ವಾಷಿಂಗ್ಟನ್: ಭಾರತದ ಯುವ ಗ್ರ್ಯಾಂಡ್‌ಮಾಸ್ಟರ್ ಆರ್. ಪ್ರಜ್ಞಾನಂದ(R Praggnanandhaa) ಅವರು ಸೈಂಟ್ ಲೂಯಿಸ್‌ನಲ್ಲಿ ನಡೆದ ಅಮೆರಿಕದ ಪ್ರತಿಷ್ಠಿತ ಗ್ರ್ಯಾಂಡ್ ಚೆಸ್ ಟೂರ್(Grand Chess Tour Title) ಪ್ರಶಸ್ತಿಯನ್ನು ಮುಡಿಗೇರಿಸಿ ಇತಿಹಾಸ ಬರೆದಿದ್ದಾರೆ.
ಈ ಮೂಲಕ ತಮ್ಮ ವೃತ್ತಿಜೀವನದ ಅತಿ ದೊಡ್ಡ ಪ್ರಶಸ್ತಿಯನ್ನು ಗೆದ್ದ ಪ್ರಜ್ಞಾನಂದ, ಗ್ರ್ಯಾಂಡ್ ಚೆಸ್ ಟೂರ್ ಗೆದ್ದ ಭಾರತದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಫೈನಲ್‌ನಲ್ಲಿ ಅಮೆರಿಕದ ಫ್ಯಾಬಿಯಾನೊ ಕರುವಾನಾ ವಿರುದ್ಧ ಅಸಾಧಾರಣ ಕಮ್‌ಬ್ಯಾಕ್ ಮಾಡಿ ಚಾಂಪಿಯನ್ ಪಟ್ಟ ಅಲಂಕರಿಸಿದ ಪ್ರಜ್ಞಾನಂದ ಅವರಿಗೆ 2 ಲಕ್ಷ ಡಾಲರ್ (ಸುಮಾರು 1.67 ಕೋಟಿ ರೂ.ಗೂ ಹೆಚ್ಚು) ನಗದು ಬಹುಮಾನ ಲಭಿಸಿದೆ.
ಕ್ಲಾಸಿಕಲ್ ಸುತ್ತಿನ ಪಂದ್ಯಗಳ ನಂತರ ಫ್ಯಾಬಿಯಾನೊ ಕರುವಾನಾ 6 ಪಾಯಿಂಟ್‌ಗಳ ಭರ್ಜರಿ ಮುನ್ನಡೆಯೊಂದಿಗೆ ಫೈನಲ್ ದಿನದಾಟಕ್ಕೆ ಪ್ರವೇಶಿಸಿದ್ದರು. ಆದರೆ ರ್‍ಯಾಪಿಡ್ ವಿಭಾಗದಲ್ಲಿ ಅದ್ಭುತ ಆಟ ಪ್ರದರ್ಶಿಸಿದ ಪ್ರಜ್ಞಾನಂದ, ಎರಡೂ ಪಂದ್ಯಗಳನ್ನು ಗೆದ್ದು ಪಂದ್ಯದ ಚಿತ್ರಣವನ್ನೇ ಬದಲಿಸಿದರು.
அமெரிக்காவின் செயின்ட் லூயிஸில் நடைபெற்ற கிராண்ட் செஸ் டூர் 2026 போட்டியில் சாம்பியன் பட்டம் வென்ற முதல் இந்தியர் என்ற வரலாற்றுச் சாதனையைப் படைத்துள்ள தமிழ்நாட்டின் இளம் கிராண்ட்மாஸ்டர் திரு.பிரக்ஞானந்தா அவர்களுக்கு எனது மனமார்ந்த பாராட்டுகளையும், நல்வாழ்த்துகளையும் தெரிவித்துக்… pic.twitter.com/q55B3CdcbD
— CMOTamilNadu (@CMOTamilnadu) August 28, 2026
ಮುನ್ನಡೆ ಕಾಯ್ದುಕೊಳ್ಳಲು ಭಾರತದ ಆಟಗಾರನಿಗೆ 4 ಪಂದ್ಯಗಳ ಬ್ಲಿಟ್ಜ್ ಹಂತ ನಿರ್ಣಾಯಕವಾಗಿತ್ತು. ಮೊದಲ ಬ್ಲಿಟ್ಜ್ ಪಂದ್ಯದಲ್ಲಿ ಪ್ರಜ್ಞಾನಂದ ಗೆಲುವಿನ ಅವಕಾಶ ಹೊಂದಿದ್ದರೂ, ಸಮಯದ ಒತ್ತಡದಲ್ಲಿ ಎಡವಿ ಸಂಕಷ್ಟಕ್ಕೆ ಸಿಲುಕಿದರು. ಆದರೆ ಕರುವಾನಾಗೆ ಗೆಲುವಿನ ನಡೆಗಳನ್ನು ಕಂಡುಕೊಳ್ಳಲು ಸಾಧ್ಯವಾಗದೆ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿತು. ಅಂತಿಮವಾಗಿ ಬ್ಲಿಟ್ಜ್ ಹಂತದಲ್ಲಿ ಸಮಬಲ ಸಾಧಿಸಿದ ಪ್ರಜ್ಞಾನಂದ ಒಟ್ಟಾರೆ 15-13 ಅಂಕಗಳ ಅಂತರದಿಂದ ರೋಚಕ ಜಯ ದಾಖಲಿಸಿ ಇತಿಹಾಸ ನಿರ್ಮಿಸಿದರು. ಇದನ್ನೂ ಓದಿ: ಇಂದಿನಿಂದ ಮಹಿಳಾ ಏಷ್ಯಾಕಪ್ ಕ್ರಿಕೆಟ್ ಸಮರ: ದಾಖಲೆಯ 8ನೇ ಟ್ರೋಫಿ ಮೇಲೆ ಭಾರತದ ಕಣ್ಣು
ಈ ಗೆಲುವಿನೊಂದಿಗೆ ಪ್ರಜ್ಞಾನಂದ ಗ್ರ್ಯಾಂಡ್ ಚೆಸ್ ಟೂರ್ ಚಾಂಪಿಯನ್ ಆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ದೇಶದ ಚೆಸ್ ಇತಿಹಾಸದಲ್ಲಿ ಸುವರ್ಣ ಅಧ್ಯಾಯ ಬರೆದಿದ್ದಾರೆ.
