Monday, 15th July 2019

ಪತಿಗೆ ರಾಧಿಕಾ ವಿಶ್ – ಫೋಟೋದಲ್ಲೂ ಪರ್ಫೆಕ್ಟ್ ಮ್ಯಾಚ್ ಎಂದು ಸಿಂಡ್ರೆಲಾ ಸಾಬೀತು

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಇಂದು 33 ವಸಂತಕ್ಕೆ ಕಾಲಿಟ್ಟಿದ್ದು, ಅವರ ಪತ್ನಿ ರಾಧಿಕಾ ಪಂಡಿತ್ ಅವರು ಸಿಂಪಲ್ ಮತ್ತು ವಿಭಿನ್ನವಾಗಿ ಶುಭಾಶಯವನ್ನು ತಿಳಿಸಿದ್ದಾರೆ.

ನಟಿ ರಾಧಿಕಾ ಅವರು ಫೇಸ್‍ಬುಕ್ ಮತ್ತು ಇನ್ಸ್ ಸ್ಟಾಗ್ರಾಂನಲ್ಲಿ ಪತಿ ಯಶ್ ಅವರಿಗೆ ಬರ್ತ್ ಡೇ ಶುಭಾಶಯವನ್ನು ಕೋರಿದ್ದಾರೆ. ರಾಧಿಕಾ ಅವರು, ‘Happy birthday to my perfect match’ ಎಂದು ಬರೆದು ಸಿಂಪಲ್ ಆಗಿ ವಿಶ್ ಮಾಡಿದ್ದಾರೆ.

ರಾಧಿಕಾ ವಿಶ್ ಮಾಡಿರುವುದು ಸಿಂಪಲಾಗಿದ್ರೂ ಡಿಫ್ರೆಂಟಾಗಿದೆ. ಈ ಮೂಲಕ ನನ್ನ ಒಳ್ಳೆಯ ಜೋಡಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಹೇಳಿದ್ದಾರೆ. ಜೊತೆಗೆ ಅವರು ಒಂದು ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಅದರಲ್ಲೂ ಇಬ್ಬರು ಒಂದೇ ಬಣ್ಣದ ಉಡುಪು ಧರಿಸಿರುವ ಮೂಲಕ ಇಬ್ಬರೂ ಫರ್ಪೆಕ್ಟ್ ಮ್ಯಾಚ್ ಎಂದು ತೋರಿಸಿ ಕೊಟ್ಟಿದ್ದಾರೆ.

ಯಶ್ ಪ್ರತಿ ವರ್ಷ ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆ ಆಚರಿಸಿಕೊಳ್ಳುತ್ತಿದ್ದರು. ಆದರೆ ಈ ಬಾರಿ ತಾವು ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂದು ಎರಡು ದಿನಗಳ ಮುಂಚಿತವಾಗಿಯೇ ಅಭಿಮಾನಿಗಳಿಗೆ ಯಶ್ ತಿಳಿಸಿದ್ದರು. ಹಾಗಾಗಿ ಹೊಸಕೆರೆ ಹಳ್ಳಿಯ ಯಶ್ ನಿವಾಸ ಖಾಲಿ ಖಾಲಿ ಇದೆ. ಅಭಿಮಾನಿಗಳು ಕೂಡ ಇಂದು ಸಾಮಾಜಿಕ ಜಾಲತಾಣಗಳಲ್ಲಿ ಯಶ್ ಫೋಟೋ ಹಾಕಿ ಶುಭಾಶಯಗಳ ಸುರಿಮಳೆಗೈಯುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *