– ಬರ ಪರಿಹಾರದ ಮೊತ್ತ ಕಡಿಮೆ ಹೋಗಿರುವ ರೈತರಿಗೆ ಹಣ ಪಾವತಿ ಮಾಡ್ತೀವಿ
– ಪ್ರಧಾನಿ ಮೋದಿ ಮುಂದೆ ಬರ ಪರಿಹಾರದ ವಿಚಾರ ಪ್ರಸ್ತಾಪ
ಬೆಂಗಳೂರು: ಬಿಜೆಪಿ ಅವರು ಮೋದಿ (Modi) ಅಂದ ಕೂಡಲೇ ಗಢಗಢ ಅಂತ ನಡುಗಿ ಹೋಗ್ತಾರೆ. ಜೀವ ಹೋದ್ರೂ ಪರವಾಗಿಲ್ಲ, ಮೋದಿ ಹೈ ತೋ ಮುಮ್ಕಿನ್ ಹೈ ಅಂತಾನೆ ಘೋಷಣೆ ಹೊಡೆದು ಸಾಯೋದು ಇವರೆಲ್ಲ ಎಂದು ಪ್ರಿಯಾಂಕ್ ಖರ್ಗೆ (Priyank Kharge) ಅವರು ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಮಾತಾಡಿದ ಅವರು, ಬಿಜೆಪಿ ಅವರು ಇಷ್ಟೆಲ್ಲ ಬೈಯ್ಯುವ ಬದಲು ನಮ್ಮ ಜೊತೆ ಬರಲಿ ಮೋದಿ ಮುಂದೆ ಹೋಗೋಣ. ಪ್ರಸ್ತಾವನೆ ಇಡೋಣ. ಮೋದಿ ಅಂದ ಕೂಡಲೇ ಬಿಜೆಪಿ ಅವರು ಗಢಗಢ ಅಂತ ನಡುಗಿ ಹೋಗ್ತಾರೆ. ಆಗ ಬಿಜೆಪಿ ಅವರು ಬಾಯಿ ಬಿಚ್ಚಲ್ಲ. ನಮಗೆ ಅನ್ಯಾಯ ಆದ್ರು ಪರವಾಗಿಲ್ಲ. ನಮ್ಮನ್ನು ಸಾಯಿಸಿ ಬಿಟ್ಟರೂ ಪರವಾಗಿಲ್ಲ. ಆದರೆ ಮೋದಿ ಮಹಾನ್ ಹೇ ಅಂತಾರೆ. ನಿಮ್ಮ ಜೀವ ಹೋದ್ರೂ ಪರವಾಗಿಲ್ಲ, ಮೋದಿ ಹೈ ತೋ ಮುಮ್ಕಿನ್ ಹೈ ಅಂತಾನೆ ಘೋಷಣೆ ಹೊಡೆದು ಸಾಯೋದು ಇವರೆಲ್ಲ ಅಂತ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.ಇದನ್ನೂ ಓದಿ: ಮಕ್ಕಳಾಗಿಲ್ಲ ಅಂತ ಚೇಡಿಸುತ್ತಿದ್ದ ಗಂಡನನ್ನ ಚುಚ್ಚಿ ಕೊಂದ ಪತ್ನಿ
ಸರ್ಕಾರದ ಖಜಾನೆ ಖಾಲಿ ಆಗಿದೆ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಅವರದ್ದು ಅರ್ಥನೇ ಆಗಲ್ಲ. ಹಾಲಿನ ದರ ಏರಿಕೆ ಬಗ್ಗೆ ಪ್ರತಿಭಟನೆ ಮಾಡ್ತಾರೆ ಮಾಡಿ. ನಿನ್ನೆ (ನ.11) ಮಹಾರಾಷ್ಟ್ರದಲ್ಲಿ ಅಮೂಲ್ದು ಆಯ್ತು ಅದರದ್ದು ಏನು ವಿಚಾರ? ಪೆಟ್ರೋಲ್-ಡಿಸೇಲ್ ಏರಿಕೆ ಬಗ್ಗೆ ಬಿಜೆಪಿ ಅವರ ವಿಶೇಷ ಟಿಪ್ಪಣಿ ಇಲ್ಲವಾ? ಬೆಲೆ ಏರಿಕೆ 13 ವರ್ಷದಿಂದ ಎಷ್ಟು ಆಗಿದೆ. ನಿತ್ಯ ಬಳಕೆ ವಸ್ತು ದುಬಾರಿ ಆಗ್ತಿದೆ. ಅದರ ಬಗ್ಗೆ ಇಲ್ಲವಾ ಅಂತ ಕಿಡಿಕಾರಿದ್ದಾರೆ.
ಇದೇ ವೇಳೆ ಬರ ಪರಿಹಾರದ ಬಗ್ಗೆ ಮಾತನಾಡಿ, ಈಗಾಗಲೇ ಸಿಎಂ, ಕಂದಾಯ ಸಚಿವರು ಲೋಪ ಸರಿಪಡಿಸೋದಾಗಿ ಹೇಳಿದ್ದಾರೆ. ಬ್ಯಾಂಕಿಂಗ್ ವ್ಯವಸ್ಥೆ ದೀಪಾವಳಿ ಇದಿದ್ದಕ್ಕೆ ಸಂಪೂರ್ಣವಾಗಿ ಕೆಲಸ ಮಾಡಿರಲಿಲ್ಲ ಅಂತ ಮಾಹಿತಿ ಇದೆ. ಅದನ್ನ ಸರಿ ಮಾಡೋಣ. ನಮ್ಮ ಬಳಿ ಡಾಟಾ ಇದೆ. ಡಿಬಿಟಿ ವ್ಯವಸ್ಥೆ ಇದೆ. ಇದನ್ನ ಮಾಡ್ತೀವಿ. ಡೇಟಾ ಎಂಟ್ರಿ ಸಮಯದಲ್ಲಿ ಏನಾದ್ರು ಆಗಿರುತ್ತದೆ. ಮಾಹಿತಿ ಸರಿ ಇದ್ದರೆ ಎಷ್ಟು ಹಣ ಕೊಡಬೇಕು ಅಂತ ಇದೆಯೋ ಅಷ್ಟು ಕೊಡೋದಾಗಿ ಡಿಸಿಎಂ ಹೇಳಿದ್ದಾರೆ. ಅದನ್ನ ಮಾಡ್ತೀವಿ ಎಂದಿದ್ದಾರೆ.ಇದನ್ನೂ ಓದಿ: ಅರಿಶಿಣ ಶಾಸ್ತ್ರ ಮಾಡಬೇಕಿತ್ತು.. ತಿಥಿ ಮಾಡೋ ಹಾಗಾಯ್ತು – ಮಗಳ ನೆನೆದು ತಂದೆ ಕಣ್ಣೀರು
ಪ್ರಧಾನಿ ಮೋದಿ ಮುಂದೆ ಬರ ಪರಿಹಾರದ ವಿಚಾರ ಪ್ರಸ್ತಾಪ:
ನಾಳೆ ಮೋದಿ ಅವರಿಗೆ ಸಿಎಂ ಬರ ಪರಿಹಾರದ ಮನವಿ ಮಾಡ್ತಾರೆ. ಬಿ.ಆರ್. ಪಾಟೀಲ್ (BR Patil) ನಿನ್ನೆ ಪ್ರತಿಭಟನೆ ಮಾಡಿದ್ದಾರೆ. ಇದನ್ನ ರಾಷ್ಟ್ರೀಯ ವಿಪತ್ತು ಅಂತ ಘೋಷಣೆ ಮಾಡಿ ಅಂತ ಒತ್ತಾಯ ಮಾಡಿದ್ದಾರೆ. ಬಿಜೆಪಿ ಅವರು ಸೋನಿಯಾ ಗಾಂಧಿ ಬುಕ್ ಬಗ್ಗೆ ಚರ್ಚೆ ಮಾಡ್ತಾ ಇದ್ದಾರೆ, ಹೊರತು ರೈತರ ಕಣ್ಣು ಒರೆಸಲು ಕೇಂದ್ರ ಸರ್ಕಾರದಿಂದ ಪ್ರಯತ್ನ ಮಾಡಿಲ್ಲ. ಬಿಜೆಪಿ ಅವರ ಅದ್ಯತೆ ಸೋನಿಯಾ ಗಾಂಧಿ ಏನ್ ಬರೆದಿದ್ದಾರೆ, ಏನ್ ಮಾಡ್ತಾ ಇದ್ದಾರೆ. ರಾಹುಲ್ ಗಾಂಧಿ ಎಲ್ಲಿ ಹೋದ್ರು, ಅವರು ಏನ್ ಹಾಕಿದ್ದಾರೆ ಅಷ್ಟಕ್ಕೆ ಸೀಮಿತವಾಗಿದ್ದಾರೆ. ರೈತರ ಕಣ್ಣೀರು ಒರೆಸೋಕೆ ಬಿಜೆಪಿ ಅವರಿಗೆ ಇಷ್ಟ ಇಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ಬರವನ್ನು ರಾಷ್ಟ್ರೀಯ ವಿಪತ್ತು ಅಂತ ಘೋಷಣೆ ಮಾಡಲು ಒತ್ತಾಯ ಮಾಡ್ತೀರಾ ಎಂಬ ವಿಚಾರಕ್ಕೆ ಸೂಪರ್ ಎಲ್ ನಿನೋ ನಮಗೆ ಮಾತ್ರ ಆಗಿಲ್ಲ. ದೇಶದಲ್ಲಿ ಆಗಿದೆ. ನಮ್ಮ ರಾಜ್ಯಕ್ಕೆ ಸೀಮಿತಿ ಆಗಿರೋ ವಿಚಾರವನ್ನು ನಮ್ಮ ಸಿಎಂ ಅವರು ಪ್ರಧಾನಿಗಳ ಬಳಿ ಪ್ರಸ್ತಾಪ ಮಾಡ್ತಾರೆ ಅಂತ ತಿಳಿಸಿದ್ದಾರೆ. ಇದನ್ನೂ ಓದಿ: ಅಭಿಷೇಕ್ ಬ್ಯಾನರ್ಜಿ ಮನೆ ಎದುರಿನ ಶೆಡ್ ಮೇಲೆ ಬುಲ್ಡೋಜರ್ ಕಾರ್ಯಾಚರಣೆ
