CrimeDistrictsKarnatakaLatestMain Post

ವರ, ಅತ್ತೆ ಮನೆಯವರನ್ನು ಕೂಡಿ ಹಾಕಿ ರಾತ್ರೋರಾತ್ರಿ ಚಿನ್ನಾಭರಣ ಜೊತೆ ವಧು ಎಸ್ಕೇಪ್

ಲಕ್ನೋ: ವರ ಮತ್ತು ಅತ್ತೆ ಮನೆಯವರನ್ನು ಮನೆಯೊಳಗೆ ಕೂಡಿ ಹಾಕಿ ಚಿನ್ನಾಭರಣ ದೋಚಿಕೊಂಡು ವಧು ರಾತ್ರೋ, ರಾತ್ರಿ ಪರಾರಿಯಾಗಿರುವ ಘಟನೆ ಆಗ್ರಾದಲ್ಲಿ ನಡೆದಿದೆ.

ಏಪ್ರಿಲ್ 25ರಂದು ಆಗ್ರಾದ ಶಾಹಗಂಜ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಮದುವೆಯಾಗಿ ಅತ್ತೆ ಮನೆಗೆ ಬಂದ ಕೇವಲ 10 ಗಂಟೆಗಳಲ್ಲೇ ವಧು ಚಿನ್ನಾಭರಣ ದೋಚಿ ಎಸ್ಕೇಪ್ ಆಗಿದ್ದಾಳೆ. ಇದನ್ನೂ ಓದಿ: ಕಾತುವಕುಲಾ ರೆಂಡು ಕಾದಲ್’ ರಿಲೀಸ್: ತಿರುಪತಿ ಆಶೀರ್ವಾದ ಪಡೆದ ನಯನತಾರಾ, ವಿಘ್ನೇಶ್ ಶಿವನ್

ಬೆಳ್ಳಿ ಕುಶಲಕರ್ಮಿಕನಾಗಿದ್ದ ಯುವಕ ವಧುವನ್ನು ಹುಡುಕುತ್ತಿದ್ದರು. ಇದೇ ವೇಳೆ ತಾಜ್‍ಗಂಜ್‍ನ ಕಾರ್ಖಾನೆಯ ಉದ್ಯೋಗಿಯೊಬ್ಬರು ತಮ್ಮ ಅತ್ತಿಗೆಗೆ ಎರಡು ತಿಂಗಳಿನಿಂದ ವರನನ್ನು ಹುಡುಕುತ್ತಿರುವುದಾಗಿ ತಿಳಿಸಿದ್ದರು. ನಂತರ ಎರಡು ಕಡೆಯವರು ಭೇಟಿಯಾಗಿ ಮದುವೆಗೆ ಒಪ್ಪಿದರು. ಇದನ್ನೂ ಓದಿ:  90 ವರ್ಷದ ಬುದ್ಧಿಮಾಂದ್ಯ ತಾಯಿ, ಮಗನನ್ನು ಗುರುತಿಸುವ ಭಾವನಾತ್ಮಕ ವೀಡಿಯೋ ವೈರಲ್ 

POLICE JEEP

ವಧುವಿನ ಸೋದರ ಮಾವ, ಹುಡುಗಿ ಮನೆಯವರು ಬಡವರಾಗಿದ್ದು, ಮದುವೆಯ ವೆಚ್ಚವನ್ನು ಭರಿಸಲಾಗುವುದಿಲ್ಲ ಎಂದು ಹೇಳಿದ್ದರು. ಹೀಗಾಗಿ ವರನ ಮನೆಯವರು ಇಬ್ಬರೂ ಕಡೆಯವರ ಮದುವೆಯ ವೆಚ್ಚದ ಜವಾಬ್ದಾರಿಯನ್ನು ತಾವೇ ತೆಗೆದುಕೊಂಡರು. ಬಳಿಕ ಏಪ್ರಿಲ್ 25 ರಂದು ಗೋರಖ್‍ಪುರದಲ್ಲಿ ಜೋಡಿ ಸಂಪ್ರದಾಯ ಪ್ರಕಾರ ವಿವಾಹವಾದರು. ಏಪ್ರಿಲ್ 26ರ ಬೆಳಗ್ಗೆ ವಧುವನ್ನು ವರನ ಕಡೆಯವರು ಆಗ್ರಾದಲ್ಲಿರುವ ತಮ್ಮ ಮನೆಗೆ ಕರೆದೊಯ್ದರು.

ಏಪ್ರಿಲ್ 26ರ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ವಧು ನಿಧಾನವಾಗಿ ಎದ್ದು, ಮನೆಯ ಅಂಗಳದ ಗೋಡೆಯನ್ನು ಹತ್ತಿ ಪರಾರಿಯಾಗಿದ್ದಾಳೆ. ವಧು ಪರಾರಿಯಾಗುವ ಮುನ್ನ ತನ್ನ ಅತ್ತೆ ಮತ್ತು ವರನ ಕೋಣೆಯ ಬಾಗಿಲಿಗೆ ಹೊರಗಿನಿಂದ ಬೀಗ ಓಡಿಹೋಗಿದ್ದಾಳೆ. ಈ ವಿಚಾರ ತಿಳಿದ ಕುಟುಂಬಸ್ಥರು ಬೆಚ್ಚಿ ಬಿದ್ದಿದ್ದಾರೆ. ತಡರಾತ್ರಿ ವಧು ಹೊರಗೆ ಹೋಗುತ್ತಿರುವುದನ್ನು ಕಂಡ ಕಾಲೋನಿ ವಾಚ್‍ಮನ್ ಅನುಮಾನಗೊಂಡು ಗೇಟ್ ತೆರೆಯಲು ನಿರಾಕರಿಸಿದ್ದಾನೆ ಮತ್ತು ವಧುವನ್ನು ಪ್ರಶ್ನಿಸಲು ಮುಂದಾಗಿದ್ದಾನೆ. ಆಗ ವಾಚ್‍ಮನ್‍ಗೆ ವಧು ಬೆದರಿಕೆಯೊಡ್ಡಿ ಹೋಗಿದ್ದಾಳೆ.

ಕೊನೆಗೆ ಬಾಗಿಲು ಒಡೆದು ಹಾಕಿ ವರ ಮತ್ತು ಆತನ ಕುಟುಂಬಸ್ಥರು ಮನೆಯಿಂದ ಹೊರಬಂದು ರಾತ್ರಿಯಿಡೀ ವಧುವನ್ನು ಹುಡುಕಾಡಿದ್ದಾರೆ. ಆದರೆ ವಧು ಪತ್ತೆಯಾಗಲಿಲ್ಲ. ಇದರಿಂದ ಬೇಸರಗೊಂಡ ಕುಟುಂಬಸ್ಥರು ಠಾಣೆಗೆ ಬಂದು ದೂರು ನೀಡಿದ್ದಾರೆ. ಸದ್ಯ ಪೊಲೀಸರು ಕಾಲೋನಿ ಹಾಗೂ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.

Leave a Reply

Your email address will not be published.

Back to top button