ಅಯೋಧ್ಯೆ: 500 ವರ್ಷದ ಬಳಿಕ ಶ್ರೀರಾಮನ ಹುಟ್ಟಿದ ಸ್ಥಳ ಅಯೋಧ್ಯೆಯಲ್ಲಿ(Ayodhya) ರಾಮನವಮಿಯಂದು (Rama Navami) ಬಾಲರಾಮನಿಗೆ ಸೂರ್ಯ ಅಭಿಷೇಕ (Surya Tilak)ನಡೆಯಿತು.
ಭಗವಾನ್ ಶ್ರೀರಾಮನ ಜನ್ಮ ಮುಹೂರ್ತದ ವೇಳೆಯಲ್ಲೇ ಮಧ್ಯಾಹ್ನ 12 ಗಂಟೆಯ ನಂತರ ಸೂರ್ಯ ರಶ್ಮಿ ರಾಮ ಲಲ್ಲಾನ ವಿಗ್ರಹದ ಹಣೆಯನ್ನು ಸ್ಪರ್ಶಿಸಿತು.
Advertisement
Advertisement
Advertisement
ರಾಮ ಮಂದಿರದಲ್ಲಿ (Ram Mandir) ಸೂಕ್ತ ಸ್ಥಳಗಳಲ್ಲಿ ಅಳವಡಿಸಿರುವ ಮಸೂರಗಳು ಸೂರ್ಯನ ಕಿರಣವನ್ನು ರಾಮ ಲಲ್ಲಾ ಮೂರ್ತಿಯ ಹಣೆಯನ್ನು ಸ್ಪರ್ಶಿಸಿತು. ಯಾವುದೇ ಬ್ಯಾಟರಿ ಅಥವಾ ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಕೆ ಮಾಡದೇ ಸೂರ್ಯನ ಕಿರಣಗಳು ನೇರವಾಗಿ ಬಾಲ ರಾಮನ ಹಣೆಯನ್ನು ಸ್ಪರ್ಶಿಸುವಂತೆ ಮಾಡಲು ಮಸೂರಗಳನ್ನು ಮಾತ್ರ ಬಳಕೆ ಮಾಡಲಾಗಿತ್ತು. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರಕ್ಕೆ ಬೆಂಗಳೂರಿನ ಕಂಪನಿಯಿಂದ ‘ಸೂರ್ಯ ತಿಲಕ ಯಂತ್ರ’ ಕೊಡುಗೆ – ಏನಿದರ ವೈಶಿಷ್ಟ್ಯ?
Advertisement
ಬಾಲಕ ರಾಮ ಪ್ರಾಣ ಪ್ರತಿಷ್ಠಾಪನೆಯಾದ ನಂತರ ಮೊದಲ ರಾಮನವಮಿ ನಡೆಯುತ್ತಿದ್ದು, ಅಯೋಧ್ಯೆಯಲ್ಲಿ ಸಡಗರ ಕಳೆಗಟ್ಟಿದೆ. ಜಾನೆಯೇ ಬೆಳಗಿನ ಜಾವ 3.30ಕ್ಕೆ ಮಂಗಳಾರತಿ ನೆರವೇರಿಸುವುದರ ಮೂಲಕ ಗರ್ಭಗುಡಿ ಬಾಗಿಲು ತೆರೆಯಲಾಗಿದೆ. ರಾತ್ರಿ 11 ರ ತನಕವೂ ಭಕ್ತರಿಗೆ ರಾಮನ ದರ್ಶನ ಸಿಗಲಿದೆ. ಇಂದು ಬರೋಬ್ಬರಿ 19 ಗಂಟೆಗಳ ಕಾಲ ರಾಮ ಮಂದಿರ ಓಪನ್ ಇರಲಿದೆ.
ಸಂಭ್ರಮದ ಹಬ್ಬಕ್ಕೆ ಮಂದಿರದ ಆಡಳಿತ ಮಂಡಳಿ ಈಗಾಗಲೇ ಸಕಲ ಸಿದ್ಧತೆ ಮಾಡಿದೆ. ಹಬ್ಬದ ದಿನದಂದು ರಾಮನಿಗೆ ಉಣಬಡಿಸಲು 56 ಬಗೆಯ ಭೋಗ್ ಪ್ರಸಾದಗಳನ್ನು ಸಿದ್ಧಪಡಿಸಲಾಗಿದೆ. ಇದರ ಜೊತೆಗೆ ದೇವ್ರ ಹಂಸ್ ಟ್ರಸ್ಟ್ ನಿಂದ ಈಗಾಗಲೇ 1,11,111 ಕೆ.ಜಿ ಲಡ್ಡು ಪ್ರಸಾದವನ್ನು ಅಯೋಧ್ಯೆಗೆ ನೀಡಲಾಗಿದ್ದು, ದೇಗುಲಕ್ಕೆ ಬರುವ ಭಕ್ತರಿಗೆ ವಿತರಿಸಲಾಗುತ್ತದೆ.
ಮಂದಿರ ಉದ್ಘಾಟನೆಯಾದ ಬಳಿಕ ಆಚರಿಸುತ್ತಿರುವ ಮೊದಲ ರಾಮನವಮಿ ಆಗಿರುವ ಕಾರಣದಿಂದ ಹೆಚ್ಚಿನ ಸಂಖ್ಯೆ ರಾಮಭಕ್ತರು ಸೇರುವ ನಿರೀಕ್ಷೆಯಿದೆ. ರಾಮನವಮಿ ಸಂಭ್ರಮದಲ್ಲಿ ಅಯೋಧ್ಯೆಗೆ 40 ಲಕ್ಷ ಜನ ಭಕ್ತರು ಬರುವ ನಿರೀಕ್ಷೆಯಿದೆ. ಗಣ್ಯ ಅತಿಥಿಗಳು ಏ.19 ರ ತನಕ ರಾಮದರ್ಶನ ಮುಂದೂಡಿ ಎಂದಿರುವ ರಾಮಜನ್ಮ ಭೂಮಿ ಟ್ರಸ್ಟ್ ಈ 19 ರ ತನಕ ಬುಕ್ಕಿಂಗ್ ರದ್ದು ಮಾಡಿದ್ದು, ಎಲ್ಲರೂ ಸರತಿ ಸಾಲಿನಲ್ಲಿಯೇ ನಿಂತು ದರ್ಶನ ಪಡೆಯುವಂತೆ ಹೇಳಿದೆ. ಬಾಲಕರಾಮನ ಪೂಜೆ ಕೈಂಕರ್ಯಗಳು ನೇರ ಪ್ರಸಾರಗೊಳ್ಳುತ್ತಿದ್ದು, ಅಯೋಧ್ಯೆಯಾದ್ಯಂತ 100 ಎಲ್ಇಡಿ ಪರದೆಯ ವ್ಯವಸ್ಥೆಯನ್ನು ಮಾಡಲಾಗಿದೆ.