ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (Delhi Pollution) ವಾಯುಮಾಲಿನ್ಯದ ಪ್ರಮಾಣ ಮತ್ತಷ್ಟು ತೀವ್ರಗೊಂಡಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ನಗರದ ಐದು ಪ್ರಮುಖ ಪ್ರದೇಶಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) ಅಪಾಯಕಾರಿ 500ರ ಗಡಿಯನ್ನು ದಾಟಿದೆ.
ದೆಹಲಿ ಮಾತ್ರವಲ್ಲದೆ, ನೆರೆಯ ನೋಯ್ಡಾ, ಗಾಜಿಯಾಬಾದ್ ಮತ್ತು ಗುರುಗ್ರಾಮದಲ್ಲೂ ಗಾಳಿಯ ಗುಣಮಟ್ಟ ʻಅತ್ಯಂತ ಕಳಪೆʼ ಹಂತಕ್ಕೆ ತಲುಪಿದೆ.
ನೋಯ್ಡಾದಲ್ಲಿ ಗರಿಷ್ಠ 533 ಎಕ್ಯೂಐ ದಾಖಲಾಗಿದ್ದು, ಗ್ರೇಟರ್ ನೋಯ್ಡಾದಲ್ಲಿ 517 ಹಾಗೂ ಗಾಜಿಯಾಬಾದ್ನ ಇಂದಿರಾಪುರಂನಲ್ಲಿ 512 ಎಕ್ಯೂಐ ಮಟ್ಟ ಕಂಡುಬಂದಿದೆ. ಇನ್ನು ದೆಹಲಿಯ ಪ್ರಮುಖ ಭಾಗಗಳಾದ ಸೋನಿಯಾ ವಿಹಾರ್ (525), ಮಾಡಲ್ ಟೌನ್ (523), ಆನಂದ್ ವಿಹಾರ್ (521), ಆನಂದ್ ಪರ್ವತ್ (510) ಮತ್ತು ರೋಹಿಣಿಯಲ್ಲಿ (505) ವಿಷಕಾರಿ ಗಾಳಿಯ ಪ್ರಮಾಣ ತೀವ್ರವಾಗಿದೆ.ಇದನ್ನೂ ಓದಿ: ಸಿಎಂ ವಿಶೇಷ ಕರ್ತವ್ಯಾಧಿಕಾರಿಯಾಗಿ ಭ್ರಷ್ಟಾಚಾರ ಆರೋಪಿತ ಅಧಿಕಾರಿ ನೇಮಕ
ವಾಯುಮಾಲಿನ್ಯದ ಗಂಭೀರ ಸ್ವರೂಪವನ್ನು ಪರಿಗಣಿಸಿರುವ ಆಡಳಿತವು, ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಮಾಲಿನ್ಯ ನಿಯಂತ್ರಣ ಕ್ರಮವಾಗಿ 5ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ʻಹೈಬ್ರಿಡ್ ಶಿಕ್ಷಣ ವ್ಯವಸ್ಥೆ’ಯನ್ನು ಜಾರಿಗೊಳಿಸಲಾಗಿದೆ. ಅದರಂತೆ, ಶಾಲೆಗಳು ಆನ್ಲೈನ್ ಮತ್ತು ಆಫ್ಲೈನ್ ಎರಡೂ ಮಾಧ್ಯಮಗಳಲ್ಲಿ ತರಗತಿಗಳನ್ನು ನಡೆಸುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.ಇದನ್ನೂ ಓದಿ: ಪಾಕ್ನಲ್ಲಿ ಉಗ್ರರ ದಾಳಿಗೆ 11 ಪೊಲೀಸರು ಹುತಾತ್ಮ, 12 ಮಂದಿಗೆ ಗಾಯ
