ಭಾರತೀಯ ಕ್ರಿಕೆಟ್ ತಂಡದ ವೇಗದ ಬೌಲರ್ ಅರ್ಷ್ದೀಪ್ (Harsh Deep Sing)ಸಿಂಗ್ ತಮ್ಮ ದೀರ್ಘಕಾಲದ ಗೆಳತಿ ಸಮ್ರೀನ್ ಕೌರ್ ಅವರೊಂದಿಗೆ ನಿಶ್ಚಿತಾರ್ಥ (Engagement) ಮಾಡಿಕೊಂಡಿದ್ದಾರೆ.
ನವೆಂಬರ್ 11ರಂದು ನ್ಯೂಜಿಲೆಂಡ್ನಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ಈ ಜೋಡಿ ಉಂಗುರ ಬದಲಾಯಿಸಿಕೊಂಡಿದೆ. ಸಮ್ರೀನ್ ಕೌರ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ.
ಅರ್ಷ್ದೀಪ್ ಮಂಡಿಯೂರಿ ಪ್ರಪೋಸ್ ಮಾಡುತ್ತಿರುವ ಸುಂದರ ಕ್ಷಣದ ಫೋಟೋಗಳನ್ನು ಪೋಸ್ಟ್ ಮಾಡಿರುವ ಅವರು, ʻʻಜೀವನ ನಮಗೆ ನೀಡಬಹುದಾದ ಎಲ್ಲ ವಿಷಯಗಳ ಪೈಕಿ, ನಾವಿಬ್ಬರೂ ಪರಸ್ಪರ ಸಿಕ್ಕಿರುವುದೇ ನನಗೆ ಅತ್ಯಂತ ಸಂತೋಷದ ಸಂಗತಿ. ನಮ್ಮಿಬ್ಬರ ಒಟ್ಟಿಗಿನ ಸುದೀರ್ಘ ಜೀವನಕ್ಕಾಗಿ. 11.11.2026 (ಹಾಯ್ ಭಾವಿ ಪತಿ)ʼʼ ಎಂದು ಬರೆದುಕೊಂಡಿದ್ದಾರೆ.
ನ್ಯೂಜಿಲೆಂಡ್ ಪ್ರವಾಸ
ಅರ್ಷ್ದೀಪ್ ಸಿಂಗ್ ಪ್ರಸ್ತುತ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸುತ್ತಿದ್ದು, ಅವರ ಈ ಪ್ರವಾಸದಲ್ಲಿ ಸಮ್ರೀನ್ ಕೂಡ ಜೊತೆಯಾಗಿದ್ದಾರೆ. ಸರಣಿಯ ಟಿ20 ಮತ್ತು ಏಕದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿರುವ ಅರ್ಷ್ದೀಪ್, ನವೆಂಬರ್ 13 ರಂದು ನಡೆಯಲಿರುವ ನಾಲ್ಕನೇ ಏಕದಿನ ಪಂದ್ಯದಲ್ಲಿ ಕಣಕ್ಕಿಳಿಯುವ ನಿರೀಕ್ಷೆಯಿದೆ.ಇದನ್ನೂ ಓದಿ: ಪ್ರಧಾನಿಯನ್ನು ಭೇಟಿಯಾದ ಸೂರ್ಯಕುಮಾರ್ – ಮೋದಿ ಮುಂದೆ ಕನ್ನಡ ಭಜನೆ!
ಮುಂಬೈ ಇಂಡಿಯನ್ಸ್ಗೆ ಸೇರ್ಪಡೆ
ಐಪಿಎಲ್ 2027ಕ್ಕೂ ಮುನ್ನ ನಡೆದ IPL ಟ್ರೇಡ್ (Trade) ಒಪ್ಪಂದದಿಂದಲೂ ಅರ್ಷ್ದೀಪ್ ಸುದ್ದಿಯಲ್ಲಿದ್ದಾರೆ. ನಾಯಕ ಹಾರ್ದಿಕ್ ಪಾಂಡ್ಯ ಪಂಜಾಬ್ ಕಿಂಗ್ಸ್ ತಂಡಕ್ಕೆ ಮರಳಿದ್ದು, ಅವರ ಬದಲಿಗೆ ಅರ್ಷ್ದೀಪ್ ಸಿಂಗ್ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿಕೊಂಡಿದ್ದಾರೆ. 2020ರ ನಂತರ ಪ್ರಶಸ್ತಿ ಗೆಲ್ಲಲು ವಿಫಲವಾಗಿರುವ ಮತ್ತು ಕಳೆದ ಸೀಸನ್ನಲ್ಲಿ 9ನೇ ಸ್ಥಾನಕ್ಕೆ ಕುಸಿದಿದ್ದ ಮುಂಬೈ ತಂಡಕ್ಕೆ, ಜಸ್ಪ್ರೀತ್ ಬುಮ್ರಾ ಮತ್ತು ಅರ್ಷ್ದೀಪ್ ಜೋಡಿ ಹೊಸ ಬಲ ತುಂಬುವ ನಿರೀಕ್ಷೆಯಿದೆ.ಇದನ್ನೂ ಓದಿ: ಟೆಸ್ಟ್ ಕ್ರಿಕೆಟ್ಗೆ ಟೀಂ ಇಂಡಿಯಾದ ಬೆಂಕಿ ಬೌಲರ್ ಶಮಿ ಗುಡ್ಬೈ
