– ನಿಮ್ಮ ಪಕ್ಷದ ಶಾಸಕರ ಬಗ್ಗೆ ಯಾಕೆ ನಿಗಾ ವಹಿಸಿಲ್ಲ?
– ಅಡ್ಡ ಮತದಾನ ಮಾಡಿದವರ ಪತ್ತೆಗೆ ಸೂಚನೆ
ಬೆಂಗಳೂರು: ಪರಿಷತ್ ಚುನಾವಣೆಯಲ್ಲಿ(MLC Election) ಅಡ್ಡ ಮತದಾನ (Cross Vote) ಮಾಡಿದವರ ವಿರುದ್ಧ ಕೇಂದ್ರ ಗೃಹಸಚಿವ ಅಮಿತ್ ಶಾ (Amit Shah) ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಕೇಂದ್ರ ಸಚಿವ ಕುಮಾರಸ್ವಾಮಿಯವರ (H.D Kumaraswamy) ಜೊತೆ ಅವರು ಕರೆ ಮಾಡಿ ಮಾತುಕತೆ ನಡೆಸಿದ್ದಾರೆ.

ಜೆಡಿಎಸ್ ಅಭ್ಯರ್ಥಿಗೆ ಅಡ್ಡ ಮತದಾನ ಮಾಡಿರುವುದನ್ನು ನಾವು ಯಾವುದೇ ಕಾರಣಕ್ಕೂ ಸಹಿಸೋದಿಲ್ಲ. ನಾನು ಈಗಾಗಲೇ ರಾಜ್ಯ ಬಿಜೆಪಿ ನಾಯಕರ ಜೊತೆ ಈ ಬಗ್ಗೆ ಚರ್ಚಿಸಿದ್ದೇನೆ. ಅಡ್ಡ ಮತದಾನ ಮಾಡುವವರನ್ನು ಪತ್ತೆ ಹಚ್ಚಲು ಸೂಚನೆ ಕೊಟ್ಟಿದ್ದೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹೆಚ್‌ಡಿಕೆಗೆ 18 ಶಾಸಕರನ್ನು ವಿಶ್ವಾಸದಲ್ಲಿ ಇಟ್ಟುಕೊಳ್ಳೋಕೆ ಆಗ್ಲಿಲ್ಲ – ಮಾಗಡಿ ಬಾಲಕೃಷ್ಣ ಟಾಂಗ್
ಪತ್ತೆ ಹಚ್ಚಬೇಕಾದ ದಾರಿಗಳ ಬಗ್ಗೆಯೂ ಚರ್ಚೆ ಮಾಡಿದ್ದೇನೆ. ಅದಕ್ಕೆ ಎಂದು ಪ್ರತ್ಯೇಕ ದಾರಿಗಳಿವೆ. ಬಿಜೆಪಿಯಲ್ಲಿ ಅಡ್ಡ ಮತದಾನ ಮಾಡಿದವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಆದರೆ ನಿಮ್ಮ ಪಕ್ಷದ ಶಾಸಕರ ಬಗ್ಗೆ ನೀವು ಯಾಕೆ ನಿಗಾ ವಹಿಸಿಲ್ಲ? ಈ ರೀತಿ ಆಗುವವರೆಗೆ ಯಾಕೆ ಬಿಟ್ಟುಕೊಂಡಿರಿ? ಆದಷ್ಟು ಬೇಗ ಅಸಮಾಧಾನಿತ ಶಾಸಕರ ಪತ್ತೆ ಮಾಡುವಂತೆ ಸೂಚಿಸಿದ್ದಾರೆ.
ಈ ಫಲಿತಾಂಶದಿಂದ ಮೈತ್ರಿಯಲ್ಲಿ ಬಿರುಕು ಮೂಡಬಾರದು. ಒಂದು ಪರಿಷತ್ ಸ್ಥಾನದ ಕಾರಣದಿಂದ ಮೈತ್ರಿಯಲ್ಲಿ ಗೊಂದಲ ಆಗಬಾರದು. ತಪ್ಪು ಮಾಡಿದವರನ್ನು ಆದಷ್ಟು ಬೇಗ ಗುರುತಿಸಿ ಕ್ರಮ ತೆಗದುಕೊಳ್ಳಿ ಎಂದು ಹೆಚ್‌ಡಿಕೆಗೆ ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಅಡ್ಡ ಮತದಾನ ಮಾಡಿದ ‘ಮೀರ್ ಸಾದಿಕ್’ಗಳಿಗೆ ಕ್ಷಮೆ ಇಲ್ಲ: ವಿಜಯೇಂದ್ರ ಆಕ್ರೋಶ
