ರೊಮ್ಯಾಂಟಿಕ್ ಸಿನಿಮಾಗಳ ಮೂಲಕ ಮೋಡಿ ಮಾಡೋ ಪ್ರೀತಮ್ ಗುಬ್ಬಿ(Preetham Gubbi) ನಿರ್ದೇಶನದ ಹೊಸ ಸಿನಿಮಾ ‘ಮೈ ಬೇಬಿ’ಯಿಂದ(My Baby) ಒಂದು ಬಿಗ್ ಅಪ್ಡೇಟ್ ಬಂದಿದೆ. ಚಿತ್ರದ ಮೊದಲ ಸಾಂಗ್ ‘ಮಾತು ನೀನೆ’ ನವೆಂಬರ್ 11ರಂದು ರಿಲೀಸ್ ಆಗಿದ್ದು, ವಿಶೇಷ ಅಂದ್ರೆ, ಈ ರೊಮ್ಯಾಂಟಿಕ್ ಟ್ರ್ಯಾಕ್ ಅನ್ನು ಸಂಗೀತ ಮಾಂತ್ರಿಕ, ಆಸ್ಕರ್ ವಿನ್ನರ್ ಎ.ಆರ್. ರೆಹಮಾನ್(AR Rahman) ಲಾಂಚ್ ಮಾಡಿದ್ದಾರೆ. ಗ್ಲೋಬಲ್ ಲೆವೆಲ್ನ ಮ್ಯೂಸಿಕ್ ಐಕಾನ್ ಕನ್ನಡದ(Kannada) ಹಾಡನ್ನು ರಿಲೀಸ್ ಮಾಡುತ್ತಿರುವುದು ಇಡೀ ತಂಡಕ್ಕೆ ಸಖತ್ ಖುಷಿ ತಂದಿದೆ.
ಸುಂದರವಾದ ಹಿಲ್ಸ್ ಹಾಗೂ ನೇಚರ್ ವೈಬ್ಸ್ ನಡುವೆ ಸಾಗುವ ಈ ಮೆಲೋಡಿಗೆ ಯಂಗ್ ಮ್ಯೂಸಿಕ್ ಡೈರೆಕ್ಟರ್ ನಕುಲ್ ಅಭ್ಯಂಕರ್ ರಾಗ ಸಂಯೋಜಿಸಿದ್ದಾರೆ. ನಾಗಾರ್ಜುನ್ ಶರ್ಮಾ ಅವರ ಸೂಪರ್ ಸಾಹಿತ್ಯಕ್ಕೆ ಜಸ್ಕಿರಣ್ ಸಿಂಗ್ ವಾಯ್ಸ್ ಕೊಟ್ಟಿದ್ದು, ಕೇಳುಗರಲ್ಲಿ ವೈಬ್ ಕ್ರಿಯೇಟ್ ಮಾಡೋ ಎಲ್ಲಾ ಲಕ್ಷಣಗಳಿವೆ.
ಹಾಡಿನಲ್ಲಿ ಲವ್ವರ್ಸ್ ಆಗಿ ಕಾಣಿಸಿಕೊಂಡಿರೋ ಸುಮುಖ್ ಮತ್ತು ಇಶಾ ಲಂಕೇಶ್ ಕೆಮಿಸ್ಟ್ರಿ ಸಖತ್ ಕ್ಯೂಟ್ ಆಗಿ ಮೂಡಿಬಂದಿದೆ. ಸುಂದರ ಪರ್ವತಗಳ ನಡುವಿನ ಈ ಕಪಲ್ ಜರ್ನಿಯನ್ನು ಸಿನಿಮಾಟೋಗ್ರಾಫರ್ ಅಭಿಲಾಷ್ ಕಳತ್ತಿ ತಮ್ಮ ಕ್ಯಾಮೆರಾದಲ್ಲಿ ಅದ್ಭುತವಾಗಿ ಸೆರೆಹಿಡಿದಿದ್ದಾರೆ.
‘ನಿಧಿ ಫಿಲ್ಮ್ಸ್ ಪ್ರೊಡಕ್ಷನ್ಸ್’ ಅಡಿಯಲ್ಲಿ ರಂಗನಾಥ್ ಕೆಂಪನಹಳ್ಳಿ (ಆರ್.ಕೆ) ಚಿತ್ರವನ್ನು ಅದ್ದೂರಿಯಾಗಿ ನಿರ್ಮಿಸಿದ್ದು, ಕೆ.ಎಂ. ಪ್ರಕಾಶ್ ಅವರ ಎಡಿಟಿಂಗ್ ಚಿತ್ರಕ್ಕಿದೆ. ಮೊದಲ ಹಾಡಿನ ಅನೌನ್ಸ್ಮೆಂಟ್ನಿಂದಲೇ ‘ಮೈ ಬೇಬಿ’ ಸಿನಿಮಾ ಯೂತ್ಸ್ ಮತ್ತು ಮ್ಯೂಸಿಕ್ ಲವರ್ಸ್ನಲ್ಲಿ ದೊಡ್ಡ ಹೈಪ್ ಕ್ರಿಯೇಟ್ ಮಾಡಿದೆ.

