ಇತ್ತೀಚಿಗೆ ತೆರೆಕಂಡ ರಾಮಾಯಣ (Ramayana) ಚಿತ್ರವು ಆಸ್ಕರ್ (Oscar) ರೇಸ್ಗೆ ಪ್ರವೇಶಿಸಿದ್ದು, ಚಿತ್ರದ ನಿರ್ಮಾಪಕರು 99ನೇ ಅಕಾಡೆಮಿ ಪ್ರಶಸ್ತಿಗಳ ಪರಿಗಣನೆಗಾಗಿ ಅರ್ಜಿ ಸಲ್ಲಿಸಿದ್ದಾರೆ.
ಸುದ್ದಿ ಮಾಧ್ಯಮವೊಂದರ ವರದಿಯ ಪ್ರಕಾರ, `ರಾಮಾಯಣ’ (Ramayana) ಚಿತ್ರದ ನಿರ್ಮಾಪಕರು 99ನೇ ಅಕಾಡೆಮಿ ಪ್ರಶಸ್ತಿಗಳ ಪರಿಗಣನೆಗಾಗಿ ಚಿತ್ರವನ್ನು VFX ವಿಭಾಗದಲ್ಲಿ ಕಳುಹಿಸಿರುವುದಾಗಿ ತಿಳಿಸಿದೆ. ಒಂದು ವೇಳೆ ಬೇರೆ ವಿಭಾಗಗಳಿಗೆ ಕಳುಹಿಸಿದ್ದರೆ, ಆ ಬಗ್ಗೆ ಈವರೆಗೆ ಮಾಹಿತಿ ಲಭ್ಯವಾಗಿಲ್ಲ. ಮರಾಠಿ ಚಲನಚಿತ್ರ `ಗೊಂದಾಳ್’ ಅಂತಾರಾಷ್ಟ್ರೀಯ ಫೀಚರ್ ಫಿಲ್ಮ್ ವಿಭಾಗದಲ್ಲಿ ಭಾರತದ ಅಧಿಕೃತ ಪ್ರವೇಶವಾಗಿ ಆಯ್ಕೆಯಾಗಿರುವ ಸಂದರ್ಭದಲ್ಲೇ ಈ ಬೆಳವಣಿಗೆ ನಡೆದಿದೆ. ಇದನ್ನೂ ಓದಿ: ಮುಂದುವರಿದ ಯಶ್ ನಟನೆಯ ‘ರಾಮಾಯಣ’ ಅಬ್ಬರ; 6 ದಿನಗಳಲ್ಲಿ 823 ಕೋಟಿ ರೂ. ಕಲೆಕ್ಷನ್
`ಗೊಂದಾಲ್’ (Gondhal) ಭಾರತದ ಅಧಿಕೃತ ಪ್ರವೇಶವಾಗಿದ್ದರೆ, 2026ರ ಟೊರೊಂಟೋ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (Toronto International Film Festival) ಪ್ಲಾಟ್ಫಾರ್ಮ್ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ನಾಗಾ ಭಾಷೆಯ ಚಲನಚಿತ್ರ `ಅಂಗ್’ ಕೂಡ ಅಂತಾರಾಷ್ಟ್ರೀಯ ಫೀಚರ್ ಫಿಲ್ಮ್ ವಿಭಾಗದಲ್ಲಿ ಪರಿಗಣನೆಗೆ ಅರ್ಹತೆ ಪಡೆದಿದೆ.
ಭಾರತದಿಂದ ಆಸ್ಕರ್ಗೆ ಒಂದು ಸಿನಿಮಾವನ್ನು ಅಧಿಕೃತವಾಗಿ ಆಯ್ಕೆ ಮಾಡಿ ಕಳುಹಿಸಿರುತ್ತಾರೆ ಎಂಬ ಕಾರಣಕ್ಕೆ, ಬೇರೆ ಭಾರತೀಯ ಸಿನಿಮಾಗಳು ಆಸ್ಕರ್ಗೆ ಅರ್ಜಿ ಹಾಕುವಂತಿಲ್ಲ ಅಂತ ಏನಿಲ್ಲ. ಅಕಾಡೆಮಿಯ (ಆಸ್ಕರ್) ನಿಯಮಗಳನ್ನು ಪೂರೈಸುವ ಯಾವುದೇ ಸಿನಿಮಾ, ಅದು ದೇಶದ ಅಧಿಕೃತ ಎಂಟ್ರಿಯಾಗಿ ಆಯ್ಕೆಯಾಗಲಿ ಅಥವಾ ಬಿಡಲಿ, ಸ್ವತಂತ್ರವಾಗಿ ಆಸ್ಕರ್ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಬಹುದು. ಇದನ್ನೂ ಓದಿ: ಬಾಕ್ಸ್ ಆಫೀಸ್ನಲ್ಲಿ ‘ರಾಮಾಯಣ’ ಅಬ್ಬರ – ನಾಲ್ಕೇ ದಿನಗಳಲ್ಲಿ 500 ಕೋಟಿ ಕ್ಲಬ್ ಸೇರಿದ ಯಶ್ ಸಿನಿಮಾ
ಸ್ವತಂತ್ರ ಚಲನಚಿತ್ರವೊಂದು ಆಸ್ಕರ್ ಅರ್ಹತೆ ಪಡೆಯಲು ಅಕಾಡೆಮಿಯ ಪ್ರಮಾಣಿತ ಥಿಯೇಟ್ರಿಕಲ್ ಬಿಡುಗಡೆ ಅವಶ್ಯಕತೆಗಳನ್ನು ಪೂರೈಸಬೇಕು. ಇದು ಅಮೆರಿಕದ ಪ್ರಮುಖ ನಗರಗಳಲ್ಲಿ ಕನಿಷ್ಠ ಏಳು ಸತತ ದಿನಗಳ ಥಿಯೇಟ್ರಿಕಲ್ ರನ್ ಅನ್ನು ಪೂರ್ಣಗೊಳಿಸಬೇಕು. ಇವುಗಳಲ್ಲಿ ಲಾಸ್ ಏಂಜಲೀಸ್ ಕೌಂಟಿ, ನ್ಯೂಯಾರ್ಕ್ ಸಿಟಿ, ಸ್ಯಾನ್ ಫ್ರಾನ್ಸಿಸ್ಕೋ ಬೇ ಏರಿಯಾ, ಚಿಕಾಗೋ, ಡಲ್ಲಾಸ್-ಫೋರ್ಟ್ ವರ್ತ್ ಮತ್ತು ಅಟ್ಲಾಂಟಾ ಸೇರಿವೆ. ನಂತರ ಚಲನಚಿತ್ರ ನಿರ್ಮಾಪಕರು ಅಥವಾ ವಿತರಕರು ಅಗತ್ಯ ದಾಖಲೆಗಳು ಹಾಗೂ ಚಿತ್ರದ ವಿವರಗಳೊಂದಿಗೆ ಆಸ್ಕರ್ನ ಆನ್ಲೈನ್ ಅರ್ಜಿಯನ್ನು ಸಲ್ಲಿಸಬಹುದು.
ನವೆಂಬರ್ 5ರಂದು ಬಿಡುಗಡೆಯಾದ ರಾಮಾಯಣ: ಭಾಗ 1 ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಪ್ರದರ್ಶನ ಮುಂದುವರಿಸಿದ್ದು, ಬಿಡುಗಡೆಯಾದ ಆರು ದಿನಗಳಲ್ಲೇ ಜಾಗತಿಕ ಮಟ್ಟದಲ್ಲಿ 800 ಕೋಟಿ ರೂ. ಗಳಿಕೆಯನ್ನು ದಾಟಿದೆ.ಇದನ್ನೂ ಓದಿ: ಬಾಕ್ಸಾಫೀಸ್ನಲ್ಲಿ ಯಶ್ ನಟನೆಯ ರಾಮಾಯಣ ಕಮಾಲ್ – ಮೂರು ದಿನದಲ್ಲಿ 375 ಕೋಟಿ ಕಲೆಕ್ಷನ್
ರಣಬೀರ್ ಕಪೂರ್, ಯಶ್ ಮತ್ತು ಸಾಯಿ ಪಲ್ಲವಿ ನಟಿಸಿರುವ ಈ ಪೌರಾಣಿಕ ಮಹಾಕಾವ್ಯವು, ಮಂಗಳವಾರ ಒಂದೇ ದಿನ ಭಾರತದಲ್ಲಿ 94.10 ಕೋಟಿ ರೂ. ಗಳಿಸಿದೆ. ಇದರಲ್ಲಿ ಹಿಂದಿ ಆವೃತ್ತಿಯು ಅತಿ ಹೆಚ್ಚು ಅಂದರೆ 76 ಕೋಟಿ ರೂ.ಗಳನ್ನು ಗಳಿಸುವ ಮೂಲಕ ಪ್ರಮುಖ ಕೊಡುಗೆ ನೀಡಿದೆ. ಕನ್ನಡ ಆವೃತ್ತಿಯು 7.75 ಕೋಟಿ ರೂ., ಹಾಗೂ ತೆಲುಗು ಆವೃತ್ತಿಯು 4 ಕೋಟಿ ರೂ. ಗಳಿಸಿವೆ. ತಮಿಳು ಮತ್ತು ಮಲಯಾಳಂ ಆವೃತ್ತಿಗಳು ಕ್ರಮವಾಗಿ 3.60 ಕೋಟಿ ರೂ. ಮತ್ತು 2.75 ಕೋಟಿ ರೂ.ಗಳ ಕೊಡುಗೆ ನೀಡಿವೆ.
ದೇಶೀಯ ಒಟ್ಟು ಗಳಿಕೆ 526.50 ಕೋಟಿ ರೂ.ಗೆ ತಲುಪಿದ್ದು, ವಿದೇಶಿ ಗಳಿಕೆಯನ್ನೂ ಸೇರಿಸಿದರೆ ಚಿತ್ರದ ಒಟ್ಟು ಜಾಗತಿಕ ಗಳಿಕೆ 823.50 ಕೋಟಿ ರೂಪಾಯಿಗಳಾಗಿದೆ. ಅಲ್ಲದೆ, ಈ ಚಿತ್ರವು ಭಾರತದಲ್ಲಿ ಇದುವರೆಗೆ 400 ಕೋಟಿ ರೂ. ಕಲೆಕ್ಷನ್ ಮಾಡಿದೆ. ರಾಮಾಯಣ ಸಿನಿಮಾ 24,344 ಪ್ರದರ್ಶನಗಳ ಮೂಲಕ ತನ್ನ ಇತ್ತೀಚಿನ ದೇಶೀಯ ಗಳಿಕೆಯನ್ನು ದಾಖಲಿಸಿದೆ. ಇದನ್ನೂ ಓದಿ: 4000 ಕೋಟಿ ಬಜೆಟ್ ಅಲ್ಲ.. ರಾಮ, ಸೀತೆ, ರಾವಣ ಪಾತ್ರಗಳ ಬಗ್ಗೆ ಮಾತನಾಡಿ: ‘ರಾಮಾಯಣ’ ಬಗ್ಗೆ ಸಲ್ಮಾನ್ ಮಾತು




