ಕಾರವಾರ: ಮೀನುಗಾರರ ಆರಾಧ್ಯ ದೈವ ಭಟ್ಕಳದ ಪ್ರಸಿದ್ಧ ಅಳ್ವೆಕೋಡಿಯ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ (Alvekodi Durgaparameshwari) ಮಾರಿಜಾತ್ರಾ ಮಹೋತ್ಸವವು ಜನವರಿ 12 ,13 ರಂದು ನಡೆಯಲಿದೆ.
ಈ ಸಂಬಂಧ ಇಂದು ದೇವಾಲಯದಲ್ಲಿ ಉತ್ಸವ ಮೂರ್ತಿಯ ವರ್ಧಂತಿ ಉತ್ಸವ ಮಾಡುವ ಮೂಲಕ ಪೂರ್ಣಾಹುತಿ ನೀಡಿ ಮುಹೂರ್ತ ನಿಗದಿ ಮಾಡಿದರು. ಇದನ್ನೂ ಓದಿ: ಆಶಾ ಕಾರ್ಯಕರ್ತೆಯರ ಅಹೋರಾತ್ರಿ ಹೋರಾಟಕ್ಕೆ ತೆರೆ: ಸರ್ಕಾರದ ಲಿಖಿತ ಆದೇಶ ಬೆನ್ನಲ್ಲೇ ಧರಣಿ ಅಂತ್ಯ
ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಮಾರಿಜಾತ್ರಾ ಸಮಿತಿಯ ಅಧ್ಯಕ್ಷ ರಾಮಮೊಗೇರ್ ಅವರು ಸರ್ವಧರ್ಮದವರೂ ಭಾಗಿಯಾಗುವ ಈ ಮಾರಿಜಾತ್ರಾ ಮಹೋತ್ಸವದಲ್ಲಿ ಜನವರಿ 11 ರಂದು ಪೂರ್ವ ಸಿದ್ದತೆಯೊಂದಿಗೆ ಧಾರ್ಮಿಕ ವಿಧಿ ಪ್ರಾರಂಭವಾಗಿ ಸಾಯಂಕಾಲ 7 ಗಂಟೆಗೆ ಶ್ರೀದೇವಿಯಲ್ಲಿ ದೀಪಸ್ಥಾಪನೆ, ಗಣಪತಿ ಪೂಜೆ ನಂತರ ಮುಂಜಾನೆ ದೇವತಾ ಪ್ರಾರ್ಥನೆ, ಪುಣ್ಯಾಹವಾಚನ, ನಾಂದಿ, ಪಂಚದುರ್ಗಾ ಹವನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಲಿದೆ.
ನಂತರ ಜನವರಿ 14 ರಂದು ಧಾರ್ಮಿಕ ಕಾರ್ಯಕ್ರಮಗಳ ಸಮಾರೋಪ ಹಾಗೂ ಮೂರ್ತಿ ವಿಸರ್ಜನೆ, ಶ್ರೀದೇವಿ ದ್ವಾದಶಿ ಕಲಶ ಸಂಪ್ರೋಕ್ಷಣೆ ಮೂಲಕ ಮುಕ್ತಾಯವಾಗಲಿದೆ. ಇದನ್ನೂ ಓದಿ: ಬೆಳಗಾವಿ ಅಧಿವೇಶನ| ಮೊದಲ ಬಾರಿಗೆ 7,000 ಪೊಲೀಸರ ನಿಯೋಜನೆ; ತಲೆ ಎತ್ತಿದೆ ಪೊಲೀಸ್ ಟೌನ್ಶಿಪ್
