ಮುಂಬೈ: ಮಹಾರಾಷ್ಟ್ರದ ಸೋಲಾಪುರ ವಿಮಾನ ನಿಲ್ದಾಣದಲ್ಲಿ (Solapur Airport) ಟೇಕಾಫ್ ವೇಳೆ ತರಬೇತಿ ವಿಮಾನವೊಂದು ರನ್ವೇಯಿಂದ (Runway) ಜಾರಿ ಪಕ್ಕಕ್ಕೆ ಬಿದ್ದಿದೆ.
ಘಟನೆ ನಡೆದಾಗ ಮಹಿಳಾ ಟ್ರೈನಿ ಪೈಲಟ್ (Trainee Pilot) ಒಬ್ಬರು ವಿಮಾನವನ್ನು ಚಲಾಯಿಸುತ್ತಿದ್ದರು. ಅದೃಷ್ಟವಶಾತ್ ಅವರಿಗೆ ಯಾವುದೇ ಹಾನಿಯಾಗಿಲ್ಲ, ಸುರಕ್ಷಿತವಾಗಿದ್ದಾರೆ ಎಂದು ವರದಿಯಾಗಿದೆ. ವಿಮಾನದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅದರಲ್ಲಿ ವಿಮಾನ ರನ್ವೇಯಿಂದ ಜಾರಿ ಮುಂಭಾಗ ನೆಲಕ್ಕೆ ತಗುಲಿರುವುದು ಸೆರೆಯಾಗಿದೆ. ಇದನ್ನೂ ಓದಿ: ಇಂಡಿಗೋ ವಿಮಾನಕ್ಕೆ ಹೈಜಾಕ್ ಬೆದರಿಕೆ – ಲಕ್ನೋಗೆ ಹೊರಟಿದ್ದ ಫ್ಲೈಟ್ ಬೆಂಗ್ಳೂರಿಗೆ ವಾಪಸ್
ಟ್ರೈನಿ ಪೈಲಟ್ ಟೇಕಾಫ್ ಮಾಡಲು ಪ್ರಯತ್ನಿಸುತ್ತಿದ್ದಾಗ ಈ ಘಟನೆ ನಡೆದಿದೆ. ಟೇಕಾಫ್ ಸಮಯದಲ್ಲಿ ವಿಮಾನವು ನಿಯಂತ್ರಣ ತಪ್ಪಿ, ಜಾರಲು ನಿಖರವಾದ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ವಿಮಾನವನ್ನು ತರಬೇತಿ ಉದ್ದೇಶಕ್ಕಾಗಿ ಬಳಸಲಾಗುತ್ತಿತ್ತು ಎಂದು ತಿಳಿದುಬಂದಿದೆ.
ಸೋಲಾಪುರ ವಿಮಾನ ನಿಲ್ದಾಣದ ಅಧಿಕಾರಿಗಳು ಈ ಘಟನೆಯ ಬಗ್ಗೆ ಇಲ್ಲಿಯವರೆಗೆ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಘಟನೆಗೆ ಕಾರಣ ಮತ್ತು ವಿಮಾನದ ಸ್ಥಿತಿಗತಿ ಕುರಿತ ಹೆಚ್ಚಿನ ವಿವರಗಳ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ. ಇದನ್ನೂ ಓದಿ: ಕೋಲ್ಕತ್ತಾ-ಮುಂಬೈ ಏರ್ ಇಂಡಿಯಾ ವಿಮಾನಕ್ಕೆ ಹೈಜಾಕ್ ಬೆದರಿಕೆ
