ಬಾಲಿವುಡ್ ನಟಿ ಕರೀನಾ ಕಪೂರ್ (kareena kapoor)ಖಾನ್ ದೀಪಾವಳಿ ಪಾರ್ಟಿಯಲ್ಲಿ ಧರಿಸಿದ್ದ ಪೆಂಡೆಂಟ್ (Court Notice) ಇದೀಗ ವಿವಾದಕ್ಕೆ ಕಾರಣವಾಗಿದೆ.
ಸುಮಾರು 200 ವರ್ಷಗಳಷ್ಟು ಹಳೆಯದಾದ ಈ ಆಭರಣದಲ್ಲಿ ಪವಿತ್ರ ಕುರಾನ್ನ ಆಯತುಲ್ ಕುರ್ಸಿ ಪದ್ಯ ಕೆತ್ತಲಾಗಿದೆ ಎನ್ನಲಾಗಿದೆ. ಇದನ್ನು ಫ್ಯಾಷನ್ ಪರಿಕರವಾಗಿ ಧರಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕ ಅಬ್ಬಾಸ್ ಹಫೀಜ್, ಕರೀನಾ ಅವರಿಗೆ ಕಾನೂನು ನೋಟಿಸ್ ಕಳುಹಿಸಿದ್ದಾರೆ.
ಕರೀನಾ ಕಪೂರ್ ಮುಸ್ಲಿಂ ಸಮುದಾಯದ ಕ್ಷಮೆ ಕೇಳಬೇಕು ಎಂದು ಹಫೀಜ್ ಒತ್ತಾಯಿಸಿದ್ದಾರೆ. ಕುರಾನ್ನ ವಚನಗಳು ಮುಸ್ಲಿಮರಿಗೆ ಧಾರ್ಮಿಕವಾಗಿ ಅತ್ಯಂತ ಮಹತ್ವದ್ದಾಗಿವೆ. ಅವುಗಳನ್ನು ಗೌರವದಿಂದ ಕಾಣಬೇಕು. ಕೆಲವರು ಧಾರ್ಮಿಕ ಶುದ್ಧೀಕರಣವಾದ ವುಡು ಮಾಡದೆ ಕುರಾನ್ನ ವಚನಗಳನ್ನು ಮುಟ್ಟುವುದನ್ನೂ ತಪ್ಪಿಸುತ್ತಾರೆ ಎಂದು ಅವರು ಹೇಳಿದ್ದಾರೆ.
ತಮ್ಮ ಈ ಕ್ರಮ ರಾಜಕೀಯ ಉದ್ದೇಶದಿಂದ ಕೂಡಿಲ್ಲ ಎಂದಿರುವ ಹಫೀಜ್, ಕಾಂಗ್ರೆಸ್ ನಾಯಕನಾಗಿ ಅಲ್ಲ, ಮುಸ್ಲಿಂ ಸಮುದಾಯದೊಂದಿಗಿನ ಸಂಬಂಧದ ಕಾರಣಕ್ಕೆ ಕಾನೂನು ನೋಟಿಸ್ ಕಳುಹಿಸಿರುವುದಾಗಿ ತಿಳಿಸಿದ್ದಾರೆ.
ಸ್ಟೈಲಿಸ್ಟ್ ರಿಯಾ ಕಪೂರ್ ಸ್ಪಷ್ಟನೆ
ಕರೀನಾ ಅವರ ಸ್ಟೈಲಿಸ್ಟ್ ರಿಯಾ ಕಪೂರ್ ಇನ್ಸ್ಟಾಗ್ರಾಂನಲ್ಲಿ ನಟಿಯ ಹಲವು ಫೋಟೋಗಳನ್ನು ಹಂಚಿಕೊಂಡಿದ್ದರು. ಈ ಫೋಟೋಗಳಲ್ಲಿ ಕರೀನಾ ಬೆಳ್ಳಿ ಕಫ್ತಾನ್ ಮತ್ತು ಪೇಟ ಧರಿಸಿದ್ದು, ಪೆಂಡೆಂಟ್ ಕೂಡ ಕಾಣಿಸಿಕೊಂಡಿದೆ.
ರಿಯಾ ಅವರ ಪ್ರಕಾರ, ಕರೀನಾ ಧರಿಸಿದ್ದ ಆಭರಣಗಳು ಭೋಪಾಲ್ ರಾಜಮನೆತನದ ಆಭರಣ ವಿನ್ಯಾಸವಾಗಿದೆ. ಸುಮಾರು 200 ವರ್ಷ ಹಳೆಯದಾದ ಭೋಪಾಲ್ ನವಾಬರ ಕಲ್ಗಿ ಹಾಗೂ 30 ಕ್ಯಾರೆಟ್ ಪಚ್ಚೆಯೊಂದಿಗೆ ಆಯತುಲ್ ಕುರ್ಸಿ ವಚನ ಕೆತ್ತಿರುವ ಆಭರಣವನ್ನೂ ಅವರು ಪ್ರದರ್ಶಿಸಿದ್ದಾರೆ.ಇದನ್ನೂ ಓದಿ: `ನಿಮ್ಮನ್ನು ಸುಮ್ಮನೆ ಬಿಡಲ್ಲʼ – CRPF ಚೆಕ್ಪೋಸ್ಟ್ ಮೇಲೆ ದಾಳಿಗೂ ಮುನ್ನ ಬೆದರಿಕೆ ಹಾಕಿದ್ದ ಬಾಲಕ!
ಈ ಆಭರಣಗಳು ಕರೀನಾ ಅವರ ಸ್ವಂತ ಸಂಗ್ರಹದಲ್ಲಿದ್ದು, ಸೈಫ್ ಅಲಿ ಖಾನ್ ಅವರ ಕುಟುಂಬದ ಮೂಲಕ ಬಂದಿವೆ. ಸೈಫ್ ಅವರ ಅಜ್ಜಿ ಸಾಜಿದಾ ಸುಲ್ತಾನ್ ಅವರು ಭೋಪಾಲ್ನ ಕೊನೆಯ ಆಡಳಿತ ನವಾಬನ ಪುತ್ರಿ ಎಂದು ರಿಯಾ ತಮ್ಮ ಪೋಸ್ಟ್ನಲ್ಲಿ ವಿವರಿಸಿದ್ದಾರೆ.ಇದನ್ನೂ ಓದಿ: ಬೆಳಗಾವಿ ಮಾದರಿಯಲ್ಲಿ 3,600 ರೂ. ದರ ನಿಗದಿಗೆ ಹಾವೇರಿ ಕಬ್ಬು ಬೆಳೆಗಾರರ ಒತ್ತಾಯ – ಇಂದು ಮಹತ್ವದ ಸಭೆ
