ಟೆಹ್ರಾನ್: ಇರಾನ್‌ನ ಬಂದರು, ಮೂಲ ಸೌಕರ್ಯಗಳನ್ನ ಗುರಿಯಾಗಿಸಿ ಅಮೆರಿಕ ದಾಳಿ ನಡೆಸಿದ ಬೆನ್ನಲ್ಲೇ ಇರಾನ್ ಕೂಡ ಪ್ರತೀಕಾರಕ್ಕೆ ಮುಂದಾಗಿದೆ. ಬಹ್ರೇನ್‌ನಲ್ಲಿರುವ (Bahrain) ಅಮೆರಿಕದ 5ನೇ ನೌಕಾಪಡೆಯ ಪ್ರಧಾನ ಕಚೇರಿ ಹಾಗೂ ಕುವೈತ್‌ನಲ್ಲಿರುವ (Kuwait) ಅಮೆರಿಕದ ಮಿಲಿಟರಿ ನೆಲೆಗಳನ್ನ ಗುರಿಯಾಗಿಸಿಕೊಂಡು ಇರಾನ್ ದಾಳಿ ನಡೆಸಿದೆ.
US military base in Kuwait comes under Iranian strikes
Follow: https://t.co/mLGcUTS2ei pic.twitter.com/uLfcPqifEB
— Press TV 🔻 (@PressTV) July 9, 2026
ಅಮೆರಿಕ ದಾಳಿಗೆ ವಿನಾಶಕಾರಿ ರೀತಿಯಲ್ಲೇ ಪ್ರತಿಕ್ರಿಯೆ ನೀಡುವುದಾಗಿ ಇರಾನ್‌ನ ಕ್ರಾಂತಿಕಾರಿ ಪಡೆ ಪ್ರತಿಜ್ಞೆ ಮಾಡಿದ ಬಳಿಕ ದಾಳಿಗಳು ಸಂಭವಿಸಿದೆ.
ಇರಾನ್ ಮಿಸೈಲ್ ದಾಳಿ (Missile Strikes) ಬಳಿಕ ಬಹ್ರೇನ್‌ನ ಐದನೇ ನೌಕಾಪಡೆಯ ಪ್ರಧಾನ ಕಚೇರಿಯಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದೆ. ಜೊತೆಗೆ ಕುವೈತ್‌ನ ಮಿಲಿಟರಿ ನೆಲೆಗಳ ಇರಾನ್ ನಡೆಸಿದ ದಾಳಿಯ ದೃಶ್ಯಗಳನ್ನು ಇರಾನ್ ಮಾಧ್ಯಮಗಳು ಪ್ರಸಾರ ಮಾಡುವಾಗ ʻಅಮೆರಿಕನ್ ಭಯೋತ್ಪಾದಕರ ನೆಲೆʼ ಎಂದು ಉಲ್ಲೇಖಿಸಿವೆ.

ಬಹ್ರೇನ್‌ನ ರಾಜಧಾನಿ ಮನಾಮದಲ್ಲಿ ಸ್ಫೋಟದ ಶಬ್ದ ಕೇಳಿಬರುತ್ತಿಂತೆ ಅಧಿಕಾರಿಗಳು ಸೈರನ್ ಮೊಳಗಿಸಿ ದಾಳಿ ಬಗ್ಗೆ ಸಾರ್ವಜನಿಕರಿಗೆ ಎಚ್ಚರಿಕೆ ಕೊಟ್ಟಿದ್ದಾರೆ. ಜೊತೆಗೆ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನ ತಡೆಯಲು ಸನ್ನದ್ಧವಾಗಿವೆ ಎಂದು ಕುವೈತ್ ನಲ್ಲಿರೋ ಅಮೆರಿಕ ಪಡೆ ಹೇಳಿಕೊಂಡಿದೆ.
ಅಮೆರಿಕ ಸೇನೆಯಿಂದ ವಿನಾಶಕಾರಿ ದಾಳಿ
ಇದಕ್ಕೂ ಮುನ್ನ ಹಾರ್ಮುಜ್ ಜಲಸಂಧಿಯಲ್ಲಿ ತನ್ನ ಪಡೆಗಳಿಗೆ ಬೆದರಿಕೆಯೊಡ್ಡುವ ಇರಾನ್ ಸಾಮರ್ಥ್ಯವನ್ನು ಮತ್ತಷ್ಟು ಕುಗ್ಗಿಸಲು ಅಮೆರಿಕ ಸೇನೆಯು ಇರಾನ್ ವಿರುದ್ಧ ಹೊಸ ಅಮೆರಿಕ ಮಿಲಿಟರಿ ದಾಳಿ ಪ್ರಾರಂಭಿಸಿದೆ. ಬಂದರ್ ಅಬ್ಬಾಸ್ ಮತ್ತು ಸಿರಿಕ್ ಪ್ರದೇಶಗಳಲ್ಲಿ ಭಾರೀ ಸ್ಫೋಟದ ಸದ್ದು ಕೇಳಿಬಂದಿವೆ. ಇರಾನ್ ಮೇಲಿನ ದಾಳಿಯಲ್ಲಿ ಇಬ್ಬರು ಮೀನುಗಾರರೂ ಸಾವನ್ನಪ್ಪಿದ್ದಾರೆ ಎಂದು ಇರಾನ್ ಮಾಧ್ಯಮಗಳು ಖಚಿತಪಡಿಸಿವೆ.

ಚಾಬಹಾರ್ ಮತ್ತು ಕೊನಾರಕ್ ಬಳಿಯೂ ಜೋರಾಗಿ ಸ್ಫೋಟಗಳು ಕೇಳಿಬಂದಿದೆ, ಅಕ್ಕಾಲಾದಲ್ಲಿ ರೈಲ್ವೆ ಸೇತುವೆ ಸ್ಫೋಟಗೊಂಡಿದೆ. ದಾಳಿ ಬಳಿಕ ಚಾಬಹಾರ್‌ನ ಕೆಲವು ಭಾಗಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಶಾಹಿದ್ ಬೆಹೆಶ್ಟಿ ಬಂದರು, ಕಲಾಂತರಿ ಬಂದರು ಮತ್ತು ಸಮುದ್ರ ಸಂಚಾರ ನಿಯಂತ್ರಣ ಗೋಪುರಕ್ಕೂ ಹಾನಿಯನ್ನುಂಟಾಗಿದ್ದು, ಪ್ರತೀಕಾರಕ್ಕೆ ಇರಾನ್ ವಾಯು ರಕ್ಷಣಾ ವ್ಯವಸ್ಥೆಯನ್ನ ಸಕ್ರಿಯಗೊಳಿಸಿದೆ ಎನ್ನಲಾಗಿದೆ.
ಇರಾನ್‌ನ ಸರ್ಕಾರಿ ಮಾಧ್ಯಮಗಳ ವರದಿ ಪ್ರಕಾರ, ಅಬು ಮೂಸಾ ದ್ವೀಪದಲ್ಲಿ ಒಟ್ಟು 10 ಸ್ಫೋಟಗಳು ಸಂಭವಿಸಿವೆ. ಚಾಬಹಾರ್ ಮತ್ತು ಕೊನಾರಕ್‌ನಲ್ಲಿಯೂ ಹತ್ತು ಸ್ಫೋಟಗಳು ಸಂಭವಿಸಿವೆ. ಈ ವೇಳೆ ಅಗ್ನಿಜ್ವಾಲೆ ಮುಗಿಲೆತ್ತರಕ್ಕೆ ಚಿಮ್ಮುತ್ತಿರುವುದು ಕಂಡುಬಂದಿದೆ. ಈ ಫೋಟೋವನ್ನ ಖುದ್ದು ಅಮೆರಿಕ ಅದ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಟ್ರುತ್ ಸೋಷಿಯಲ್ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ.
