ಚಿಕ್ಕಮಗಳೂರು: ದೀಪಾವಳಿ ಬಾಡೂಟಕ್ಕೆ ವನ್ಯಜೀವಿಗಳನ್ನು ಬೇಟೆಯಾಡಿದ್ದ ಓರ್ವ ಆರೋಪಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಕೊಟ್ಟಿಗೆಹಾರ ಸಮೀಪದ ಬಿನ್ನಡಿ ಅರಣ್ಯ ಪ್ರದೇಶದಲ್ಲಿ ಬಂಧಿಸಿದ್ದಾರೆ. ಈ ವೇಳೆ ಮೂವರು ಆರೋಪಿಗಳು ಪರಾರಿಯಾಗಿದ್ದಾರೆ.
ಬಿನ್ನಡಿ ಗ್ರಾಮದ ರಮೇಶ್ ಬಂಧಿತ ಆರೋಪಿ. ಬಾಡೂಟಕ್ಕಾಗಿ ಕಡವೆ, ಕಾಡುಕುರಿಯನ್ನು ಬೇಟೆಯಾಡಿ, ರಮೇಶನ ಮನೆಯಲ್ಲಿ ನಾಲ್ವರು ಸೇರಿ ಮಾಂಸ ಕತ್ತರಿಸಿ ಪಾಲು ಮಾಡುತ್ತಿದ್ದರು. ಈ ವೇಳೆ ಅರಣ್ಯ ಅಧಿಕಾರಿಗಳು ದಾಳಿ ಮಾಡಿ ಆರೋಪಿಯನ್ನು ಬಂಧಿಸಿದ್ದಾರೆ. ದಾಳಿಯಾಗುತ್ತಿದ್ದಂತೆ ಮಹೇಂದ್ರ, ಪ್ರಕಾಶ್, ಮಲ್ಲಯ್ಯ ಪರಾರಿಯಾಗಿದ್ದಾರೆ. ಇದನ್ನೂ ಓದಿ: ಖಾಕಿ ಯಡವಟ್ಟು, ನರಕ ಕಂಡ ನಿರಪರಾಧಿ – ಕೊಲೆಯಾದ ಮಹಿಳೆ ಜೀವಂತ ಪ್ರತ್ಯಕ್ಷ
ದಾಳಿಯ ವೇಳೆ ಎರಡು ನಾಡ ಬಂದೂಕುಗಳು, ವನ್ಯಜೀವಿ ಮಾಂಸವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ನಾಲ್ವರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕಕಣ ದಾಖಲಿಸಲಾಗಿದೆ. ತಲೆಮರೆಸಿಕೊಂಡಿರುವ ಮೂವರು ಆರೋಪಿಗಳಿಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ. ಇದನ್ನೂ ಓದಿ: ಮಕ್ಕಳಾಗಿಲ್ಲ ಅಂತ ಚೇಡಿಸುತ್ತಿದ್ದ ಗಂಡನನ್ನ ಚುಚ್ಚಿ ಕೊಂದ ಪತ್ನಿ
