ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ಮತ್ತೆ ಸಂಘರ್ಷ ಶುರುವಾಗಿದೆ. ಅಮೇರಿಕ ಮತ್ತು ಇರಾನ್ (US Iran War) ಮತ್ತೊಮ್ಮೆ ಮುಖಾಮುಖಿಯಾಗಿವೆ. ಕದನ ವಿರಾಮದ ಬಳಿಕವೂ ಹಾರ್ಮುಜ್ ಜಲಸಂಧಿಯ (Strait of Hormuz) ಮೇಲಿನ ನಿಯಂತ್ರಣಕ್ಕಾಗಿ ಎರಡು ದೇಶಗಳು ಯುದ್ಧಕ್ಕಿಳಿದಿವೆ.
ಕದನ ವಿರಾಮ ಮುರಿದು ಬಿದ್ದಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ ಬೆನ್ನಲೆ ಇರಾನ್‌ನ 90 ಸ್ಥಳಗಳನ್ನು ಗುರಿಯಾಗಿಸಿ ಅಮೇರಿಕ ದಾಳಿ ಮಾಡಿದೆ. ಹಾರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳ ಸಂಚಾರ ಹಾಗೂ ವಾಣಿಜ್ಯ ಹಡಗುಗಳ ಸಿಬ್ಬಂದಿಗಳ ಮೇಲೆ ದಾಳಿ ನಡೆಸುವ ಇರಾನ್‌ನ ಸಾಮರ್ಥ್ಯ ಕುಗ್ಗಿಸಲು ಅಮೆರಿಕ ಮುಂದಾಗಿದೆ. ಈ ಉದ್ದೇಶದಿಂದ ಬಂದರು ನಗರಗಳಾದ ಬುಶೆಹರ್, ಬಂದರ್ ಅಬ್ಬಾಸ್, ಸಿರಿಕ್‌ನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಇದನ್ನೂ ಓದಿ: ಅಮೆರಿಕ-ಇಸ್ರೇಲ್ ದಾಳಿಯಲ್ಲಿ ಧ್ವಂಸಗೊಂಡ ಖಮೇನಿ ನಿವಾಸದ ಫಸ್ಟ್ ವಿಡಿಯೋ ರಿಲೀಸ್
ಈ ಬಗ್ಗೆ ಅಮೇರಿಕದ CENTCOM ಮಾಹಿತಿ ಬಿಡುಗಡೆ ಮಾಡಿದೆ. ಅದರಂತೆ ಅಮೆರಿಕ (America) ಪಡೆಗಳು ಇರಾನ್‌ನ ಸುಮಾರು 90 ಮಿಲಿಟರಿ ನೆಲೆಗಳ ಮೇಲೆ ದಾಳಿ ನಡೆಸಿವೆ. ವಾಯು ರಕ್ಷಣಾ ವ್ಯವಸ್ಥೆಗಳು, ಕರಾವಳಿ ಕಣ್ಗಾವಲು ವ್ಯವಸ್ಥೆಗಳು, ಕ್ಷಿಪಣಿ ಹಾಗೂ ಡ್ರೋನ್ ಸಂಗ್ರಹಣಾ ತಾಣಗಳು, ನೌಕಾಪಡೆಯ ಸಾಮರ್ಥ್ಯಗಳಿಗೆ ಸಂಬಂಧಿಸಿದ ಸೌಲಭ್ಯಗಳು ಮತ್ತು ಇರಾನ್‌ನ ಕರಾವಳಿಯುದ್ದಕ್ಕೂ ಇರುವ ಮಿಲಿಟರಿ ಲಾಜಿಸ್ಟಿಕ್ಸ್ ಮೂಲಸೌಕರ್ಯಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ.
ಅಮೇರಿಕ ದಾಳಿಗೆ ಇರಾನ್ ಪ್ರತಿಕಾರ
ಅಮೇರಿಕದ ದಾಳಿಗಳ ಬೆನ್ನಲ್ಲೇ ಇರಾನ್ ಪ್ರತಿಕಾರದ ದಾಳಿ ನಡೆಸಿದೆ. ಕುವೈತ್ ಮತ್ತು ಬಹ್ರೇನ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳನ್ನು ಗುರಿಯಾಗಿಸಿ ಕ್ಷಿಪಣಿ ಹಾಗೂ ಡ್ರೋನ್ ದಾಳಿ ನಡೆಸಿದೆ. ಅಮೆರಿಕ ಇತ್ತೀಚೆಗೆ ಇರಾನ್ ಮೇಲೆ ನಡೆಸಿದ ದಾಳಿಗಳಿಗೆ ಪ್ರತಿಯಾಗಿ, ಮೊದಲ ಹಂತದ ಭಾಗವಾಗಿ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಐಆರ್‌ಜಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಕುವೈತ್‌ನ ಕ್ಯಾಂಪ್ ಅರಿಫ್ಜಾನ್ ಸೇನಾ ನೆಲೆ ಮತ್ತು ಅಲಿ ಅಲ್ ಸಲೇಮ್ ವಾಯುನೆಲೆ, ಬಹ್ರೇನ್‌ನ ಜುಫೈರ್ ನೌಕಾನೆಲೆ ಹಾಗೂ ಶೇಖ್ ಈಸಾ ವಾಯುನೆಲೆಯನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ.
ಒಮ್ಮೆ ಹೊಡೆದ್ರೆ ನಾವು 20 ಬಾರಿ ಹೊಡೆಯುತ್ತೇವೆ – ಟ್ರಂಪ್ ಗುಡುಗು
ಸಂಘರ್ಷದ ಬಗ್ಗೆ ಮಾತನಾಡಿರುವ ಅಮೇರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪ್ರತಿ ಬಾರಿ ದಾಳಿ ಮಾಡಿದಾಗಲೂ ನಾವು 20 ಬಾರಿ ಬಲವಾಗಿ ಹೊಡೆಯುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇರಾನ್ ಒಪ್ಪಂದ ಮಾಡಿಕೊಳ್ಳಲು ಪ್ರಯತ್ನಿಸುತ್ತಿದೆ. ಅವರು ಸ್ವಲ್ಪ ಸಮಯದ ಹಿಂದೆ ಕರೆ ಮಾಡಿದ್ದರು. ಅವರು ಒಪ್ಪಂದ ಮಾಡಿಕೊಳ್ಳಲು ಅರ್ಹರೋ ಅಲ್ಲವೂ ಗೊತ್ತಿಲ್ಲ. ಭವಿಷ್ಯದ ಒಪ್ಪಂದ ಗೌರವಿಸುತ್ತಾರೋ ಇಲ್ಲವೋ ಗೊತ್ತಿಲ್ಲ. ಹೇಳಬೇಕು ಎಂದರೆ ಅವರು ಹುಚ್ಚರು ಎಂದು ಕುಟುಕಿದ್ದಾರೆ.
ಟ್ರಂಪ್ ಹೇಳಿಕೆ ನಿರಾಕರಿಸಿದ ಇರಾನ್
ಕದನ ವಿರಾಮಕ್ಕೆ ಇರಾನ್ ದೂರವಾಣಿ ಕರೆ ಮಾಡಿತ್ತು ಎಂಬ ಹೇಳಿಕೆಯನ್ನು ತಳ್ಳಿ ಹಾಕಿರುವ ಇರಾನ್, ಅಮೇರಿಕದ ಮೇಲೆ ನಾವು ಎಂದಿಗೂ ನಂಬಿಕೆ ಇರಿಸಿಲ್ಲ ಎಂದು ಹೇಳಿದೆ. ಈ ಬಗ್ಗೆ ಮಾತನಾಡಿರುವ ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಎಸ್ಮಾಯಿಲ್ ಬಘೈ, ಅಮೇರಿಕಾದ ಮೇಲೆ ನಾವು ಎಂದಿಗೂ ನಂಬಿಕೆ ಇರಿಸಿಲ್ಲ ಭರವಸೆಗೆ ಭರವಸೆ ಎನ್ನುವ ತತ್ವದಲ್ಲಿ ಒಪ್ಪಂದವಾಗಿತ್ತು ಏಕಪಕ್ಷೀಯವಾಗಿ ದಾಳಿ ಮಾಡುವ ಮೂಲಕ ಒಪ್ಪಂದ ಉಲ್ಲಂಘಿಸಿದೆ ಅಲ್ಹಾನು ದ್ರೋಹ ಮಾಡುವವರನ್ನು ಇಷ್ಟಪಡುವುದಿಲ್ಲ ಇರಾನ್ ತನ್ನ ಸಾರ್ವಭೌಮತ್ವವನ್ನು ಉಳಿಸಿಕೊಳ್ಳಲು ಶಕ್ತವಾಗಿದೆ ಎಂದಿದ್ದಾರೆ.
ಅಮೆರಿಕ ದಾಳಿಗೆ ನಾಲ್ವರು ಬಲಿ
ಅಮೇರಿಕ ದಾಳಿಯಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಅಹ್ವಾಜ್ ನಗರದ ಹೊರವಲಯದಲ್ಲಿ ನಡೆಸಿದ ದಾಳಿಯಲ್ಲಿ ಮೂವರು ಸಾವನ್ನಪ್ಪಿ ಹಲವರು ಗಾಯಗೊಂಡಿದ್ದಾರೆ ಎಂದು ಖುಜೆಸ್ತಾನ ಭದ್ರತೆ ಮತ್ತು ಕಾನೂನು ಸುವ್ಯವಸ್ಥೆಯ ಗರ್ವನರ್ ವಲಿಯೋಲ್ಲಾ ಹಯಾತಿ ಹೇಳಿದ್ದಾರೆ. ಇರಾನ್ ಶಾ ವಿಮಾನ ನಿಲ್ದಾಣದಲ್ಲಿ ಅಗ್ನಿಶಾಮಕ ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದಾರೆ. ಎಂದು ವರದಿಯಾಗಿದೆ.
ಕತಾರ್ ನೀಡಿದ ವಿಮಾನ ಕೈ ಬಿಟ್ಟ ಟ್ರಂಪ್
ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಏರ್ಪಟ್ಟ ಬೆನ್ನಲೆ ಕತಾರ್ ನೀಡಿದ ವಿಮಾನವನ್ನು ಡೊನಾಲ್ಡ್ ಟ್ರಂಪ್ (Donald Trump) ಕೈ ಬಿಟ್ಟಿದ್ದಾರೆ. ಟರ್ಕಿಯಲ್ಲಿ ನಡೆದ ನ್ಯಾಟೋ ಶೃಂಗಸಭೆಯಿಂದ ಹೊರಡಲು ಕತಾರ್ ನೀಡಿದ ಬೊಯಿಂಗ್ 747-800 ವಿಮಾನವನ್ನು ಅವರು ಬಳಕೆ ಮಾಡಿಲ್ಲ. ಭದ್ರತಾ ಕಾರಣಗಳಿಂದಾಗಿ ಹಳೆಯ ಏರ್ಪೋಸ್ ಒನ್ ವಿಮಾನ ಬಳಕೆ ಮಾಡಿದ್ದಾರೆ.

ಹಾರ್ಮುಜ್ ಬಳಿ ಭಾರತದ 9 ಹಡಗುಗಳು
ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಉದ್ವಿಗ್ನತೆಯ ನಡುವೆಯೂ ಒಂಬತ್ತು ಭಾರತೀಯ ಹಡಗುಗಳು ಇನ್ನೂ ಹಾರ್ಮುಜ್ ಜಲಸಂಧಿಯಲ್ಲಿವೆ. ಒಟ್ಟು 198 ಭಾರತೀಯ ನಾವಿಕರು ಈ ಹಡಗುಗಳಲ್ಲಿದ್ದಾರೆ. ಸರ್ಕಾರದ ಮಾಹಿತಿ ಪ್ರಕಾರ, ಎಲ್ಲಾ ಭಾರತೀಯ ಹಡಗುಗಳು ಸಂಪೂರ್ಣವಾಗಿ ಸುರಕ್ಷಿತವಾಗಿವೆ. ಯಾವುದೇ ಹಡಗಿನ ಮೇಲೆ ದಾಳಿ ನಡೆದಿಲ್ಲ. ಫೆಬ್ರವರಿ 28 ರಂದು ಪಶ್ಚಿಮ ಏಷ್ಯಾ ಸಂಘರ್ಷ ಪ್ರಾರಂಭವಾದಾಗಿನಿಂದ ಭಾರತಕ್ಕೆ ಸರಕು ಸಾಗಿಸುವ 50 ಭಾರತೀಯ ಮತ್ತು ವಿದೇಶಿ ಧ್ವಜ ಹೊಂದಿರುವ ಹಡಗುಗಳು ಹಾರ್ಮುಜ್ ಜಲಸಂಧಿಯ ಮೂಲಕ ಸುರಕ್ಷಿತವಾಗಿ ಹಾದು ಹೋಗಿವೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಅಮೆರಿಕ ವಿರುದ್ಧ ಇರಾನ್ ಪ್ರತೀಕಾರ – ಬಹ್ರೇನ್ ನೌಕಾಪಡೆಯ ಪ್ರಧಾನ ಕಚೇರಿ, ಕುವೈತ್‌ನ ಮಿಲಿಟರಿ ನೆಲೆಗಳ ಮೇಲೆ ದಾಳಿ
