ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಬೆಂಗಳೂರು (Bengaluru) ಭೇಟಿ ಹಿನ್ನೆಲೆ ರಾಜಧಾನಿಯಲ್ಲಿ ಭಾರೀ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಪ್ರಧಾನಿ ಸಂಚರಿಸಲಿರುವ ಮಾರ್ಗಗಳಲ್ಲಿ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದ್ದು, ಬದಲಿ ಮಾರ್ಗಗಳನ್ನು (Alternative Routes) ಪೊಲೀಸರು (Police) ಪ್ರಕಟಿಸಿದ್ದಾರೆ.
ಬನ್ನೇರುಘಟ್ಟ ರಸ್ತೆ
ಬನ್ನೇರುಘಟ್ಟ ರಸ್ತೆಯಲ್ಲಿ ಆನೇಪಾಳ್ಯ ಜಂಕ್ಷನ್ನಿಂದ ಡೈರಿ ಸರ್ಕಲ್ ಮೂಲಕ ಜಯದೇವ ಆಸ್ಪತ್ರೆ ಕಡೆಗೆ ಹೋಗುವ ಎಲ್ಲಾ ವಾಹನಗಳ ಸಂಚಾರವನ್ನು ಮೈಕೋಬಂಡೆ ಜಂಕ್ಷನ್ ಮತ್ತು ಡೈರಿ ಸರ್ಕಲ್ ಅಂಡರ್ಪಾಸ್ ಬಳಿ ಕಾರ್ಯಕ್ರಮ ನಡೆಯುವ ವೇಳೆ ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ಇದನ್ನೂ ಓದಿ: ನಾಳೆ ರಾಜ್ಯಕ್ಕೆ ಮೋದಿ ಭೇಟಿ – ಪ್ರಧಾನಿ ಸಂಚರಿಸೋ ಮಾರ್ಗಗಳಲ್ಲಿ ಭಾರೀ ಬಂದೋಬಸ್ತ್; 1,000ಕ್ಕೂ ಅಧಿಕ ಪೊಲೀಸ್ ಭದ್ರತೆ
ಪರ್ಯಾಯ ಮಾರ್ಗ: ಬನ್ನೇರುಘಟ್ಟ ರಸ್ತೆಯಲ್ಲಿ ಆನೇಪಾಳ್ಯ ಜಂಕ್ಷನ್ ಕಡೆಯಿಂದ ಡೈರಿ ಸರ್ಕಲ್ ಮೂಲಕ ಜಯದೇವ ಆಸ್ಪತ್ರೆ ಕಡೆಗೆ ಸಾಗುವ ವಾಹನಗಳು ಮೈಕೋಬಂಡೆ ಜಂಕ್ಷನ್ನಲ್ಲಿ ಬಲತಿರುವು ಪಡೆದು
ನ್ಯೂ ಮೈಕೋ ರಸ್ತೆ ಮೂಲಕ ಆಡುಗೋಡಿ ಜಂಕ್ಷನ್ಗೆ ಬಂದು ಬಲ ತಿರುವು ಪಡೆದು ಹೊಸೂರು ಲಸ್ಕರ್ ಮುಖ್ಯರಸ್ತೆಯಲ್ಲಿ ಸಾಗುವುದು.
ಕೆಲವು ವಾಹನಗಳು ಬಿ.ಜಿ ರಸ್ತೆಯ ಮುಖಾಂತರ ಸಾಗಿ ಡೈರಿ ಸರ್ಕಲ್ ಸರ್ವಿಸ್ ರಸ್ತೆಯಲ್ಲಿ ಸಾಗಿ ಡೈರಿ ಸರ್ಕಲ್ ಜಂಕ್ಷನ್ನಲ್ಲಿ ಎಡ ತಿರುವು ಪಡೆದು, ಡಾ.ಮರಿಗೌಡ ರಸ್ತೆಯ ಮುಖಾಂತರ ಮಡಿವಾಳ ಚೆಕ್ಪೋಸ್ಟ್ ಮತ್ತು ಹೊಸೂರು ರಸ್ತೆಗೆ ತಲುಪಿ ಮುಂದೆ ಸಾಗುವುದು.
ಜಯನಗರ ಸಂಚಾರ ಠಾಣೆ
ಜಯನಗರ ಸಂಚಾರ ಪೊಲೀಸ್ ಠಾಣಾ ಸರಹದ್ದಿನ ಮಾರೆನಹಳ್ಳಿ ಮುಖ್ಯ ರಸ್ತೆಯ 28ನೇ ಮುಖ್ಯ ರಸ್ತೆ ಕಡೆಯಿಂದ ಜಯದೇವ ಹಾಸ್ಪಿಟಲ್ ಜಂಕ್ಷನ್ ಕಡೆಗೆ ಸಂಚಾರವನ್ನು ವಿವಿಐಪಿಗಳ ಸಂಚಾರದ ಸಮಯದಲ್ಲಿ ದೈನಂದಿನ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಈಸ್ಟ್ ಎಂಡ್ ಮುಖ್ಯ ರಸ್ತೆಯ ಈಸ್ಟ್ ಎಂಡ್ ಜಂಕ್ಷನ್ನಿಂದ ಸ್ವಾಗತ್ ಜಂಕ್ಷನ್ ಮೂಲಕ ಬನ್ನೇರುಘಟ್ಟ ರಸ್ತೆ ಕಡೆಗೆ ಸಂಚರಿಸುವ ವಾಹನಗಳ ಸಂಚಾರವನ್ನು ಪ್ರಧಾನಿಗಳು ಸಂಚರಿಸುವ ವೇಳೆ ನಿರ್ಬಂಧಿಸಲಾಗಿದೆ.
ಪರ್ಯಾಯ ಮಾರ್ಗ: ದೈನಂದಿನ ವಾಹನಗಳನ್ನು 28ನೇ ಮುಖ್ಯ ರಸ್ತೆಯಲ್ಲಿ ನಿರ್ಬಂಧಿಸುವುದರಿಂದ ಬನಶಂಕರಿ ಕಡೆಯಿಂದ ಸ್ಪೋಕ್ ಬೆಡ್ ಕಡೆಗೆ ಸಂಚರಿಸುವ ವಾಹನ ಸವಾರರು, ರಾಗಿಗುಡ್ಡ ಡಬಲ್ ಡೆಕ್ಕರ್ ರಸ್ತೆ ಮೂಲಕ ಸ್ಪೋಕ್ ಬೆಡ್ ಕಡೆಗೆ ಸಂಚರಿಸುವುದು. (ವಿವಿಐಪಿಗಳ ಸಂಚಾರವಿರುವ ಸಮಯವನ್ನು ಹೊರತುಪಡಿಸಿ)
ಈಸ್ಟ್ ಎಂಡ್ ಜಂಕ್ಷನ್ ಕಡೆಯಿಂದ ಸ್ವಾಗತ್ ಜಂಕ್ಷನ್ ಕಡೆಗೆ ಸಂಚರಿಸುವ ವಾಹನ ಸವಾರರು, 28ನೇ ಮುಖ್ಯ ರಸ್ತೆ ಮೂಲಕ ಹಾಗೂ ಈಸ್ಟ್ ಎಂಡ್ ರಸ್ತೆ ಮೂಲಕ ಬಲ ಮತ್ತು ಎಡ ತಿರುವು ಪಡೆದುಕೊಂಡು ಸ್ವಾಗತ್ ರಸ್ತೆ ಕಡೆಗೆ ಹಾಗೂ ಜೆ.ಪಿ ನಗರ ಡಾಲರ್ಸ್ ಜಂಕ್ಷನ್ ಕಡೆಗೆ ಸಂಚರಿಸ ಬಹುದಾಗಿರುತ್ತದೆ.
ಜೆ.ಪಿ ನಗರ ಸಂಚಾರ ಪೊಲೀಸ್ ಠಾಣೆ
ಹೊರಮಾವು ರಸ್ತೆಯ 15ನೇ ಕ್ರಾಸ್, 24ನೇ ಮುಖ್ಯರಸ್ತೆಯ ಜಂಕ್ಷನ್ನಿಂದ ಬನ್ನೇರುಘಟ್ಟ ರಸ್ತೆಯ ಜೆ.ಡಿ ಮಾರ ಜಂಕ್ಷನ್ವರೆಗೆ ಸಂಚಾರ ನಿರ್ಬಂಧಿಸಲಾಗಿದೆ.
ಆರ್.ವಿ ಡೆಂಟಲ್ ಜಂಕ್ಷನ್ನಿಂದ ಬನ್ನೇರುಘಟ್ಟ ಮುಖ್ಯರಸ್ತೆಯ ವರೆಗೆ (9ನೇ ಅಡ್ಡ ರಸ್ತೆ) ಸಂಚಾರ ನಿರ್ಬಂಧಿಸಲಾಗಿದೆ.
ಬಿ.ಪಿ.ಎಲ್ ಅರಕೆರೆ ಮುಖ್ಯರಸ್ತೆ, ಬನ್ನೇರುಘಟ್ಟ ಮುಖ್ಯರಸ್ತೆಯವರೆಗೆ ಸಂಚಾರ ನಿರ್ಬಂಧಿಸಲಾಗಿದೆ.
ಪರ್ಯಾಯ ಮಾರ್ಗ: ದೈನಂದಿನ ವಾಹನಗಳನ್ನು 15ನೇ ಕ್ರಾಸ್ನಿಂದ ಜೆ.ಡಿ ಮಾರ್ಗದವರೆಗೂ ನಿರ್ಬಂಧಿಸಲಾಗಿದೆ. ಹೊಸೂರು ರಸ್ತೆಯ ಕಡೆಗೆ ಹೋಗುವ ವಾಹನ ಸವಾರರು ಕನಕಪುರ ಮುಖ್ಯರಸ್ತೆ ಬನಶಂಕರಿ ಬಸ್ ನಿಲ್ದಾಣದ ಮೂಲಕ 46ನೇ ಅಡ್ಡ ರಸ್ತೆಯ ಮೂಲಕ ಸಂಚರಿಸುವುದು.
ಬನ್ನೇರುಘಟ್ಟ ರಸ್ತೆ ಕಡೆಗೆ ಹೋಗುವವರು ಕನಕಪುರ ಮುಖ್ಯರಸ್ತೆಯಲ್ಲಿ ಹಾಗೆಯೇ ಮುಂದುವರೆದು ಕೋಣನಕುಂಟೆ ಕ್ರಾಸ್ ಅಥವಾ ಎ2ಬಿ ಜಂಕ್ಷನ್ನಲ್ಲಿ ಎಡ ತಿರುವು ಪಡೆದು ಹೋಗುವುದು.
ಬಿ.ಪಿ.ಎಲ್ ಅರಕೆರೆ ಮುಖ್ಯ ರಸ್ತೆಯಲ್ಲಿ ಸಂಚರಿಸುವವರು ಕೊತ್ತನೂರು ದಿಣ್ಣೆ ರಸ್ತೆಯ ಮೂಲಕ ಸಂಚರಿಸುವುದು.
ತಲಘಟ್ಟಪುರ ಸಂಚಾರ ಪೊಲೀಸ್ ಠಾಣೆ
ಅಂಜನಾಪುರ 80 ಅಡಿ ರಸ್ತೆಯಿಂದ ಬನ್ನೇರುಘಟ್ಟ ರಸ್ತೆ ಕಡೆಗೆ ಹೋಗುವ ವಾಹನಗಳ ಸಂಚಾರವನ್ನು ವಿ.ವಿ.ಐ.ಪಿಗಳ ಸಂಚಾರದ ಸಮಯದಲ್ಲಿ ದೈನಂದಿನ ವಾಹನಗಳ ಸಂಚಾರವನ್ನು ನಿರ್ಬಂಧ
ಗೊಟ್ಟಿಗೆರೆ ಕರ ಹತ್ತಿರ ಮತ್ತು ಕೆನರಾ ಬ್ಯಾಂಕ್ ಮೂಲಕ ಬನ್ನೇರುಘಟ್ಟ ರಸ್ತೆ ಕಡೆಗೆ ಸಂಚರಿಸುವ ವಾಹನಗಳ ಸಂಚಾರವನ್ನು ವಿವಿಐಪಿಗಳು ಸಂಚರಿಸುವ ವೇಳೆ ನಿರ್ಬಂಧಿಸಲಾಗಿದೆ.
ಲೊಯೋಲಾ ಶಾಲೆಯ ಮುಂಭಾಗದ ಮೂಲಕ ಬನ್ನೇರುಘಟ್ಟ ರಸ್ತೆ ಕಡೆಗೆ ಹೋಗುವ ವಾಹನಗಳ ಸಂಚಾರವನ್ನು ವಿವಿಐಪಿಗಳು ಸಂಚರಿಸುವ ವೇಳೆ ನಿರ್ಬಂಧಿಸಲಾಗಿದೆ.
ಪರ್ಯಾಯ ಮಾರ್ಗ: ಬನ್ನೇರುಘಟ್ಟ ಮುಖ್ಯರಸ್ತೆಯಿಂದ ಬರುವ ವಾಹನಗಳು ಅಂಜನಾಪುರ 80 ಅಡಿ ರಸ್ತೆ ಬಿ.ಟಿ.ಎಂ ಡಿಪೋ ತಲಘಟ್ಟಪುರ ಅಗ್ನಿಶಾಮಕ ಠಾಣೆ ಬಳಿ ಮಾರ್ಗವಾಗಿ ಲಾಲ್ ಬಹದ್ದೂರ್ ಶಾಸ್ತ್ರಿ ನಗರ, ನಾರಾಯಣ ನಗರ ಜೆ.ಡಿ ರಸ್ತೆ ಮೂಲಕ ಕನಕಪುರ ರಸ್ತೆ ಎ2ಬಿ ಜಂಕ್ಷನ್ ಮೂಲಕ ಸಂಚರಿಸುವುದು.
ಗೊಟ್ಟಿಗೆರೆ ಕಡೆಯಿಂದ ಬರುವ ವಾಹನಗಳು ಬಿಕ್ಕ ಸರ್ಕಲ್, ಜಾಂಬುಸವಾರಿದಿಣ್ಣೆ ಭೈರಪ್ಪ ಸರ್ಕಲ್ ಮೂಲಕ ಗ್ಲಾಸ್ ಫ್ಯಾಕ್ಟರಿ, ಹರಿನಗರ ಕ್ರಾಸ್ ಕೋಣನಕುಂಟೆ ಕ್ರಾಸ್ ಮೂಲಕ ಕನಕಪುರ ರಸ್ತೆಯಲ್ಲಿ ಸಂಚರಿಸುವುದು.
ಲೊಯೋಲಾ ಶಾಲೆಯ ರಸ್ತೆ ವಾಹನಗಳು ಬಿಕ್ಕ ಸರ್ಕಲ್, ಬ್ರಿಗೇಡ್ ಮಿಲೇನಿಯಮ್ ಸಿಗ್ನಲ್, ಜೆ.ಪಿ ನಗರ ಪುಟ್ಟೇನಹಳ್ಳಿ ಕರ ಮೂಲಕ ಸಂಚರಿಸುವುದು.
ಹುಳಿಮಾವು ಸಂಚಾರ ಪೊಲೀಸ್ ಠಾಣೆ
ಹುಳಿಮಾವು ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಬನ್ನೇರುಘಟ್ಟ ಮುಖ್ಯ ರಸ್ತೆಯಿಂದ ಅರಕೆರೆ / ಬಿಲೇಕಹಳ್ಳಿ / ಮೈಕೋ ಲೇಔಟ್ / ಡೈರಿ ಸರ್ಕಲ್ ಹಾಗೂ ನಗರದ ಕಡೆಗೆ ಸಂಚರಿಸುವ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿರುತ್ತದೆ.
ಪರ್ಯಾಯ ಮಾರ್ಗಗಳು
ಕೋಳಿಫಾರ್ಮ್ ಗೇಟ್ ಜಂಕ್ಷನ್: ಬನ್ನೇರುಘಟ್ಟ ಗ್ರಾಮಾಂತರ ಕಡೆಯಿಂದ ಬರುವ ವಾಹನಗಳು ಕೋಳಿ ಫಾರ್ಮ್ ಗೇಟ್ ಜಂಕ್ಷನ್ನಲ್ಲಿ ಬಲತಿರುವು ಪಡೆದು, ಎಸ್.ಕೆ. ಪಾಳ್ಯ ಜಂಕ್ಷನ್ ಮೂಲಕ ಸಾಗಿ, ಬೇಗೂರು-ಕೊಪ್ಪ ರಸ್ತೆ ಹಾಗೂ ಹೊಸೂರು ರಸ್ತೆ ಮಾರ್ಗವಾಗಿ ನಗರದ ಕಡೆಗೆ ಸಂಚರಿಸುವುದು.
ಶೇರ್ವುಡ್ ಜಂಕ್ಷನ್: ಶೇರ್ವುಡ್ ಜಂಕ್ಷನ್ ಬಳಿ ಬಲತಿರುವು ಪಡೆದು ನೈಸ್ ರಸ್ತೆ ಮೂಲಕ ಸಾಗಿ ಕನಕಪುರ ರಸ್ತೆ ಮಾರ್ಗವಾಗಿ ನಗರದ ಕಡೆಗೆ ಸಂಚರಿಸುವುದು.
ಬಿಡಿಎ ಜಂಕ್ಷನ್: ಬನ್ನೇರುಘಟ್ಟ ಮುಖ್ಯ ರಸ್ತೆಯಲ್ಲಿ ಬರುವ ವಾಹನಗಳು ಬಿಡಿಎ ಜಂಕ್ಷನ್ನಲ್ಲಿ ಎಡತಿರುವು ಪಡೆದು ತೆರಳುವುದು.
ಅಂಜನಾಪುರ 80 ಅಡಿ ರಸ್ತೆ ಮಾರ್ಗವಾಗಿ ಸಾಗಿ, ಕನಕಪುರ ರಸ್ತೆ ತಲುಪಿ ನಗರದ ಕಡೆಗೆ ಸಂಚರಿಸಬಹುದಾಗಿರುತ್ತದೆ.
ಗೊಟ್ಟಿಗೆರೆ ಜಂಕ್ಷನ್: ಬನ್ನೇರುಘಟ್ಟ ಮುಖ್ಯ ರಸ್ತೆಯಲ್ಲಿ ಬರುವ ವಾಹನಗಳು ಗೊಟ್ಟಿಗೆರೆ ಜಂಕ್ಷನ್ನಲ್ಲಿ ಎಡತಿರುವು ಪಡೆದು, ಜಂಬೂಸವಾರಿ ದಿಣ್ಣೆ ರಸ್ತೆ ಮಾರ್ಗವಾಗಿ ಸಾಗಿ, ಕನಕಪುರ ರಸ್ತೆ ತಲುಪಿ ನಗರದ ಕಡೆಗೆ ಸಂಚರಿಸಬಹುದಾಗಿರುತ್ತದೆ.
ಕಮ್ಮನಹಳ್ಳಿ ಜಂಕ್ಷನ್: ಬನ್ನೇರುಘಟ್ಟ ಮುಖ್ಯ ರಸ್ತೆಯಲ್ಲಿ ಬರುವ ವಾಹನಗಳು ಕಮ್ಮನಹಳ್ಳಿ ಜಂಕ್ಷನ್ನಲ್ಲಿ ಬಲತಿರುವು ಪಡೆದು, ದೊಡ್ಡಕಮ್ಮನಹಳ್ಳಿ ರಸ್ತೆ – ಹುಳಿಮಾವು ಲೇಕ್ ರಸ್ತೆ – ಡಿಎಲ್ಎಫ್ ಹುಳಿಮಾವು ರಸ್ತೆ – ಸರ ಎಂ.ವಿ ರಸ್ತೆ ಮಾರ್ಗವಾಗಿ ಸಾಗಿ, ಮೈಕೋ ಲೇಔಟ್ / ಬಿಲೇಕಹಳ್ಳಿ / ನಗರದ ಕಡೆಗೆ ಸಂಚರಿಸಬಹುದಾಗಿರುತ್ತದೆ.
ಮೀನಾಕ್ಷಿ ಮಾಲ್ ಜಂಕ್ಷನ್: ಬನ್ನೇರುಘಟ್ಟ ಮುಖ್ಯ ರಸ್ತೆಯಲ್ಲಿ ಬರುವ ವಾಹನಗಳು ಮೀನಾಕ್ಷಿ ಮಾಲ್ ಜಂಕ್ಷನ್ನಲ್ಲಿ ಬಲತಿರುವು ಪಡೆದು, ಕೇವ್ ಟೆಂಪಲ್ ರಸ್ತೆ – ಡಿಎಲ್ಎಫ್ ಹುಳಿಮಾವು ರಸ್ತೆ – ಸರ್ ಎಂ.ವಿ ರಸ್ತೆ ಮಾರ್ಗವಾಗಿ ಸಾಗಿ, ಮೈಕೋ ಲೇಔಟ್ / ಬಿಲೇಕಹಳ್ಳಿ / ಹೊಸೂರು ರಸ್ತೆ ಮಾರ್ಗವಾಗಿ ನಗರದ ಕಡೆಗೆ ಸಂಚರಿಸಬಹುದಾಗಿರುತ್ತದೆ.
ಸಾಯಿ ಗಾರ್ಮೆಂಟ್ ಜಂಕ್ಷನ್: ಬನ್ನೇರುಘಟ್ಟ ಮುಖ್ಯ ರಸ್ತೆಯಲ್ಲಿ ಬರುವ ವಾಹನಗಳು ಸಾಯಿ ಗಾರ್ಮೆಂಟ್ ಜಂಕ್ಷನ್ನಲ್ಲಿ ಬಲತಿರುವು ಪಡೆದು, ಅರಕೆರೆ 80 ಅಡಿ ರಸ್ತೆ ಮಾರ್ಗವಾಗಿ ಸಾಗಿ, ಸರ್ ಎಂ.ವಿ ರಸ್ತೆ ಮೂಲಕ ಮೈಕೋ ಲೇಔಟ್ / ಬಿಲೇಕಹಳ್ಳಿ / ಹೊಸೂರು ರಸ್ತೆ ಮಾರ್ಗವಾಗಿ ನಗರದ ಕಡೆಗೆ ಸಂಚರಿಸಬಹುದಾಗಿರುತ್ತದೆ.
ಮೈಕೋ ಲೇಔಟ್ ಸಂಚಾರ ಪೊಲೀಸ್ ಠಾಣೆ: ವ್ಯಾಪ್ತಿಯ ಡೈರಿ ಸರ್ಕಲ್ ಜಂಕ್ಷನ್ನಿಂದ ಅರಕೆರೆ ಜಂಕ್ಷನ್ ವರೆಗೆ ಬನ್ನೇರುಘಟ್ಟ ರಸ್ತೆಯಲ್ಲಿ ವಿ.ವಿ.ಐ.ಪಿಗಳು ಸಂಚರಿಸುವ ಸಂದರ್ಭದಲ್ಲಿ ಸಂಚಾರವನ್ನು ನಿರ್ಬಂಧಿಸಲಾಗಿರುತ್ತದೆ. ಇದನ್ನೂ ಓದಿ: ಬಿಜೆಪಿ ಅವರು ರೀಲ್ಸ್ ರಾಜರು: ಪ್ರಿಯಾಂಕ್ ಖರ್ಗೆ ಕಿಡಿ
ವಾಹನ ನಿಲುಗಡೆ ನಿಷೇಧವಿರುವ ರಸ್ತೆಗಳ ವಿವರ
– 8ನೇ ಮುಖ್ಯರಸ್ತೆ, ಜೆ.ಪಿ ನಗರ 2ನೇ ಹಂತ
– 15ನೇ ಕ್ರಾಸ್ ರಸ್ತೆಯ ಡಾಲರ್ಸ್ ಜಂಕ್ಷನ್ನಿಂದ ಬನ್ನೇರುಘಟ್ಟ ಮುಖ್ಯರಸ್ತೆಯ ವರೆಗೆ
– ಮಾರೆನಹಳ್ಳಿ ಮುಖ್ಯ ರಸ್ತೆ, ತಿಲಕ್ನಗರ
– ಈಸ್ಟ್ ಎಂಡ್ ಮುಖ್ಯ ರಸ್ತೆ, ತಿಲಕ್ನಗರ
– ಸ್ವಾಗತ್ ಮುಖ್ಯ ರಸ್ತೆ, ತಿಲಕ್ನಗರ
– 28ನೇ ಮುಖ್ಯ ರಸ್ತೆ, ಮಾರೆನಹಳ್ಳಿ
