ಬೆಂಗಳೂರು: ಗುಬ್ಬಿ ತೋಟದಪ್ಪ ಧರ್ಮಸಂಸ್ಥೆ ವತಿಯಿಂದ ವಿದ್ಯಾರ್ಥಿಗಳಿಗಾಗಿ ಕೌಶಲಾಭಿವೃದ್ಧಿ, ಕೃತಕ ಬುದ್ಧಿಮತ್ತೆ, ಮಾಹಿತಿ ತಂತ್ರಜ್ಞಾನ ಮತ್ತು ತಾಂತ್ರಿಕ ಹಾಗೂ ಉದ್ಯೋಗಾಧಾರಿತ ಕೌಶಲಗಳ ತರಬೇತಿಗಾಗಿ ಒಂದು ಕೇಂದ್ರವನ್ನು ಸ್ಥಾಪಿಸುವ ಉದ್ದೇಶವಿದ್ದು, ಇದಕ್ಕಾಗಿ ಸಂಸ್ಥೆಗೆ ನಾಗರಿಕ ಸೌಲಭ್ಯದ ನಿವೇಶನ ಮಂಜೂರು ಮಾಡಲಾಗುವುದು ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ (MB Patil) ಬುಧವಾರ ಹೇಳಿದರು.
2026-27ನೇ ಸಾಲಿನ ಹೊಸ ವಿದ್ಯಾರ್ಥಿಗಳ ಪ್ರವೇಶ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಸಂಸ್ಥೆಗಾಗಿ ಉತ್ತಮವಾದ ಕೌಶಲಾಭಿವೃದ್ಧಿ ಮತ್ತು ತಾಂತ್ರಿಕ ತರಬೇತಿ ಕೇಂದ್ರವನ್ನು ಸ್ಥಾಪಿಸುವುದನ್ನು ಜವಾಬ್ದಾರಿ ಎಂದು ಭಾವಿಸುತ್ತೇನೆ. ಹೀಗಾಗಿ ಕೈಗಾರಿಕಾ ಪ್ರದೇಶದಲ್ಲಿ ಸಿಎ ನಿವೇಶನ ನೀಡಲಾಗುವುದು ಎಂದು ಹೇಳಿದರು. ಇದನ್ನೂ ಓದಿ: ಮದುವೆಗೆ ಆಮಂತ್ರಣ ನೀಡಲು ತೆರಳುತ್ತಿದ್ದಾಗ ಸ್ಕೂಟಿಗೆ ಲಾರಿ ಡಿಕ್ಕಿ – ಇಬ್ಬರು ಯುವತಿಯರು ದುರ್ಮರಣ
ಇಂದಿನ ಜಗತ್ತಿನಲ್ಲಿ ಕೃತಕ ಬುದ್ಧಿಮತ್ತೆ, ಕ್ವಾಂಟಮ್ ಕಂಪ್ಯೂಟಿಂಗ್ ಸೇರಿದಂತೆ ಹಲವು ಹೊಸ ತಂತ್ರಜ್ಞಾನಗಳು ವೇಗವಾಗಿ ಬೆಳೆಯುತ್ತಿವೆ. ನಮ್ಮ ಮಕ್ಕಳು ಇವುಗಳ ಬಗ್ಗೆ ತಿಳಿದುಕೊಳ್ಳಬೇಕು. ಅವರಿಗೆ ಹೊಸ ತಂತ್ರಜ್ಞಾನಗಳ ಪರಿಚಯ ಮತ್ತು ತರಬೇತಿ ದೊರೆಯಬೇಕು. ಅದೇ ಸಮಯದಲ್ಲಿ ನಮ್ಮ ಇತಿಹಾಸ, ಸಂಸ್ಕೃತಿ ಮತ್ತು ಮಾನವೀಯ ಮೌಲ್ಯಗಳನ್ನೂ ಮರೆಯಬಾರದು ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ನ.13ರಂದು ರಾಜ್ಯಕ್ಕೆ ಮೋದಿ ಭೇಟಿ: ಕಾರ್ಯಕ್ರಮಗಳ ಸಂಪೂರ್ಣ ಪಟ್ಟಿ ಇಲ್ಲಿದೆ
ಗುಬ್ಬಿ ತೋಟದಪ್ಪನವರು ಮಕ್ಕಳಿಲ್ಲದಿದ್ದರೂ ಇಡೀ ಸಮಾಜವನ್ನೇ ತಮ್ಮ ಕುಟುಂಬವೆಂದು ಭಾವಿಸಿ, ತಮ್ಮ ಸಂಪತ್ತನ್ನು ಸಮಾಜಕ್ಕೆ ಅರ್ಪಿಸಿದರು. ಗುಬ್ಬಿ ತೋಟದಪ್ಪನವರ ಬದುಕು ಮತ್ತು ನಮ್ಮ ಪೂರ್ವಜರಾದ ಶಿರಸಂಗಿ ಲಿಂಗರಾಜರ ಬದುಕಿನಲ್ಲಿ ಹಲವು ಸಾಮ್ಯತೆಗಳಿವೆ. ಅವರುಗಳ ಕೊಡುಗೆ ಇಲ್ಲದಿದ್ದರೆ ಇಂದು ಸಮುದಾಯದ ಹಲವರಿಗೆ ಶಿಕ್ಷಣದ ಅವಕಾಶವೇ ಸಿಗುತ್ತಿರಲಿಲ್ಲ ಎಂದು ಹೇಳಿದರು. ಇದನ್ನೂ ಓದಿ: ವಾಕಿಂಗ್ ಮಾಡುವಾಗ ಕುಸಿದು ಬಿದ್ದ ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನಕರ್ – ಆಸ್ಪತ್ರೆಗೆ ದಾಖಲು
ಮುಂದಿನ ಮೇ ತಿಂಗಳಲ್ಲಿ ಬೆಂಗಳೂರಿನಲ್ಲಿ ದೊಡ್ಡ ಕಾರ್ಯಕ್ರಮವೊಂದನ್ನು ಆಯೋಜಿಸಿ, ಪೂಜ್ಯರ ನೇತೃತ್ವದಲ್ಲಿ `ಶಿವಾನು ಭವ’ ಪತ್ರಿಕೆಯ ಮರುಮುದ್ರಿತ ಸಂಚಿಕೆ ಮತ್ತು ಸಂಪುಟವನ್ನು ಬಿಡುಗಡೆ ಮಾಡುವ ಉದ್ದೇಶವಿದೆ. ಇದನ್ನು ಬಸವ ಜಯಂತಿಯ ಆಚರಣೆಯೊಂದಿಗೂ ಜೋಡಿಸುವ ಯೋಜನೆಯಿದೆ. ನಮ್ಮ ಸಮಾಜಕ್ಕೆ ಮಹತ್ವದ ಕೊಡುಗೆ ನೀಡಿದ ಸುಮಾರು 25 ಹಿರಿಯರ ಕುರಿತು ಪುಸ್ತಕವೊಂದನ್ನು ಹೊರತರುವ ಯೋಚನೆಯೂ ಇದೆ ಎಂದರು. ಇದನ್ನೂ ಓದಿ: ಮುಂದಿನ ವರ್ಷ 3 ದಿನಗಳ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ: ಡಿಕೆಶಿ ಘೋಷಣೆ
ದೊಡ್ಡ ಪುಸ್ತಕಗಳನ್ನು ಓದಲು ಎಲ್ಲರಿಗೂ ಸಮಯ ಸಿಗುವುದಿಲ್ಲ. ಆದ್ದರಿಂದ ಸರಳ ಭಾಷೆಯಲ್ಲಿ, ಚಿಕ್ಕದಾದ ಅರ್ಥಪೂರ್ಣವಾದ ಪುಸ್ತಕಗಳನ್ನು ಪ್ರಕಟಿಸಿ ನಮ್ಮ ಇತಿಹಾಸವನ್ನು ಯುವಜನರಿಗೆ ಪರಿಚಯಿಸಬೇಕು ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಮಂತ್ರಾಲಯ ರಾಯರ ಮಠದ ಹುಂಡಿ ಎಣಿಕೆ – 19 ದಿನದಲ್ಲಿ 2.76 ಕೋಟಿ ಕಾಣಿಕೆ ಸಂಗ್ರಹ
ಸಮುದಾಯಕ್ಕಾಗಿ ಸೇವೆ ಸಲ್ಲಿಸಿದ ದಕ್ಷಿಣ ಕರ್ನಾಟಕದ ಮಹನೀಯರನ್ನು ಉತ್ತರ ಕರ್ನಾಟಕದ ಜನರಿಗೆ ಪರಿಚಯಿಸುವ, ಹಾಗೆಯೇ ಉತ್ತರ ಕರ್ನಾಟಕ ಮಹನೀಯರನ್ನು ದಕ್ಷಿಣ ಕರ್ನಾಟಕದ ಜನತೆಗೆ ಪರಿಚಯಿಸುವ ಕಾರ್ಯ ನಡೆಯಬೇಕಾಗಿದೆ ಎಂದು ಸಚಿವರು ಸಿದ್ದಪ್ಪ ಕಂಬಳಿಯವರು, ರಾಜಾ ಲಕ್ಕಮಗೌಡರು, ಮಂಟನಾಳ ಶಿವಯೋಗಿಗಳು, ಭೂಮರೆಡ್ಡಿಯವರು ಸೇರಿದಂತೆ ಹಲವು ಹಿರಿಯರನ್ನು ಸ್ಮರಿಸಿದರು. ಇದನ್ನೂ ಓದಿ: ನಮ್ಮ ಮೆಟ್ರೋ ಅನುದಾನ ಹಂಚಿಕೆಯಲ್ಲಿ ತಾರತಮ್ಯ: ಕೇಂದ್ರದ ವಿರುದ್ಧ ಸಿಎಂ, ಕೃಷ್ಣ ಬೈರೇಗೌಡ ಕಿಡಿ
ಇಂತಹ ಹಾಸ್ಟೆಲ್ನ ಸೌಲಭ್ಯದಿಂದ ಶಿಕ್ಷಣ ಪಡೆದು ಸ್ಥಾನಮಾನ ಪಡೆದವರು ಮುಂದೆ ಸಮುದಾಯ ಹಾಗೂ ಸಮಾಜಕ್ಕೆ ಕೊಡುಗೆ ನೀಡುವುದನ್ನು ಮರೆಯಬಾರದು ಎಂದರು. ಇದನ್ನೂ ಓದಿ: ವಾಜಪೇಯಿ ಸರ್ಕಾರವನ್ನು ಉರುಳಿಸಿದ್ದು ಯಾಕೆ – ಆತ್ಮಚರಿತ್ರೆಯಲ್ಲಿ ಕಥೆ ಬಿಚ್ಚಿಟ್ಟ ಸೋನಿಯಾ
ನಮ್ಮ ಸಮಾಜದ ಮಹನೀಯರು ಶಿಕ್ಷಣ, ಅನ್ನದಾಸೋಹ ಮತ್ತು ವಸತಿ ಸೌಲಭ್ಯಗಳ ಮೂಲಕ ಲಕ್ಷಾಂತರ ಜನರ ಬದುಕಿಗೆ ಬೆಳಕಾಗಿದ್ದಾರೆ. ಸಿದ್ಧಗಂಗಾ ಮಠದ ಪರಮಪೂಜ್ಯ ಶಿವಕುಮಾರ ಸ್ವಾಮೀಜಿಯವರು ಲಕ್ಷಾಂತರ ಮಕ್ಕಳಿಗೆ ಶಿಕ್ಷಣ, ಆಶ್ರಯ ಮತ್ತು ಅನ್ನ ನೀಡುವ ಮೂಲಕ ಮಾಡಿದ ಅಮೂಲ್ಯ ಸೇವೆ ಸಲ್ಲಿಸಿದ್ದಾರೆ. ಅದೇ ರೀತಿ, ಗವಿಮಠದ ಗವಿಸಿದ್ದೇಶ್ವರ ಸ್ವಾಮೀಜಿಯವರು ಸಾವಿರಾರು ಮಕ್ಕಳಿಗೆ ಶಿಕ್ಷಣ ಮತ್ತು ವಸತಿ ಸೌಲಭ್ಯ ಕಲ್ಪಿಸುತ್ತಿದ್ದಾರೆ. ಇಂತಹ ಮಠಮಾನ್ಯಗಳು ಮತ್ತು ಮಹನೀಯರ ಸೇವಾಕಾರ್ಯವನ್ನು ನಾವು ಮುಂದುವರಿಸಬೇಕು ಎಂದು ನುಡಿದರು. ಇದನ್ನೂ ಓದಿ: ದೆಹಲಿ-ಎನ್ಸಿಆರ್ನಲ್ಲಿ ವಿಷಗಾಳಿ – ಹಲವು ಪ್ರದೇಶಗಳಲ್ಲಿ 500ರ ಗಡಿ ದಾಟಿದ ಎಕ್ಯೂಐ
ನಿವೃತ್ತ ಪೊಲೀಸ್ ಮಹಾನಿರ್ದೇಶಕ ಡಾ.ಎಲ್.ರೇವಣ್ಣಸಿದ್ದಯ್ಯ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಡಾ. ಕೆ.ವಿ.ನಾಗರಾಜ ಮೂರ್ತಿ, ಮಾಜಿ ಉಪ ಮೇಯರ್ ಬಿ.ಎಸ್. ಪುಟ್ಟರಾಜು. ಸಂಸ್ಥೆಯ ಗೌರವ ಧರ್ಮದರ್ಶಿಗಳು ಉಪಸ್ಥಿತರಿದ್ದರು. ಇದನ್ನೂ ಓದಿ: ಕೇಂದ್ರ ಸಚಿವ ಸಂಪುಟದಿಂದ ಐದು ಮಹತ್ವದ ನಿರ್ಧಾರ – 77,101 ಕೋಟಿ ರೂ. ಅನುದಾನಕ್ಕೆ ಅನುಮೋದನೆ


