ಇತ್ತೀಚೆಗೆ ಕಾಫಿ ವಿತ್ ಕರಣ್ ಸೀಸನ್ 9ರಲ್ಲಿ ಕಿಯಾರಾ ಮತ್ತು ಸಿದ್ದಾರ್ಥ ಜೋಡಿ ಆಗಮಿಸಿತ್ತು. ಈ ವೇಳೆ ಕಿಯಾರಾ ಬೇಬಿ ಬಂಪ್ ಕಾಣುವಂತೆ ಧರಿಸಿದ್ದ ಕಾಸ್ಟ್ಲಿ ರೆಡ್ ಡ್ರೆಸ್ ಎಲ್ಲರ ಗಮನ ಸೆಳೆಯಿತು.
ಕಿಯಾರ ಧರಿಸಿದ್ದ ದುಬಾರಿ ಬಟ್ಟೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬಾಲಿವುಡ್ನ ಜನಪ್ರಿಯ ಸ್ಟಾರ್ ಜೋಡಿ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಇತ್ತೀಚೆಗೆ ʻಕಾಫಿ ವಿತ್ ಕರಣ್ʼ ಶೋನಲ್ಲಿ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಂಡು ಅಭಿಮಾನಿಗಳ ಗಮನ ಸೆಳೆದಿದ್ದಾರೆ.
ಈ ಕಾರ್ಯಕ್ರಮದಲ್ಲಿ ಕಿಯಾರಾ ಧರಿಸಿದ್ದ ಸಿಲ್ವರ್ ಸ್ಟಾರ್ ವಿನ್ಯಾಸವಿರುವ ರೆಡ್ ಡ್ರೆಸ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಬೇಬಿ ಬಂಪ್ ಕಾಣುವಂತೆ ಕಿಯಾರಾ ಧರಿಸಿದ್ದ ಈ ಉಡುಪು ಫ್ಯಾಷನ್ಗೆ ಹೊಸ ಮೆರುಗು ನೀಡಿದೆ.
ಡ್ರೆಸ್ ವಿಶೇಷತೆ
ಲಂಡನ್ ಮೂಲದ ಡಿಸೈನರ್ ಲೇಬಲ್ ‘ಡೇವಿಡ್ ಕೋಮಾ’ ವಿನ್ಯಾಸಗೊಳಿಸಿದ ‘ಕ್ರಿಸ್ಟಲ್ ಸ್ಟಾರ್ ಮತ್ತು ಸ್ಕಾರ್ಫ್ ಮಿಡಿ ಡ್ರೆಸ್’ ಇದಾಗಿದೆ. ಸೊಂಟದ ಭಾಗದಲ್ಲಿರುವ ಕ್ರಿಸ್ಟಲ್ ಎಂಬ್ರಾಯ್ಡರಿ, ಸಿಲ್ವರ್ ಸ್ಟಾರ್ ಮತ್ತು ನೆಕ್ಸ್ಕಾರ್ಫ್ ವಿನ್ಯಾಸವು ಈ ಉಡುಪಿನ ಪ್ರಮುಖ ಆಕರ್ಷಣೆಯಾಗಿದೆ.
ಅಮೆರಿಕ ಬ್ರ್ಯಾಂಡ್ ತಯಾರಿಸಿದ ಈ ಐಷಾರಾಮಿ ಉಡುಪಿನ ಬೆಲೆ ಬರೋಬ್ಬರಿ 2,68,800 ರೂ. ಆಗಿದೆ.
ಕಿಯಾರಾ ಅವರ ಈ ಕೆಂಪು ಉಡುಪಿನ ವಿನ್ಯಾಸವು 2025ರ ಮೆಟ್ ಗಾಲಾದಲ್ಲಿ ಅವರು ಧರಿಸಿದ್ದ ಗೌರವ್ ಗುಪ್ತಾ ಅವರ ಕಸ್ಟಮ್ ಉಡುಪನ್ನು ರೀ ಕ್ರಿಯೇಟ್ ಮಾಡಿದಂತೆ ಇದೆ ಎಂದು ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಹೋಲಿಕೆ ಮಾಡಿದ್ದಾರೆ. ಕಿಯಾರಾ ಕೂಡ ಈ ಹೋಲಿಕೆಯನ್ನು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.
