Tuesday, 21st May 2019

Recent News

ಲೋಕಸಮರದ ಹೊತ್ತಲ್ಲಿ ಮೋದಿ ಇಂಟರ್‌ವ್ಯೂ- ರಾಜಕೀಯೇತರ ಮಾತು ಎಂದ ನಟ ಅಕ್ಷಯ್ ಕುಮಾರ್

ಮುಂಬೈ: ಬಾಲಿವುಡ್ ಕಿಲಾಡಿ ನಟ ಅಕ್ಷಯ್ ಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಂದರ್ಶನ ಮಾಡಿದ್ದಾರೆ.

ಈ ಬಗ್ಗೆ ನಟ ಅಕ್ಷಯ್ ಕುಮಾರ್ ಟ್ವೀಟ್ ಮಾಡಿ, “ಇಡೀ ದೇಶ ಚುನಾವಣೆ ಹಾಗೂ ರಾಜಕೀಯದ ಬಗ್ಗೆ ಮಾತನಾಡುತ್ತಿದೆ. ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ರಾಜಕೀಯ ವಿಷಯ ಚರ್ಚೆ ಮಾಡದೆ ಕೇವಲ ವೈಯಕ್ತಿಕ ಜೀವನದ ಬಗ್ಗೆ ಚರ್ಚಿಸಲಾಗಿದೆ” ಎಂದು ಬರೆದುಕೊಂಡಿದ್ದಾರೆ. ಈ ಟ್ವೀಟ್ ಜೊತೆಗೆ ಮೋದಿ ಕುಟುಂಬ ಮತ್ತಿತರ ವಿಷಯಗಳ ಬಗ್ಗೆ ಚರ್ಚಿಸುವ 2 ಸಣ್ಣ ತುಣುಕನ್ನು ಶೇರ್ ಮಾಡಿದ್ದಾರೆ.

ಮತ್ತೊಂದು ಟ್ವೀಟ್‍ನಲ್ಲಿ ನಟ ಅಕ್ಷಯ್ ಕುಮಾರ್, ಚುನಾವಣೆ ಪ್ರಚಾರದಲ್ಲೂ ಪ್ರಧಾನಿ ಮೋದಿ ಅವರು ನಗುವುದನ್ನು ನೋಡಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ನನಗೆ ಪ್ರಧಾನಿ ಮೋದಿ ಅವರನ್ನು ಸಂದರ್ಶನ ಮಾಡುವ ಅವಕಾಶ ಸಿಕ್ಕಿದೆ. ರಾಜಕೀಯ ವಿಷಯ ಚರ್ಚೆ ಮಾಡದೆ ಕೇವಲ ವೈಯಕ್ತಿಕ ವಿಷಯ ಚರ್ಚೆ ಮಾಡಲಾಗಿದೆ. ನೀವು ಕೂಡ ಇದನ್ನು ವೀಕ್ಷಿಸಿ ಎಂದು ನಟ ಅಕ್ಷಯ್ ಕುಮಾರ್ ತಿಳಿಸಿದ್ದಾರೆ.

ಅಕ್ಷಯ್ ಕುಮಾರ್ ಟ್ವೀಟ್ ಗೆ ಪ್ರಧಾನಿ ಮೋದಿ ಅವರು ರೀ-ಟ್ವೀಟ್ ಮಾಡಿದ್ದಾರೆ. ಮೋದಿ ತಮ್ಮ ಟ್ವಿಟ್ಟರಿನಲ್ಲಿ “ಪ್ರೀತಿಯ ಅಕ್ಷಯ್ ಕುಮಾರ್, ನಿಮ್ಮ ಜೊತೆ ರಾಜಕೀಯ ಹಾಗೂ ಚುನಾವಣೆ ವಿಷಯ ಹೊರತುಪಡಿಸಿ ಎಲ್ಲ ವಿಷಯ ಮಾತನಾಡಿದ್ದೇನೆ. ನಿಮ್ಮೊಂದಿಗೆ ರಾಜಕೀಯೇತರ ವಿಷಯಗಳ ಬಗ್ಗೆ ಚರ್ಚಿಸಿ ಸಂತಸವಾಗಿದೆ. ನಮ್ಮಿಬ್ಬರ ಸಂಭಾಷಣೆ ಜನರಿಗೂ ಇಷ್ಟವಾಗುತ್ತೆ ಎಂದು ಭಾವಿಸಿದ್ದೇನೆ ಎಂದು ರೀ-ಟ್ವೀಟ್ ಮಾಡಿದ್ದಾರೆ. ಅಕ್ಷಯ್ ಕುಮಾರ್ ಹಾಗೂ ಮೋದಿ ಅವರ ಸಂದರ್ಶನ ಇಂದು ಬೆಳಗ್ಗೆ ಪ್ರಸಾರವಾಗುತ್ತಿದೆ.

Leave a Reply

Your email address will not be published. Required fields are marked *