CinemaLatestMain PostSouth cinema

‘ಕಾತುವಕುಲಾ ರೆಂಡು ಕಾದಲ್’ ರಿಲೀಸ್: ತಿರುಪತಿ ಆಶೀರ್ವಾದ ಪಡೆದ ನಯನತಾರಾ, ವಿಘ್ನೇಶ್ ಶಿವನ್

ವಿಘ್ನೇಶ್ ಶಿವನ್ ನಿರ್ದೇಶನ ಟಾಲಿವುಡ್ ಬಹುನಿರೀಕ್ಷಿತ ಸಿನಿಮಾ ‘ಕಾತುವಕುಲಾ ರೆಂಡು ಕಾದಲ್’ ಇಂದು ದೇಶದ್ಯಂತ ರಿಲೀಸ್ ಆಗಿದೆ. ಇದು ರೋಮ್ಯಾಂಟಿಕ್ ಮತ್ತು ಕಾಮಿಡಿ ಸಿನಿಮಾವಾಗಿದ್ದು, ಅಭಿಮಾನಿಗಳು ಸಿನಿಮಾವನ್ನು ಅದ್ದೂರಿಯಾಗಿ ಸ್ವಾಗತಿಸಿದ್ದಾರೆ. ಈ ಸಿನಿಮಾದಲ್ಲಿ ವಿಜಯ್ ಸೇತುಪತಿ, ನಯನತಾರಾ ಮತ್ತು ಸಮಂತಾ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಹಿನ್ನೆಲೆ ವಿಘ್ನೇಶ್ ಶಿವನ್ ಮತ್ತು ನಯನತಾರಾ ನಿನ್ನೆ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ಟಾಲಿವುಡ್ ಕ್ಯೂಟ್ ಕಪಲ್ ನಯನತಾರಾ ಮತ್ತು ವಿಘ್ನೇಶ್ ಶಿವನ್ ‘ಕಾತುವಕುಲಾ ರೆಂಡು ಕಾದಲ್’ ಸಿನಿಮಾ ಬಿಡುಗಡೆಯ ಖುಷಿಯಲ್ಲಿ ಇದ್ದಾರೆ. ಸಿನಿಮಾ ರಿಲೀಸ್ ಆಗುತ್ತಿದ್ದಂತೆ ಈ ಜೋಡಿ ತಿರುಪತಿ ವೆಂಕಟೇಶ್ವರನ ದರ್ಶನ ಪಡೆದಿದ್ದು, ಅಭಿಮಾನಿಗಳಿಗೆ ಸಿನಿಮಾವನ್ನು ಅರ್ಪಿಸಿದ್ದಾರೆ. ಈ ವಿಶೇಷ ಸಂದರ್ಭದಲ್ಲಿ ವಿಶೇಷ ಫೋಟೋ ಶೇರ್ ಮಾಡಿದ್ದಾರೆ. ಇದನ್ನೂ ಓದಿ:  90 ವರ್ಷದ ಬುದ್ಧಿಮಾಂದ್ಯ ತಾಯಿ, ಮಗನನ್ನು ಗುರುತಿಸುವ ಭಾವನಾತ್ಮಕ ವೀಡಿಯೋ ವೈರಲ್ 

 

View this post on Instagram

 

A post shared by Vignesh Shivan (@wikkiofficial)

ಇನ್‍ಸ್ಟಾಗ್ರಾಮ್‍ನಲ್ಲಿ ವಿಘ್ನೇಶ್ ಫೋಟೋ ಶೇರ್ ಮಾಡಿದ್ದು, ತಿರುಪತಿಯಿಂದ 2.22 ಕ್ಕೆ ವರದಿ ಮಾಡಲಾಗುತ್ತಿದೆ. ‘ಕಾತುವಕುಲಾ ರೆಂಡು ಕಾದಲ್’ ಸಿನಿಮಾ ಇವತ್ತಿನಿಂದ ನಿಮ್ಮ ಮುಂದೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಈ ಮೂಲಕ ಅವರು ಪ್ರೇಕ್ಷಕರಿಗೆ ಸಿನಿಮಾ ಜವಾಬ್ದಾರಿ ಕೊಟ್ಟಿದ್ದಾರೆ.

ನಿನ್ನೆ ಸಹ ವಿಘ್ನೇಶ್ ಅವರು, ವಿಜಯ್ ಸೇತುಪತಿ, ನಯನತಾರಾ ಮತ್ತು ಸಮಂತಾ ಅವರ ಸೆಲ್ಫಿ ಕ್ಲಿಕಿಸಿಕೊಂಡಿದ್ದ ಫೋಟೋವನ್ನು ಇನ್‍ಸ್ಟಾದಲ್ಲಿ ಶೇರ್ ಮಾಡಿದ್ದರು. ಈ ವೇಳೆ ಅವರು, ನಾಳೆಯಿಂದ ಕಾತುವಾಕುಲಾ ರೆಂಡು ಕಾದಲ್! ಈ ಚಿತ್ರವು ಥಿಯೇಟರ್‌ಗಳಿಗೆ ಬರಬೇಕೆಂದು ಬಯಸಿದೆ, ನೀವೆಲ್ಲರೂ ನಟ ವಿಜಯ್ ಸೇತುಪತಿ ರಾಂಬೋ, ಅದ್ಭುತವಾದ ನಟಿ ನಯನತಾರಾ ಕಣ್ಮಣಿಯಾಗಿ ಮತ್ತು ಮಿನುಗುವ ಸಮಂತಾ ಖತೀಜಾ ಆಗಿ ಬರುತ್ತಿದ್ದಾರೆ.

 

View this post on Instagram

 

A post shared by Vignesh Shivan (@wikkiofficial)

ಈ ಸಿನಿಮಾ ಮಾಡಲು ತುಂಬಾ ಸುಲಭಗೊಳಿಸಿದ್ದಕ್ಕಾಗಿ ಈ ನಟರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಅವರೆಲ್ಲರೂ ಸೆಟ್‍ನಲ್ಲಿ ಇದ್ದಾಗ ಕೊಡುತ್ತಿದ್ದ ಶಕ್ತಿಯನ್ನು ನಾನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಈ ಅನುಭವವು ನನ್ನೊಂದಿಗೆ ದೀರ್ಘಕಾಲ ಉಳಿಯುತ್ತದೆ. ಈ ಅದ್ಭುತ ನಟರ ನಟನೆಯನ್ನು ಚಿತ್ರಮಂದಿರದಲ್ಲಿ ಆನಂದಿಸಿ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಭಾರತದಲ್ಲಿ ಸರಿಸುಮಾರು 19,500 ಮಾತೃಭಾಷೆಗಳಿವೆ: ಡಿಕೆಶಿ

Leave a Reply

Your email address will not be published.

Back to top button