– ಖಮೇನಿ ಅಂತ್ಯಕ್ರಿಯೆ ಹೊತ್ತಿನಲ್ಲೇ ವಿಡಿಯೋ ಪ್ರಕಟಿಸಿದ ಇರಾನ್
ಟೆಹ್ರಾನ್: ಫೆ.28 ರಂದು ನಡೆದ ಅಮೆರಿಕ-ಇಸ್ರೇಲ್ ನಡೆಸಿದ ಜಂಟಿ ದಾಳಿಯಲ್ಲಿ ಹತ್ಯೆಯಾದ ಆಯತೊಲ್ಲಾ ಅಲಿ ಖಮೇನಿ (Ayatollah Ali Khamenei) ಅವರ ನಿವಾಸ ಧ್ವಂಸಗೊಂಡಿರುವ ಮೊದಲ ವಿಡಿಯೋ ತುಣುಕನ್ನು ಇರಾನ್ ರಿಲೀಸ್ ಮಾಡಿದೆ. ಇರಾನ್‌ನ ಸರ್ಕಾರಿ ಮಾಧ್ಯಮಗಳು ವಿಡಿಯೋವನ್ನ ಬಿಡುಗಡೆ ಮಾಡಿವೆ.
Iranian state media on Wednesday broadcast footage of the Hosseiniyeh Imam Khomeini, the hall inside the supreme leader’s Tehran compound that was struck in the February 28 US attack in which Ali Khamenei was killed. The building had served as the main venue for Khamenei’s public… pic.twitter.com/u96hcJRDjM
— Iran International English (@IranIntl_En) July 8, 2026
ಫಸ್ಟ್ ವಿಡಿಯೋ
ಇರಾನ್‌ನ ಸರ್ಕಾರಿ ಮಾಧ್ಯಮ (Iran Government Media) ಹಾಗೂ ಖಮೇನಿ ಅವರ ಅಧಿಕೃತ ವೆಬ್‌ಸೈಟ್‌ನಲ್ಲಿ ರಿಲೀಸ್ ಆಗಿರುವ 35 ಸೆಕೆಂಡುಗಳ ವಿಡಿಯೋ, ದಾಳಿಯ ಭೀಕರತೆಯನ್ನು ಬಿಚ್ಚಿಟ್ಟಿದೆ. ಸುಪ್ರೀಂ ನಾಯಕನ ಮನೆಯ ಕಾಂಪೌಂಡ್‌ನೊಳಗಿನ ಮುಖ್ಯ ಸಭಾಂಗಣವಾದ ʻಇಮಾಮ್ ಖಮೇನಿ ಹುಸೇನಿಯಾʼ (Imam Khomeini Hussainiya) ಸಂಪೂರ್ಣ ಧ್ವಂಸವಾಗಿದೆ. ಅಲ್ಲಿ ಶಿಲೆಗಳ ರಾಶಿಯೇ ಕೂಡಿದ್ದು, ದಾಳಿಯ ಭೀಕರತೆಯನ್ನು ಬಿಚ್ಚಿಟ್ಟಿದೆ.

ಹೆಸರುವಾಸಿಯಾಗಿದ್ದ ʻಇಮಾಮ್ ಖಮೇನಿ ಹುಸೇನಿಯಾʼ
ಧ್ವಂಸಗೊಂಡಿರುವ ʻಇಮಾಮ್ ಖಮೇನಿ ಹುಸೇನಿಯಾʼ ಮುಖ್ಯ ಸಭಾಂಗಣವು ಅಲಿ ಖಮೇನಿ ಆಳ್ವಿಕೆ ಕಾಲದುದ್ದಕ್ಕೂ ಹೆಸರುವಾಸಿಯಾಗಿತ್ತು. ಸಾರ್ವಜನಿಕ ಭಾಷಣಗಳು, ಧಾರ್ಮಿಕ ಸಭೆಗಳಿಗೆ ಈ ಸಭಾಂಗಣವು ಹಿಂದಿನಿಂದಲೂ ಮುಖ್ಯ ಸ್ಥಳವಾಗಿತ್ತು.
ಅಮೆರಿಕ ಇಸ್ರೇಲ್ ನಡೆಸಿದ ದಾಳಿಯಲ್ಲಿ ಖಮೇನಿ 86 ವರ್ಷದ ಖಮೇನಿ ಹತ್ಯೆಗೀಡಾದರು. ಇದೇ ವೇಳೆ 14 ತಿಂಗಳ ಮೊಮ್ಮಗಳು ಸೇರಿ ಖಮೇನಿ ಕುಟುಂಬದ ಹಲವು ಸದಸ್ಯರು ಸಮಾಧಿಯಾದರು. ಅವರ ಮಗನೂ ಆಗಿರುವ ಈಗಿನ ಸರ್ವೋಚ್ಚ ನಾಯಕ ಮೊಜ್ತಬಾ ಅಲಿ ಖಮೇನಿ ಕೂಡ ದಾಳಿಯಲ್ಲಿ ಗಾಯಗೊಂಡಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.

ಇಂದು ಖಮೇನಿ ಅಂತ್ಯಕ್ರಿಯೆ
ಫೆಬ್ರವರಿ 28ರಂದು ಯುಎಸ್-ಇಸ್ರೇಲ್ ವೈಮಾನಿಕ ದಾಳಿಗೆ ಬಲಿಯಾಗಿದ್ದ ಇರಾನ್ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅಂತ್ಯಕ್ರಿಯೆ (Khameneis Funeral) ಇಂದು ಅವರ ತವರು ಮಷಾದ್‌ನಲ್ಲಿರೋ ಇಮಾನ್ ರೆಜಾ ದೇಗುಲದ ಪಕ್ಕದಲ್ಲಿ ನಡೆಯುತ್ತಿದೆ. ದೈತ್ಯ ನಾಯಕನನ್ನ ಗೌರವಪೂರ್ವಕವಾಗಿ ಕಳುಹಿಸಿಕೊಡಲು ಅಲಿ ಖಮೇನಿ ಅವತ ಪಾರ್ಥಿವ ಶರೀರವನ್ನು ಬರೋಬ್ಬರಿ 4 ತಿಂಗಳುಗಳ ಕಾಲ ಸಂರಕ್ಷಿಸಿ ಇಡಲಾಗಿತ್ತು.
