ತಮಿಳು ಸಿನಿಮಾ ರಂಗದಲ್ಲಿ ಹಾರರ್ ಚಿತ್ರಗಳಿಗೆ ಹೆಸರು ಮಾಡಿರುವ ನಿರ್ದೇಶಕ ಮಸ್ಕಿನ್ (Maskin), ಇದೀಗ ಮತ್ತೊಂದು ಸಿನಿಮಾ ಮಾಡಿದ್ದಾರೆ. 2014ರಲ್ಲಿ ಅವರದ್ದೇ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಪಿಸಾಸು ಸಿನಿಮಾದ ಮುಂದುವರೆದ ಭಾಗವನ್ನು ಚಿತ್ರ ಮಾಡಿದ್ದಾರೆ. ಈಗಾಗಲೇ ಸಿನಿಮಾಗೆ ಸೆನ್ಸಾರ್ ಕೂಡ ಆಗಿದೆ. ಈ ಸಿನಿಮಾಗೆ ‘ಪಿಸಾಸು 2’ (Pisasu 2) ಎಂದು ಹೆಸರಿಡಲಾಗಿದೆ.
Advertisement
ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ಆಂಡ್ರಿಯಾ ಜರೆಮಿಯ (Andrea Jeremiah) ನಿರ್ವಹಿಸಿದ್ದಾರೆ. ಹಾಟ್ ಹಾಟ್ ಚಿತ್ರಗಳ ಮೂಲಕವೇ ಗುರುತಿಸಿಕೊಂಡಿರುವ ಆಂಡ್ರಿಯಾ ಪಿಸಾಸು 2 ಸಿನಿಮಾದಲ್ಲಿ ಬೆತ್ತಲೆಯಾಗಿ ಕಾಣಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಬರೋಬ್ಬರಿ 15 ನಿಮಿಷಗಳ ಕಾಲ ಬೆತ್ತಲೆ ದೃಶ್ಯವೊಂದಿದೆ (Nude Scene) ಎಂದು ಸುದ್ದಿಯಾಗಿದೆ. ಆ ದೃಶ್ಯವನ್ನು ಸೆನ್ಸಾರ್ (Censor) ಮಂಡಳಿ ಕಿತ್ತು ಹಾಕಿದೆ ಎಂದೂ ಹೇಳಲಾಗುತ್ತಿದೆ.
Advertisement
Advertisement
ಈ ಕುರಿತು ಸ್ಪಷ್ಟನೆ ನೀಡಿರುವ ಮಸ್ಕಿನ್, ಸುದ್ದಿಯಾದಂತೆ ನನ್ನ ಸಿನಿಮಾದಲ್ಲಿ ಯಾವುದೇ ಅಶ್ಲೀಲ ದೃಶ್ಯವಿಲ್ಲ. ಆಂಡ್ರಿಯಾ ಅವರನ್ನು ಬೆತ್ತಲೆಯಾಗಿ ತೋರಿಸಿಲ್ಲ. ಶೃಂಗಾರ ಸೂಸುವಂತಹ ಕೆಲವು ದೃಶ್ಯಗಳು ಇವೆ. ಹಾಗಂತ ಸೆನ್ಸಾರ್ ಮಂಡಳಿಯವರು ಯಾವುದೇ ದೃಶ್ಯವನ್ನು ತೆಗೆಯುವಂತೆ ನನಗೆ ಸೂಚಿಸಿಲ್ಲ. ಒಂದು ಡೈಲಾಗ್ ಕೂಡ ಮ್ಯೂಟ್ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
Advertisement
ಇದರ ಜೊತೆಗೆ ಕೆಲವೇ ಕೆಲವು ದೃಶ್ಯಗಳಲ್ಲಿ ಆಂಡ್ರಿಯಾ ಬೆತ್ತಲೆಯಾಗಿ ಕಾಣಿಸಿಕೊಳ್ಳುತ್ತಾರೆ ನಿಜ. ಅವರ ಅನುಮತಿಯನ್ನು ಪಡೆದುಕೊಂಡೇ ಆ ದೃಶ್ಯಗಳನ್ನು ಸೆರೆ ಹಿಡಿಯಲಾಗಿದೆ ಎಂದು ಮಸ್ಕಿನ್ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ.
Web Stories