೆ. ಸಂಜೆ 7:30 ಕ್ಕೆ ಸಂಧ್ಯಾ ಆರತಿ ನಡೆಯಲಿದೆ. ಆಫ್‍ಲೈನ್ ಮತ್ತು ಆನ್‍ಲೈನ್ ಎರಡರಲ್ಲೂ ಆರತಿಗಾಗಿ ಪಾಸ್‍ಗಳನ್ನು ದೊರೆಯಲಿದೆ. ಆಫ್‍ಲೈನ್ ಪಾಸ್‍ಗಳು ಶ್ರೀ ರಾಮ ಜನ್ಮಭೂಮಿಯ ಕಚೇರಿಯಲ್ಲಿ ಲಭ್ಯವಿದ್ದು, ಗುರುತಿನ ಪುರಾವೆ ಒದಗಿಸಿ ಪಡೆಯಬಹುದಾಗಿದೆ. ಇದನ್ನೂ ಓದಿ: ಕಬ್ಬಿಣ, ಸಿಮೆಂಟ್ ಬಳಸಿಲ್ಲ – ಕಲ್ಲಿನಿಂದಲೇ ಭವ್ಯ ರಾಮಮಂದಿರ ನಿರ್ಮಾಣ; ಯಾಕೆ ಗೊತ್ತಾ?