ಕೋಲ್ಕತ್ತಾ: ಟಿಎಂಸಿ (TMC) ಸಂಸದ ಅಭಿಷೇಕ್ ಬ್ಯಾನರ್ಜಿಯವರ (Abhishek Banerjee) ಮನೆ ಎದುರಿನ ಶೆಡ್ ಮೇಲೆ ಕೋಲ್ಕತ್ತಾ (Kolkata) ಮುನ್ಸಿಪಲ್ ಕಾರ್ಪೊರೇಷನ್ (KMC) ಅಧಿಕಾರಿಗಳು ಬುಲ್ಡೋಜರ್ ಕಾರ್ಯಾಚರಣೆ ನಡೆಸಿ ನೆಲಸಮಗೊಳಿಸಿದ್ದಾರೆ.
ಇಂದು (ನ.12) ಬೆಳಿಗ್ಗೆ ಬುಲ್ಡೋಜರ್ನೊಂದಿಗೆ ಆಗಮಿಸಿದ ಕೆಎಂಸಿ ಅಧಿಕಾರಿಗಳು, ಕಾಳಿಘಾಟ್ನಲ್ಲಿರುವ ಬ್ಯಾನರ್ಜಿ ಅವರ ಮನೆಯ ಮುಂದೆ ನಿರ್ಮಿಸಲಾಗಿದ್ದ ಶೆಡ್ನ್ನು ತೆರವುಗೊಳಿಸಿದ್ದಾರೆ. ಈ ಶೆಡ್ ಫುಟ್ಪಾತ್ ಮೇಲಿತ್ತು. ಇದರಿಂದ ಸ್ಥಳೀಯರ ಓಡಾಟಕ್ಕೆ ತೊಂದರೆಯಾಗುತ್ತಿತ್ತು ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ. ಬುಲ್ಡೋಜರ್ ಕಾರ್ಯಾಚರಣೆಗೂ ಮುನ್ನ, ಬ್ಯಾನರ್ಜಿಯವರ ಮನೆಯ ಬಳಿ ಕೇಂದ್ರ ಪಡೆಗಳ ದೊಡ್ಡ ತುಕಡಿಯನ್ನು ನಿಯೋಜಿಸಲಾಗಿತ್ತು. ಇದನ್ನೂ ಓದಿ: `ನಿಮ್ಮನ್ನು ಸುಮ್ಮನೆ ಬಿಡಲ್ಲʼ – CRPF ಚೆಕ್ಪೋಸ್ಟ್ ಮೇಲೆ ದಾಳಿಗೂ ಮುನ್ನ ಬೆದರಿಕೆ ಹಾಕಿದ್ದ ಬಾಲಕ!
ಇತ್ತೀಚೆಗೆ ಅಭಿಷೇಕ್ ಬ್ಯಾನರ್ಜಿಯವರ 39ನೇ ಹುಟ್ಟುಹಬ್ಬದ ಸಂದರ್ಭದಲ್ಲಿ, ಅವರ ಮನೆಯ ಹೊರಗೆ ಬಿಜೆಪಿ ಮತ್ತು ಟಿಎಂಸಿ ಕಾರ್ಯಕರ್ತರ ನಡುವೆ ತಡರಾತ್ರಿ ಘರ್ಷಣೆ ನಡೆದಿತ್ತು. ಈ ವೇಳೆ ಮಾತಿನ ಚಕಮಕಿ ನಡೆದು, ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು. ಬಳಿಕ ಕಲ್ಲು ತೂರಾಟ ನಡೆದಿತ್ತು. ಈ ಘಟನೆಯಲ್ಲಿ ಹಲವರು ಗಾಯಗೊಂಡಿದ್ದರು.
ಈ ಘಟನೆಯನ್ನು ವಿರೋಧಿಸಿ ಅಭಿಷೇಕ್ ಬ್ಯಾನರ್ಜಿಯವರು ಮನೆ ಮುಂದೆ ಪ್ರತಿಭಟನೆ ನಡೆಸಿದ್ದರು. ಈ ವೇಳೆ, ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಳ್ಳಬಹುದು ಎಂಬ ಕಾರಣಕ್ಕೆ, ಸ್ಥಳದಿಂದ ತೆರಳುವಂತೆ ಪೊಲೀಸರು ಮನವಿ ಮಾಡಿದ್ದರು. ಈ ವೇಳೆ ಸಂಸದರು ಹಾಗೂ ಪೊಲೀಸರ ಜೊತೆ ವಾಗ್ವಾದ ನಡೆಸಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿದ್ದ ಅಭಿಷೇಕ್ ಬ್ಯಾನರ್ಜಿ, ಗಲಾಟೆ ವೇಳೆ ತಮ್ಮ ಹತ್ಯೆಯ ಯತ್ನ ನಡೆದಿತ್ತು. ಅಲ್ಲದೇ ಬಿಜೆಪಿ ಕಾರ್ಯಕರ್ತರು ಹತ್ತಿರದಲ್ಲಿದ್ದ ಟಿಎಂಸಿ ಕಚೇರಿಯನ್ನು ಧ್ವಂಸಗೊಳಿಸಿದ್ದಾರೆ ಎಂದು ಆರೋಪಿಸಿದ್ದರು. ಈ ಘರ್ಷಣೆ ನಡೆದ ಕೆಲವೇ ದಿನಗಳ ಅಂತರದಲ್ಲಿ ಬುಲ್ಡೋಜರ್ ಕಾರ್ಯಾಚರಣೆ ನಡೆಸಲಾಗಿದೆ. ಇದನ್ನೂ ಓದಿ: Kishtwar Terror Attack | ದೇಹದ ತುಂಬಾ ಬುಲೆಟ್ಗಳು – ನಾಪತ್ತೆಯಾಗಿದ್ದ ಇಬ್ಬರು ಎಸ್ಪಿಒಗಳ ಮೃತದೇಹ ಪತ್ತೆ
