Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಸೆ.7ಕ್ಕೆ ಬೆಂಗಳೂರಿನಲ್ಲಿ ಅಸ್ಟೆಮಿದ ಐಸಿರ-ರಾಜಧಾನಿಯಲ್ಲಿ ತುಳುವರ ಅತಿದೊಡ್ಡ ಹಬ್ಬ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಸೆ.7ಕ್ಕೆ ಬೆಂಗಳೂರಿನಲ್ಲಿ ಅಸ್ಟೆಮಿದ ಐಸಿರ-ರಾಜಧಾನಿಯಲ್ಲಿ ತುಳುವರ ಅತಿದೊಡ್ಡ ಹಬ್ಬ

Bengaluru City

ಸೆ.7ಕ್ಕೆ ಬೆಂಗಳೂರಿನಲ್ಲಿ ಅಸ್ಟೆಮಿದ ಐಸಿರ-ರಾಜಧಾನಿಯಲ್ಲಿ ತುಳುವರ ಅತಿದೊಡ್ಡ ಹಬ್ಬ

Public TV
Last updated: September 4, 2025 4:10 pm
Public TV
Share
3 Min Read
Astemida Isira 2025 to be held in Bengaluru on September 7th Biggest Tulu Event Vijayanagara
SHARE

ಬೆಂಗಳೂರು: ಪ್ರತೀ ವರ್ಷ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ನಡೆಯುವ ತುಳುವರ ಅತಿದೊಡ್ಡ ಹಬ್ಬ ಅಸ್ಟೆಮಿದ ಐಸಿರ (Astemida Isira) ಕಾರ್ಯಕ್ರಮಕ್ಕೆ ಕೌಂಟ್‌ಡೌನ್ ಶುರುವಾಗಿದೆ.

ತುಳುನಾಡ ಜವನೆರ್ ಬೆಂಗಳೂರು (ರಿ) ಆಯೋಜನೆ ಮಾಡುತ್ತಿರುವ ಎಂಟನೇ ವರ್ಷದ ‘ಅಸ್ಟೆಮಿದ ಐಸಿರ’ ಕಾರ್ಯಕ್ರಮ ಇದೇ ಬರುವ ಸೆ.7ನೇ ತಾರೀಕಿನಂದು ವಿಜಯನಗರದ ಬಂಟರ ಭವನದಲ್ಲಿ ಅದ್ಧೂರಿಯಾಗಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನ, ಪ್ರತಿಷ್ಠಿತ ತಂಡಗಳ ಸಾಂಸ್ಕೃತಿಕ ಕಾರ್ಯಕ್ರಮ, ವಿವಿಧ ಸಾಂಪ್ರದಾಯಿಕ ಆಟೋಟ ಸ್ಪರ್ಧೆಗಳು, ಆಹಾರ ಮೇಳ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳು ನಡೆಯಲಿದೆ.

ಸನ್ಮಾನ ಯಾರಿಗೆ?
ಭಾರತದ ಪ್ರತಿಭಾನ್ವಿತ ಕಲಾ ನಿರ್ದೇಶಕ, ಕಳೆದ 13 ವರ್ಷಗಳಿಂದ ದೆಹಲಿ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕರ್ನಾಟಕದ ಟ್ಯಾಬ್ಲೋದ ನಿರ್ಮಾಣ ಹೊಣೆ ಹೊತ್ತಿರುವ ಶಶಿಧರ ಅಡಪ ಅವರಿಗೆ ಸನ್ಮಾನ ಮಾಡಲಾಗುವುದು.

ಕಂಬಳ ಕ್ಷೇತ್ರದಲ್ಲಿ ಐತಿಹಾಸಿಕ ಸಾಧನೆ ಮಾಡಿರುವ ನೂರಾರು ಮೆಡಲ್‌ಗಳನ್ನು ಗೆದ್ದು ಅಪಾರ ಅಭಿಮಾನಿಗಳನ್ನು ಹೊಂದಿರುವ ಕಂಬಳದ ಕೋಣ ‘ಚಾಂಪಿಯನ್ ಕುಟ್ಟಿ’ಗೆ ಸನ್ಮಾನ ನಡೆಯಲಿದೆ.

ಕಂಬಳದ ಕೋಣಗಳಿಗೆಂದೇ ಸ್ವಿಮ್ಮಿಂಗ್ ಫೂಲ್ ಮಾಡಿ ಕಂಬಳ ಕೂಟದಲ್ಲಿ ವಿಶಿಷ್ಟ ಹೆಸರು ಮಾಡಿರುವ ನಂದಳಿಕೆ ಶ್ರೀಕಾಂತ್ ಭಟ್‌ಗೆ ಸನ್ಮಾನ ನಡೆಯಲಿದೆ.

ವಿಶೇಷವಾಗಿ 170 ಗಂಟೆಗಳ ಕಾಲ ಸತತವಾಗಿ ಭರತನಾಟ್ಯ ಪ್ರದರ್ಶನ ಮಾಡಿ ಭರತನಾಟ್ಯದಲ್ಲಿ ವಿಶ್ವ ದಾಖಲೆಗೈದು ಗೋಲ್ಡನ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದಿರುವ ಮಂಗಳೂರಿನ ಪ್ರತಿಭೆ ರೆಮೊನಾ ಪಿರೇರಾ ಅವರಿಗೆ ಗೌರವಾಭಿನಂದನೆ ನಡೆಯಲಿದೆ. ಇದನ್ನೂ ಓದಿ: ಯೂಟ್ಯೂಬರ್‌ ಅಭಿಷೇಕ್‌ಗೆ SIT ಫುಲ್‌ ಗ್ರಿಲ್‌ – ಲೈಕ್ಸ್, ವ್ಯೂವ್ಸ್‌ಗಾಗಿ ವಿಡಿಯೋ ಮಾಡಿದೆ ಅಂತ ತಪ್ಪೊಪ್ಪಿಗೆ

Astemida Isira 2025 to be held in Bengaluru on September 7th

 

ಸಾಂಸ್ಕೃತಿಕ ಕಾರ್ಯಕ್ರಮಗಳು ಏನೇನಿದೆ?
– ಮಂಗಳೂರಿನ ಪ್ರತಿಷ್ಠಿತ ಹುಲಿತಂಡಗಳಲ್ಲಿ ಒಂದಾದ ಪೊಳಲಿ ಟೈಗರ್ಸ್ ತಂಡದಿಂದ ಹುಲಿವೇಷ
– ಪ್ರಣವಂ ಚೆಂಡೆ ತಂಡದಿಂದ ಚೆಂಡೆ ವಾದನ
– ಡ್ಯಾನ್ಸ್ ಬೀಟ್ ಸುಳ್ಯ ತಂಡದ 75 ಮಕ್ಕಳಿಂದ ವಿವಿಧ ಸಾಂಸ್ಕೃತಿಕ ವಿನೋದಾವಳಿ
– ಕರಾವಳಿಯ ಪ್ರತಿಷ್ಠಿತ ಯಕ್ಷಗಾನ ಕಲಾವಿದರಿಂದ ‘ಕಾರ್ನಿಕದ ಶಿವಮಂತ್ರ’ ಯಕ್ಷಗಾನ ಪ್ರದರ್ಶನ
– ಪ್ರಸಿದ್ಧ ‘ಜೋಡು ಜೀಟಿಗೆ’ ಸಿನಿ ಮಾದರಿಯ ತುಳುನಾಟಕ
– ಕರಾವಳಿಯ ಪ್ರಸಿದ್ಧ ಡಿಜೆ ರತನ್ ಅವರಿಂದ ತುಳು ಡಿಜೆ ನೈಟ್ಸ್ ಸೇರಿದಂತೆ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ವಿಶೇಷವಾಗಿ ಈ ಭಾರಿಯ ಅಷ್ಟೆಮಿದ ಐಸಿರದಲ್ಲಿ ತುಳು ಭಾಷೆಯನ್ನು ರಾಜ್ಯದ ಅಧಿಕೃತ ಭಾಷೆ ಮತ್ತು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಲು ಇರುವ ಅಡೆತಡೆಗಳ ಬಗ್ಗೆ ಸಂವಾದ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮವನ್ನು ಆಳ್ವಾಸ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಡಾ ಮೋಹನ್ ಆಳ್ವ, ತುಳು ಜಾನಪದ ವಿದ್ವಾಂಸ ಡಾ.ಗಣೇಶ್ ಅಮೀನ್ ಸಂಕಮಾರ್ ಮತ್ತು ಕದ್ರಿ ನವನೀತ್ ಶೆಟ್ಟಿ ನಡೆಸಿಕೊಡಲಿದ್ದಾರೆ.

ಆಟೋಟ ಸ್ಪರ್ಧೆ ಏನೇನು?
ಮುದ್ದು ಕೃಷ್ಣೆ, ಅಷ್ಟೆಮಿದ ಏಸ, ಪೆಲತ್ತರಿ ಪೆಜ್ಜುನ, ಗೇನೊಗೊಂಜಿ ಸವಾಲ್, ಕಪ್ಪೆ ಬಲಿಪು, ಕರ ದರ್ಪುನ, ಉದ್ದ ಕಂಬ, ಡೊಂಕ, ಗೋಣಿ ಚೀಲಡ್ ಪಾರುನಿ, ಕಂಬುಲದ ಓಟ, ತಾರಯಿದ ಕಟ್ಟ, ಜಾರು ಕಂಬ, ಬಜಿಲ್ ತಿನ್ಪುನಿ, ಹಗ್ಗ ಜಗ್ಗಾಟ ಹೀಗೆ 30ಕ್ಕೂ ಹೆಚ್ಚು ಬಗೆಯ ಆಟೋಟ ಸ್ಪರ್ಧೆಗಳು ಮಕ್ಕಳು, ಮಹಿಳೆಯರು ಮತ್ತು ಪುರುಷರ ವಿಭಾಗದಲ್ಲಿ ನಡೆಯಲಿದೆ.

ಇನ್ನು ವಿವಿಧ ಆಟೋಟ ಸ್ಪರ್ಧೆಗಳ ಉದ್ಘಾಟನೆಯನ್ನು ಅಕ್ಷತಾ ಪೂಜಾರಿ ಮಾಳ (ಏಕಲವ್ಯ ಪ್ರಶಸ್ತಿ ವಿಜೇತ ಅಂತರಾಷ್ಟ್ರೀಯ ವೈಟ್ ಲಿಪ್ಟರ್), ಸುಖೇಶ್ ಹೆಗ್ಡೆ (ಏಕಲವ್ಯ ಪ್ರಶಸ್ತಿ ವಿಜೇತ ಅಂತರಾಷ್ಟ್ರೀಯ ಕಬ್ಬಡ್ಡಿ ಪಟು), ರೋಹಿತ್ ಮಾರ್ಲ (ರಾಷ್ಟ್ರೀಯ ಕಬ್ಬಡ್ಡಿ ಆಟಗಾರ, ಬ್ಯಾಂಕ್ ಆಪ್ ಬರೋಡ), ಎಸ್‌ಐ ಅಭಿಷೇಕ್ ಶೆಟ್ಟಿ (ಏಕಲವ್ಯ ಪ್ರಶಸ್ತಿ ವಿಜೇತ ಅಂತರಾಷ್ಟ್ರೀಯ ಅಥ್ಲೆಟಿಕ್ಸ್‌) ಇವರುಗಳು ಚಾಲನೆ ನೀಡಿ ಕಾರ್ಯಕ್ರಮಕ್ಕೆ ಮೆರುಗು ನೀಡಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಡಿಸಿಎಂ ಡಿಕೆ ಶಿವಕುಮಾರ್, ವಿಧಾನಸಭಾ ಸ್ಪೀಕರ್ ಯುಟಿ ಖಾದರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ಚಲನಚಿತ್ರ ನಟರಾದ ವಿಜಯ ರಾಘವೇಂದ್ರ, ಸಂಗೀತ ನಿರ್ದೇಶಕ ಗುರುಕಿರಣ್, ನಟ ಶಿವಧ್ವಜ್, ಬಿಗ್‌ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ ಸೇರಿದಂತೆ ಕರಾವಳಿ ಭಾಗದ ಸಂಸದರು, ಶಾಸಕರುಗಳು, ಸೆಲೆಬ್ರಿಟಿಗಳು ಸೇರಿದಂತೆ ಇತರ ಗಣ್ಯರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಈ ಬಾರಿಯ ಅಸ್ಟೆಮಿದ ಐಸಿರ ಕಾರ್ಯಕ್ರಮ ಬೆಳಗ್ಗೆ 8ರಿಂದ ರಾತ್ರಿ 11 ಗಂಟೆ ತನಕ ನಡೆಯಲಿದ್ದು, ಸುಮಾರು 30 ಸಾವಿರ ಜನರು ಸೇರುವ ಸಾಧ್ಯತೆ ಇದೆ ಎಂದು ತುಳುನಾಡ ಜವನೆರ್ (ರಿ) ಬೆಂಗಳೂರು ಅಧ್ಯಕ್ಷ ಹರಿಪ್ರಸಾದ್ ಬೇಂಗದಡಿ ತಿಳಿಸಿದ್ದಾರೆ.

ಕರಾವಳಿ ಭಾಗದ ಜನರನ್ನು ಒಂದೇ ಸೂರಿನಡಿ ಸೇರಿಸಿ ತುಳುನಾಡಿನ ಸಂಸ್ಕೃತಿ ಆಚಾರ ವಿಚಾರಗಳನ್ನು ರಾಜಧಾನಿ ಬೆಂಗಳೂರಿನಲ್ಲಿ ಪ್ರಚುರಪಡಿಸುವ ಸಲುವಾಗಿ ಸೆಪ್ಟೆಂಬರ್ 7ರಂದು ಅದ್ಧೂರಿಯಾಗಿ ಅಸ್ಟೆಮಿದ ಐಸಿರ ಕಾರ್ಯಕ್ರಮ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳುವಂತೆ ಸಂಘಟಕರು ಮನವಿ ಮಾಡಿದ್ದಾರೆ.

TAGGED:bengalurukaravalikarnatakatuluಅಸ್ಟೆಮಿದ ಐಸಿರಕರಾವಳಿಕರ್ನಾಟಕಬೆಂಗಳೂರು
Share This Article
Facebook Whatsapp Whatsapp Telegram

Cinema news

Daali Dhananjaya
ಮೊದಲ ಮಗುವಿನ ನಿರೀಕ್ಷೆಯಲ್ಲಿ ಡಾಲಿ ಧನಂಜಯ್‌ ದಂಪತಿ
Cinema Latest Main Post Sandalwood
Darshan
ಜಾಮೀನಿಗಾಗಿ ಎರಡನೇ ಬಾರಿ ಸುಪ್ರೀಂ ಕದ ತಟ್ಟಿದ ದರ್ಶನ್‌
Cinema Court Latest Main Post Sandalwood
yash toxic
ಜಾಗತಿಕ ಮಟ್ಟದಲ್ಲಿ ಅಬ್ಬರಿಸಲು ಸಜ್ಜಾದ ಯಶ್ – ಟಾಕ್ಸಿಕ್ ಬಿಡುಗಡೆ ದಿನಾಂಕ ಮತ್ತೆ ಮುಂದಕ್ಕೆ
Cinema Latest Main Post
Pooja Hegde Udupi
ಉಡುಪಿಯಲ್ಲಿ ನಾಗದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟಿ ಪೂಜಾ ಹೆಗ್ಡೆ
Cinema Districts Karnataka Latest Top Stories Udupi

You Might Also Like

Siddaramaiah 4
Bengaluru City

ಬೌರಿಂಗ್‌ ಆಸ್ಪತ್ರೆಯ ಗೋಡೆ ಕುಸಿದು 7 ಮಂದಿ ಸಾವು – ತಲಾ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ

Public TV
By Public TV
9 minutes ago
TVK Vijay
Latest

Axis my India Exit Poll Results | ತನ್ನ ಚೊಚ್ಚಲ ಚುನಾವಣೆಯಲ್ಲೇ ವಿಜಯ್‌ ಮ್ಯಾಜಿಕ್ – ದಳಪತಿಗೆ ಪಟ್ಟ!

Public TV
By Public TV
20 minutes ago
exit polls
Latest

Exit Polls 2026 Live: ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ‌

Public TV
By Public TV
21 minutes ago
NDA To Get Second Straight Term In Puducherry With 16 20 Of 30 Seats Exit Poll
Latest

Exit Polls – ಪುದುಚೇರಿಯಲ್ಲಿ ಮತ್ತೆ ಎನ್‌ಡಿಎ ಅಧಿಕಾರಕ್ಕೆ

Public TV
By Public TV
26 minutes ago
pm modi 5
Latest

Exit Poll| ಪಶ್ಚಿಮ ಬಂಗಾಳದಲ್ಲಿ ಫಸ್ಟ್‌ ಟೈಂ ಬಿಜೆಪಿ ಅಧಿಕಾರಕ್ಕೆ

Public TV
By Public TV
1 hour ago
MK Stalin Vijay
Latest

Exit Poll Results 2026 | ತಮಿಳುನಾಡಿನಲ್ಲಿ ಮತ್ತೆ ಡಿಎಂಕೆಗೆ ಪಟ್ಟಾಭಿಷೇಕ – ದಳಪತಿಯ ಟಿವಿಕೆಗೆ ಹೀನಾಯ ಸೋಲು

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?