– ವಿದೇಶಿ ಸಾಲವನ್ನು ಬಿಎಂಆರ್ಸಿಎಲ್ ಮರುಪವತಿಸುತ್ತದೆ
– ಪ್ರತಿ ಕಿ.ಮೀಗೆ ಕೇಂದ್ರದಿಂದ 189 ಕೋಟಿ, ರಾಜ್ಯ ಸರ್ಕಾರಕ್ಕೆ 165 ಕೋಟಿ ನಿಗದಿ
ಬೆಂಗಳೂರು: ನಮ್ಮ ಮೆಟ್ರೋ(Namma Metro) ಯೋಜನೆಯ ಅನುದಾನ ಹಂಚಿಕೆ, ಸಾಲ ಮರುಪಾವತಿ ಹಾಗೂ ರೆಡ್ ಲೈನ್ ಯೋಜನೆಯ ವಿಳಂಬಕ್ಕೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೆಟ್ರೋ ಅನುದಾನದ ಕುರಿತು ರಾಜ್ಯ ಸರ್ಕಾರ ಜನರಿಗೆ ತಪ್ಪು ಮಾಹಿತಿ ನೀಡುತ್ತಿದೆ ಮತ್ತು ಕ್ರೆಡಿಟ್ ಪಡೆಯಲು ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಕೇಂದ್ರ ಸರ್ಕಾರವಾಗಲೀ ಅಥವಾ ರಾಜ್ಯ ಸರ್ಕಾರವಾಗಲೀ, ಪ್ರಧಾನಿ ಮೋದಿ ಅವರಾಗಲೀ ಅಥವಾ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಾಗಲೀ ಯಾರೂ ತಮ್ಮ ಜೇಬಿನಿಂದ ಹಣ ಖರ್ಚು ಮಾಡುವುದಿಲ್ಲ. ಎಲ್ಲರೂ ಖರ್ಚು ಮಾಡುವುದು ಜನರ ತೆರಿಗೆ ಹಣವನ್ನೇ ಎಂದು ತೇಜಸ್ವಿ ಸೂರ್ಯ ಹೇಳಿದರು.
Facts speak for themselves. Political rhetoric cannot change the numbers!
Conveniently ignoring ₹28,958 crore in foreign loans arranged through the Centre’s sovereign guarantee, which BMRCL avails and repays, is nothing short of political mischief! Moving a loan from one column to another doesn’t change who pays.
Here are the facts on Namma Metro:
▪️Ownership: BMRCL is a 50:50 Centre – State joint venture.
▪️Congress’s claim: Karnataka 84%, Centre 16%.
▪️BMRCL’s approved funding plan: Karnataka 46.65% (₹36,333 crore), Centre 53.35% (₹41,558 crore), including ₹28,958 crore in sovereign-backed foreign loans.
Congress can shout from the rooftops. But misleading narratives cannot withstand factual scrutiny!
— Tejasvi Surya (@Tejasvi_Surya) November 12, 2026
ಕೇಂದ್ರ ಸರ್ಕಾರದ ಗ್ಯಾರಂಟಿ ಮೇಲೆ ವಿದೇಶಿ ಸಂಸ್ಥೆಗಳು ನೀಡುವ 29 ಸಾವಿರ ಕೋಟಿ ರೂ. ಸಾಲದ ಮೊತ್ತವನ್ನು ರಾಜ್ಯ ಸರ್ಕಾರ ತನ್ನ ಖಾತೆಗೆ ಸೇರಿಸಿಕೊಂಡು, ತಮ್ಮ ಪಾಲು ಹೆಚ್ಚಿದೆ ಎಂದು ಸುಳ್ಳು ಹೇಳುತ್ತಿದೆ. ಆ ಸಾಲವನ್ನು ಬಿಎಂಆರ್ಸಿಎಲ್ (BMRCL) ಸಂಸ್ಥೆಯೇ ಮರುಪಾವತಿಸುತ್ತದೆಯೇ ಹೊರತು ರಾಜ್ಯ ಸರ್ಕಾರವಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ನಮ್ಮ ಮೆಟ್ರೋ ಯೋಜನೆಯು 50:50 ಇಕ್ವಿಟಿ ಶೇರ್ ಒಪ್ಪಂದದಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜಂಟಿ ಮಾಲೀಕತ್ವದಲ್ಲಿದೆ. ಈ ಒಪ್ಪಂದದ ಪ್ರಕಾರ ಆರಂಭಿಕವಾಗಿ ಎರಡೂ ಸರ್ಕಾರಗಳು ತಲಾ 9,164 ಕೋಟಿ ರೂ. ಹೂಡಿಕೆ ಮಾಡಿವೆ. ಒಪ್ಪಂದದ ನಿಯಮದಂತೆ ಭೂಸ್ವಾಧೀನ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಬೇಕಾಗಿದ್ದು, ಆ ಆಧಾರದ ಮೇಲೆ ರಾಜ್ಯ ಸರ್ಕಾರ 19 ಸಾವಿರ ಕೋಟಿ ರೂ. ವೆಚ್ಚ ಮಾಡಿದೆ ಎಂದು ಸೂರ್ಯ ವಿವರಿಸಿದರು.
Congress seems unable to understand how a 50:50 Joint Venture, an SPV or even basic accounting works!
▪️Congress’ False Claim: Government of Karnataka’s funding share rose from 79% to 87%.
🔸The Fact: BMRCL’s approved plan shows the Centre’s share rising from 48.5% in Phase 1 to 57.9% in Phase 3.▪️Congress’ False Claim: Government of Karnataka alone repays foreign loans.
🔸The Fact: BMRCL, the 50:50 Centre – State SPV, is the borrower and repays the loans.▪️Congress’ False Claim: The Centre contributes just ₹57 crore per km against Karnataka’s ₹297 crore.
🔸The Fact: BMRCL’s plan allocates ₹189 crore per km to the Centre and ₹165 crore to Government of Karnataka, including Centre-arranged foreign loans.If Congress cannot distinguish loans from grants, or borrowers from shareholders, how can it claim to explain Metro finances?
— Tejasvi Surya (@Tejasvi_Surya) November 12, 2026
ಕೇಂದ್ರವನ್ನು ದೂರುವ ಬದಲು ಕೇಂದ್ರದ 16% ಅನುದಾನವನ್ನು ನೀವೇ ಭರಿಸಬಹುಲ್ವೇ ಎಂಬ ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್ಆರ್ ರಂಗನಾಥ್ ಅವರ ಅಭಿಪ್ರಾಯವನ್ನು ಉಲ್ಲೇಖಿಸಿದ ಅವರು, ಕೇಂದ್ರ ಸರ್ಕಾರ ಕೊಡಿಸಿರುವ ಸಾಲವೂ ಸೇರಿದಂತೆ ಕೇಂದ್ರದ ಪಾಲು 41,558 ಕೋಟಿ (53.35%) ಆಗಿದ್ದರೆ, ರಾಜ್ಯ ಸರ್ಕಾರದ ಪಾಲು 36,333 ಕೋಟಿ (46.65%) ಮಾತ್ರ ಆಗಿದೆ. ಆದರೆ ರಾಜ್ಯ ಸರ್ಕಾರ ಈ ಬಗ್ಗೆ ಸುಳ್ಳು ಮಾಹಿತಿ ನೀಡುತ್ತಿದೆ. ಕೇಂದ್ರ ಸರ್ಕಾರ ಕೇವಲ ಶೇ.16ರಷ್ಟು ಮಾತ್ರ ಹಣ ನೀಡುತ್ತಿದೆ ಎನ್ನುವುದಾದರೆ, ಆ ಹಣವನ್ನು ಬಿಟ್ಟು ನೀವೇ ಯೋಜನೆ ಮಾಡಿ ತೋರಿಸಿ ಕೊಡಿ ಎಂದು ರಾಜ್ಯ ಸರ್ಕಾರಕ್ಕೆ ಸವಾಲು ಹಾಕಿದರು. ಇದನ್ನೂ ಓದಿ: ನಮ್ಮ ಮೆಟ್ರೋ ಅನುದಾನ ಹಂಚಿಕೆಯಲ್ಲಿ ತಾರತಮ್ಯ: ಕೇಂದ್ರದ ವಿರುದ್ಧ ಸಿಎಂ, ಕೃಷ್ಣ ಬೈರೇಗೌಡ ಕಿಡಿ
The CAG Report’s findings shatter Congress’s misleading assessment of Namma Metro’s cost overruns. Failures in Karnataka’s administration are squarely responsible for much of this mess!
Escalating land costs, delays of over 1,000 days in handing over land even in this age of technology, excess compensation and delayed notifications all expose serious failures in the State Government’s handling of the project.
These are contractually the State Government’s responsibilities. Congress cannot hold the Centre or any other entity responsible for failures it is duty-bound to address.
Bengalureans deserve accountability, not political excuses!
— Tejasvi Surya (@Tejasvi_Surya) November 12, 2026
ರಾಜ್ಯ ಸರ್ಕಾರದ ಅವೈಜ್ಞಾನಿಕ ಸುರಂಗ ಮತ್ತು ಮೇಲ್ಸೇತುವೆ ಪ್ರಸ್ತಾವನೆಗಳಿಂದಾಗಿ ನಮ್ಮ ಮೆಟ್ರೋ ಹಂತ 3ಎ (ಆರೆಂಜ್ ಲೈನ್) ಯೋಜನೆ ವಿಳಂಬವಾಗಿದೆ. ರಾಜ್ಯ ಸರ್ಕಾರ ಈ ಯೋಜನೆಗೆ 28,405 ಕೋಟಿ ರೂ. ಅಂದಾಜು ವೆಚ್ಚ ಪ್ರಸ್ತಾಪಿಸಿ ಸಮಗ್ರ ಯೋಜನಾ ವರದಿ(DPR) ಕಳುಹಿಸಿತ್ತು. ಆದರೆ ಕೇಂದ್ರ ಸರ್ಕಾರದ ನೇತೃತ್ವದ ಪರಿಶೀಲನಾ ಸಮಿತಿಯು ಇದನ್ನು 25,999 ಕೋಟಿ ರೂ.ಗೆ ಇಳಿಸಿದ್ದು, ಇದರಿಂದ ತೆರಿಗೆದಾರರ 2,406 ಕೋಟಿ ರೂ. ಹಣ ಉಳಿತಾಯವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಹೇಳಿದ್ದು ಏನು?
ವಿದೇಶಿ ಸಾಲಗಳನ್ನು ರಾಜ್ಯ ಸರ್ಕಾರವೊಂದೇ ಮರುಪಾವತಿಸುತ್ತದೆ ಎಂಬುದು ಸುಳ್ಳು. ಕೇಂದ್ರ ಸರ್ಕಾರದ ಸಾರ್ವಭೌಮ ಖಾತರಿಯ (Sovereign Guarantee) ಮೂಲಕ ಪಡೆಯಲಾದ 28,958 ಕೋಟಿ ರೂ. ವಿದೇಶಿ ಸಾಲವನ್ನು ಸ್ವತಃ ಬಿಎಂಆರ್ಸಿಎಲ್ ಸಂಸ್ಥೆಯೇ ಪಡೆದು ಮರುಪಾವತಿಸುತ್ತದೆ.
ಬಿಎಂಆರ್ಸಿಎಲ್ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ 50:50 ಜಂಟಿ ಸಹಭಾಗಿತ್ವದ ಸಂಸ್ಥೆಯಾಗಿದೆ. ಕರ್ನಾಟಕದ ಪಾಲು 84% ಮತ್ತು ಕೇಂದ್ರದ ಪಾಲು 16% ಎಂಬ ಕಾಂಗ್ರೆಸ್ ವಾದ ಸತ್ಯಕ್ಕೆ ದೂರವಾದದ್ದು. ಅನುಮೋದಿತ ಯೋಜನೆಯ ಪ್ರಕಾರ ಕರ್ನಾಟಕದ ಪಾಲು 46.65% (36,333 ಕೋಟಿ ರೂ.) ಹಾಗೂ ಕೇಂದ್ರದ ಪಾಲು 53.35% (41,558 ಕೋಟಿ ರೂ.) ಆಗಿದೆ. ಮೊದಲ ಹಂತದಲ್ಲಿ 48.5% ಇದ್ದ ಕೇಂದ್ರದ ಪಾಲು, 3ನೇ ಹಂತದಲ್ಲಿ 57.9% ಕ್ಕೆ ಏರಿಕೆಯಾಗಿದೆ.
Congress cannot escape Bengalureans’ questions over the Pink Line Metro delays!
12 years for a mere 7.5 km stretch is a glaring example of Congress’s lethargic approach to infrastructure that benefits taxpayers.
Since 2014, Congress-led governments have ruled Karnataka for nearly 9 years, with delayed contracts, cancelled tenders and sluggish execution marking their earlier tenure.
In contrast, the BJP Government, despite two years of COVID-19 disruptions, initiated tunnelling and achieved 72% completion by February 2023.
Congress must answer for the delays in Bengaluru’s Metro expansion instead of passing the buck and holding back the city’s growth!
— Tejasvi Surya (@Tejasvi_Surya) November 12, 2026
ಕೇಂದ್ರ ಸರ್ಕಾರ ಪ್ರತಿ ಕಿ.ಮೀ.ಗೆ ಕೇವಲ 57 ಕೋಟಿ ರೂ. ನೀಡುತ್ತಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಅವರು, ಕೇಂದ್ರ-ಪ್ರಾಯೋಜಿತ ವಿದೇಶಿ ಸಾಲವನ್ನೂ ಒಳಗೊಂಡಂತೆ ಬಿಎಂಆರ್ಸಿಎಲ್ ಯೋಜನೆಯಲ್ಲಿ ಕೇಂದ್ರಕ್ಕೆ ಪ್ರತಿ ಕಿ.ಮೀ.ಗೆ 189 ಕೋಟಿ ರೂ. ಮತ್ತು ರಾಜ್ಯ ಸರ್ಕಾರಕ್ಕೆ 165 ಕೋಟಿ ರೂ. ನಿಗದಿಪಡಿಸಲಾಗಿದೆ ಎಂದರು.
Congress has deprioritised Red Line Metro to its tunnel roads subjecting Karnataka’s Tax Payers to eternally wait for comfortable commute in the city!
The State Government’s proposed North-South Tunnel Road overlaps Namma Metro’s Red Line, forcing costly redesigns. Even the State’s Finance Department has questioned the Hebbal tunnel proposal.
The price Bengaluru could pay:
– Veterinary College Metro station dropped, affecting projected ridership of 18,000 passengers/hour in each direction.
– Completion pushed from 2031 to 2033.
– ₹2,628 crore in estimated delay costs!Bengaluru needs integrated urban planning, not a Congress Government whose own infrastructure projects are working against each other!
— Tejasvi Surya (@Tejasvi_Surya) November 12, 2026
ರಾಜ್ಯ ಸರ್ಕಾರ ಪ್ರಸ್ತಾಪಿಸಿರುವ ಉತ್ತರ-ದಕ್ಷಿಣ ಸುರಂಗ ಮಾರ್ಗವು (North-South Tunnel Road) ನಮ್ಮ ಮೆಟ್ರೋ ‘ರೆಡ್ ಲೈನ್’ ಮಾರ್ಗದೊಂದಿಗೆ ಅತಿಕ್ರಮಣಗೊಳ್ಳುತ್ತಿದೆ. ಇದರಿಂದ ಯೋಜನೆಯ ಮರು-ವಿನ್ಯಾಸ ಅನಿವಾರ್ಯವಾಗಿದ್ದು, ಹೆಬ್ಬಾಳ ಸುರಂಗ ಪ್ರಸ್ತಾವನೆಯ ಬಗ್ಗೆ ಸ್ವತಃ ರಾಜ್ಯ ಹಣಕಾಸು ಇಲಾಖೆಯೇ ಆಕ್ಷೇಪ ವ್ಯಕ್ತಪಡಿಸಿದೆ. ಇದರಿಂದ ಪಶುವೈದ್ಯಕೀಯ ಕಾಲೇಜು (Veterinary College) ಮೆಟ್ರೋ ನಿಲ್ದಾಣವನ್ನು ಕೈಬಿಡಲಾಗುತ್ತಿದ್ದು, ಇದರಿಂದ ಪ್ರತಿ ದಿಕ್ಕಿನಲ್ಲಿ ಗಂಟೆಗೆ 18,000 ಪ್ರಯಾಣಿಕರ ಸಂಚಾರಕ್ಕೆ ತೊಂದರೆಯಾಗಲಿದೆ. ಯೋಜನೆಯ ಪೂರ್ಣಗೊಳ್ಳುವ ಅವಧಿ 2031ರಿಂದ 2033ಕ್ಕೆ ಮುಂದೂಡಲ್ಪಟ್ಟಿದೆ. ಈ ವಿಳಂಬದಿಂದಾಗಿ ಸುಮಾರು 2,628 ಕೋಟಿ ರೂ. ಹೆಚ್ಚುವರಿ ವೆಚ್ಚದ ಹೊರೆ ಬೀಳಲಿದೆ.
ಬೆಂಗಳೂರಿಗೆ ಸಮಗ್ರ ನಗರ ಯೋಜನೆಯ ಅಗತ್ಯವಿದೆಯೇ ಹೊರತು, ಒಂದಕ್ಕೊಂದು ವಿರುದ್ಧವಾಗಿ ಕೆಲಸ ಮಾಡುವ ಮೂಲಸೌಕರ್ಯ ಯೋಜನೆಗಳಲ್ಲ. ಮೆಟ್ರೋ ವಿಳಂಬಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆಯಾಗಿದ್ದು, ತೆರಿಗೆದಾರರಿಗೆ ಉತ್ತರ ನೀಡಬೇಕು ಎಂದು ತೇಜಸ್ವಿ ಸೂರ್ಯ ಒತ್ತಾಯಿಸಿದ್ದಾರೆ.
