ಬಿಗ್ಬಾಸ್ ಮನೆಯಲ್ಲಿ ಟಾಸ್ಕ್ ವಿಚಾರವಾಗಿ ಮತ್ತೆ ಗದ್ದಲ ಶುರುವಾಗಿದೆ. ಯಶಸ್ ಕೃಷ್ಣ ಮತ್ತು ಮಂಜ ನಾಯಕತ್ವದಲ್ಲಿ ನಡೆದ ಬಣ್ಣದಾಟದ ಟಾಸ್ಕ್ ಕೊನೆಗೆ ರದ್ದಾಗಿದೆ.
ಟಾಸ್ಕ್ ವೇಳೆ ನಡೆದ ಗೊಂದಲದಿಂದಾಗಿ ಸ್ಪರ್ಧಿಗಳು ಅಸಮಾಧಾನಗೊಂಡಿದ್ದು, ಉಸ್ತುವಾರಿ ವಹಿಸಿಕೊಂಡಿದ್ದ ಮಂಜ ವಿರುದ್ಧ ಯಶಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಟಾಸ್ಕ್ನಲ್ಲಿ ಯಶಸ್ ಕೃಷ್ಣ ಮತ್ತು ಮಂಜ ಒಂದೊಂದು ತಂಡದ ನಾಯಕರಾಗಿದ್ದರು. ಯಶಸ್ ಕೃಷ್ಣ ಅವರ ತಂಡ ಕಪ್ಪು ಬಣ್ಣದ ಬಟ್ಟೆ ಧರಿಸಿದ್ದರೆ, ಮಂಜ ಅವರ ತಂಡ ಕೆಂಪು ಬಣ್ಣದ ಬಟ್ಟೆ ಧರಿಸಿತ್ತು.
ಯಶಸ್ ತಂಡದಲ್ಲಿ ಗಗನ್ ಚಿನ್ನಪ್ಪ, ತಾಂಡವ್ ರಾಮ್, ಸೌಂದರ್ಯ ಶೆಟ್ಟಿ, ಪ್ರಶಾಂತ್ ಹಾಗೂ ಆಸಿಯಾ ಫಿರ್ದೋಸ್ ಇದ್ದರು. ಇನ್ನು ಮಂಜ ತಂಡದಲ್ಲಿ ಸೋನಿಕಾ ಗೌಡ, ಗಾನವಿ ಗೌಡ, ಜಗದೀಶ್, ಕಿರಣ್ ಶಾಸ್ತ್ರಿ ಹಾಗೂ ಧನುಷ್ ಮಂಜುನಾಥ್ ಆಡುತ್ತಿದ್ದರು.
ಟಾಸ್ಕ್ನಲ್ಲಿ ಎದುರಾಳಿ ತಂಡದ ಫೋಟೋಗೆ ಹೆಚ್ಚು ಬಣ್ಣ ಹಚ್ಚುವ ಮೂಲಕ ಗೆಲುವು ಸಾಧಿಸಬೇಕಿತ್ತು. ಆದರೆ ಎರಡೂ ತಂಡಗಳ ಫೋಟೋಗಳಿಗೆ ಎಷ್ಟು ಬಣ್ಣ ಬಿದ್ದಿದೆ ಎಂಬುದನ್ನು ಸ್ಪಷ್ಟವಾಗಿ ಗುರುತಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಯಾವ ತಂಡ ಗೆದ್ದಿದೆ ಎಂದು ನಿರ್ಧರಿಸಲು ಆಗದೆ ಟಾಸ್ಕ್ ರದ್ದಾಗಿದೆ.ಇದ್ನನೂ ಓದಿ: ಒಂದ್ ತಿಂಗ್ಳು ಆಚೆ ಇರೋ ಬಚ್ಚಾ… ಹೋಗಲೋ ಲುಚ್ಚ… `ಮೂರಡಿ ಮೂಟೆ’: ಮಂಜ ನಾಲಿಗೆ ಕಂಟ್ರೋಲ್ಗೆ ಬರ್ತಿಲ್ವಾ?
ಇನ್ನು ಟಾಸ್ಕ್ ನಡೆಯುವ ವೇಳೆ ಮಂಜ ಅವರ ತಂಡದ ಸದಸ್ಯರು ಯಶಸ್ ಅವರ ಫೋಟೋಗೆ ಬಣ್ಣ ಹಚ್ಚಲು ಮುಂದಾಗುತ್ತಾರೆ. ಈ ಸಂದರ್ಭದಲ್ಲಿ ಉಸ್ತುವಾರಿ ವಹಿಸಿಕೊಂಡಿದ್ದ ಮಂಜ, ಯಶಸ್ ತಂಡದವರು ನಿಯಮ ಉಲ್ಲಂಘಿಸಿದ್ದಾರೆ ಎಂಬ ಕಾರಣಕ್ಕೆ ಆಟವನ್ನು ಕೆಲವು ಸೆಕೆಂಡುಗಳ ಕಾಲ ನಿಲ್ಲಿಸುತ್ತಾರೆ.
ಈ ವೇಳೆ ಧನುಷ್ ಬಣ್ಣ ಹಚ್ಚಲು ಮುಂದಾಗುತ್ತಾರೆ. ಅವರನ್ನು ಗಗನ್ ಮತ್ತು ತಾಂಡವ್ ತಡೆಯುತ್ತಾರೆ. ಆಗ ಮಂಜ, ನಾನು ಇನ್ನೂ ಪಾಸ್ ತೆಗೆದಿಲ್ಲ, ಸ್ಟಾರ್ಟ್ ಎಂದು ಹೇಳಿಲ್ಲ. ಆಗಲೇ ಆಟ ಶುರು ಮಾಡಿದ್ದಾರಾ? ಎಂದು ಪ್ರಶ್ನಿಸುತ್ತಾರೆ.
ಇದರಿಂದ ಕೋಪಗೊಂಡ ಯಶಸ್, ಪಾಸ್ ಅಂತ ಹೇಳಿ, ಕೌಂಟ್ಡೌನ್ ಕೊಟ್ಟು, ಸ್ಟ್ಯಾಚ್ಯೂ ತರಹ ನಿಂತುಕೊಂಡು ಬಿಟ್ಟನ ಈ ನನ್ನ ಮಗ ಎಂದು ಮಂಜ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಾರೆ.ಇದ್ನನೂ ಓದಿ: ದೀಪಾವಳಿ ಪಾರ್ಟಿಯಲ್ಲಿ ನಾನ್ವೆಜ್ – ಪ್ರಿಯಾಂಕಾ ಚೋಪ್ರಾ ವಿರುದ್ಧ ನೆಟ್ಟಿಗರು ಗರಂ
ಇದೇ ವಿಚಾರವಾಗಿ ಟಾಸ್ಕ್ ವೇಳೆ ಗೊಂದಲ ಹೆಚ್ಚಾಗಿದ್ದು, ಸ್ಪರ್ಧಿಗಳ ನಡುವೆಯೂ ಅಸಮಾಧಾನ ಉಂಟಾಗಿದೆ. ಕೊನೆಗೆ ಟಾಸ್ಕ್ ರದ್ದಾಗಿರುವುದರಿಂದ ಕಷ್ಟಪಟ್ಟು ಆಡಿದ ಸ್ಪರ್ಧಿಗಳಿಗೆ ನಿರಾಸೆಯಾಗಿದೆ.
