ಇಂತಿ ನಿನ್ನ ಪ್ರೀತಿಯ ಹುಡುಗಿ ಸೋನು ಗೌಡ ಅವರು ವಿಷ್ಣುವರ್ಧನ್ ಅವರ ಅಳಿಯ, ನಟ ಅನಿರುದ್ಧ ಅವರ ಮೊದಲ ಪತ್ನಿ ಎಂದು ಹೇಳುವ ಮೂಲಕ ‘ಜೊತೆ ಜೊತೆಯಲಿ’ ಧಾರಾವಾಹಿ ಹೊಸ ಟ್ವಿಸ್ಟ್ ಕೊಟ್ಟಿದೆ. ಹೀಗಾಗಿ ಕಿರುತೆರೆಯ ಪ್ರೇಕ್ಷಕರಿಗೆ ಕುತೂಹಲ ಹೆಚ್ಚಿದೆ. ಇದನ್ನೂ ಓದಿ : ದೂರದರ್ಶನದಲ್ಲಿ ಸಿಗ್ತಾರೆ ದಿಯಾ ಹೀರೋ
Advertisement
ನೀವು ಜೊತೆ ಜೊತೆಯಲಿ ಧಾರಾವಾಹಿಗಳ ವೀಕ್ಷಕರಾಗಿದ್ದಾರೆ. ಆ ಧಾರಾವಾಹಿಯಲ್ಲಿ ಪದೇ ಪದೇ ಪ್ರಸ್ತಾಪ ಆಗುತ್ತಿದ್ದ ಹೆಸರು ರಾಜನಂದಿನಿ ಅವರದ್ದು. ಈ ರಾಜನಂದಿನಿ ಯಾರು ಎಂದು ಹಲವು ತಿಂಗಳುಗಳಿಂದ ಪ್ರೇಕ್ಷಕರು ಎದುರು ನೋಡುತ್ತಿದ್ದಾರೆ. ಈಗ ಆ ರಾಜನಂದಿನಿಯ ಪಾತ್ರ ಎಂಟ್ರಿ ಆಗಿದೆ. ಆ ಪಾತ್ರವನ್ನೇ ನಟಿ ಸೋನು ಗೌಡ ನಿರ್ವಹಿಸುತ್ತಿದ್ದಾರೆ. ಇದನ್ನೂ ಓದಿ : ಸ್ಟಾರ್ ನಟನ ಮಗಳನ್ನೂ ಬಿಡಲಿಲ್ಲ ಕಾಸ್ಟಿಂಗ್ ಕೌಚ್ : ನೋವು ಹಂಚಿಕೊಂಡ ಮೋಹನ್ ಬಾಬು ಪುತ್ರಿ
Advertisement
Advertisement
ಈ ರಾಜನಂದಿನಿ ಬೇರೆ ಯಾರೂ ಅಲ್ಲ, ಆರ್ಯವರ್ಧನ್ (ಅನಿರುದ್ಧ) ಅವರ ಮೊದಲ ಪತ್ನಿಯಂತೆ. ಈ ದಾಂಪತ್ಯಗೀತೆ ಹೇಗೆ ಅಂತ್ಯ ಆಯಿತು ಎನ್ನುವ ಕುರಿತು ಇನ್ಮುಂದೆ ಕಥೆ ಸಾಗಬಹುದು. ಇದನ್ನೂ ಓದಿ : ಮದ್ವೆ ಸೀರೆ ವಾಪಸ್ಸು ಕೊಟ್ರಂತೆ ಸಮಂತಾ: ಮಳೆ ನಿಂತರು ಮಳೆ ಹನಿ ನಿಲ್ಲದು
Advertisement
ರಂಗಭೂಮಿ ಹಿನ್ನೆಲೆಯ ಸೋನು ಗೌಡ ಅವರಿಗೆ ಕಿರುತೆರೆಯಲ್ಲಿ ಸಾಕಷ್ಟು ಅವಕಾಶಗಳು ಇದ್ದರೂ, ಅವರು ಆಯ್ಕೆ ಮಾಡಿಕೊಂಡಿದ್ದು ಹಿರಿತೆರೆಯನ್ನು. ಸಹೋದರಿ ಕೂಡ ಕಿರುತೆರೆಯ ಫೇಮಸ್ ನಟಿ. ಆದರೂ, ಸೋನು ಸಿನಿಮಾ ರಂಗ ಬಿಡಲಿಲ್ಲ. ಈಗ ಡಿಢೀರ್ ಅಂತ ಕಿರುತೆರೆಗೆ ಎಂಟ್ರಿ ಕೊಟ್ಟು ಅಚ್ಚರಿ ಮೂಡಿಸಿದ್ದಾರೆ. ಇದನ್ನೂ ಓದಿ : ಡಾ.ರಾಜ್ ಹುಟ್ಟಿದ ಊರಲ್ಲಿ ಫಸ್ಟ್ ಟೈಮ್ ಸಿನಿಮಾ ಮುಹೂರ್ತ
ಕನ್ನಡದಲ್ಲಿ ಮಾತ್ರವಲ್ಲ, ಮಲಯಾಳಂನಲ್ಲೂ ಸೋನು ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಏಳು ವರ್ಷಗಳ ಹಿಂದೆಯೇ ಮುಮ್ಮುಟಿ ಜತೆ ತೆರೆ ಹಂಚಿಕೊಂಡ ಹೆಗ್ಗಳಿಕೆ ಇವರದ್ದು. ಮೊದಲ ಸಿನಿಮಾದಲ್ಲೇ ಅತ್ಯುತ್ತಮ ನಟಿ ಪ್ರಶಸ್ತಿಗೂ ಕೂಡ ಕಾರಣರಾಗಿದ್ದರು. ಈಗ ಕಿರುತೆರೆಗೆ ಪ್ರವೇಶ ಮಾಡಿದ್ದಾರೆ. ಇಲ್ಲಿನ ಪ್ರೇಕ್ಷಕರು ಸೋನು ಅವರನ್ನು ಹೇಗೆ ಸ್ವೀಕರಿಸುತ್ತಾರೋ ಕಾದು ನೋಡಬೇಕು.