ಬೆಂಗಳೂರು: ಸಿನಿಮಾದ ದೃಶ್ಯವನ್ನೇ ಮೀರಿಸುವ ರೀತಿಯಲ್ಲಿ ಕಾರೊಂದು ನಿಯಂತ್ರಣ ತಪ್ಪಿ ಕಬಾಬ್ ಸೆಂಟರ್ಗೆ ನುಗ್ಗಿದ ಘಟನೆ ಬೆಂಗಳೂರು ಹೊರವಲಯದ ಬನ್ನೇರುಘಟ್ಟ (Bannerghatta) ಸಮೀಪದ ಹೊಮ್ಮದೇವನಹಳ್ಳಿಯಲ್ಲಿ ನಡೆದಿದೆ.
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ಗಳು ಜಖಂಗೊಂಡಿದ್ದು, ಅಂಗಡಿಯಲ್ಲಿದ್ದ ವಸ್ತುಗಳು ಚೆಲ್ಲಾಪಿಲ್ಲಿಯಾಗಿವೆ. ಕಬಾಬ್ ತಯಾರಿಸಲು ಬಳಸುತ್ತಿದ್ದ ಬಿಸಿ ಎಣ್ಣೆ ಮೈಮೇಲೆ ಬಿದ್ದು ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಕಳೆದ ತಿಂಗಳ 30ರಂದು ಈ ಅಪಘಾತ ಸಂಭವಿಸಿದೆ. ಸಜೀನಾ ಬೇಗಂ ಎಂಬುವರು ಚಲಾಯಿಸುತ್ತಿದ್ದ ಪಜೆರೊ ಸ್ಪೋರ್ಟ್ಸ್ ಕಾರು (KA-05-MR-3925) ಅತಿವೇಗವಾಗಿ ಬಂದು ನಿಯಂತ್ರಣ ತಪ್ಪಿದೆ. ಈ ವೇಳೆ ರಸ್ತೆಯಲ್ಲಿದ್ದ ಬೈಕ್ಗಳಿಗೆ ಡಿಕ್ಕಿ ಹೊಡೆದ ಕಾರು ನೇರವಾಗಿ ಹಳೇವೂರಮ್ಮ ಕಬಾಬ್ ಸೆಂಟರ್ಗೆ ನುಗ್ಗಿದೆ.
ಬಿಸಿ ಎಣ್ಣೆ ಮೈಮೇಲೆ ಬಿದ್ದು ಮೂವರಿಗೆ ಗಾಯ
ಅಪಘಾತದ ವೇಳೆ ಕಬಾಬ್ ಸೆಂಟರ್ನಲ್ಲಿದ್ದ ಬಿಸಿ ಎಣ್ಣೆ ಮೈಮೇಲೆ ಬಿದ್ದು ಬಸವರಾಜ್, ಮುನಿಕೃಷ್ಣ ಮತ್ತು ಮಂಜೇಶ್ ಎಂಬುವರು ಗಂಭೀರವಾಗಿ ಸುಟ್ಟ ಗಾಯಗಳಿಗೆ ಒಳಗಾಗಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೆಡೆಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.ಇದನ್ನೂ ಓದಿ: ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಆಸ್ಟ್ರೇಲಿಯಾದ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್ ವಿದಾಯ
ಅಪಘಾತಕ್ಕೆ ಸಂಬಂಧಿಸಿದಂತೆ ಕಾರು ಚಲಾಯಿಸುತ್ತಿದ್ದ ಮಹಿಳೆ ಹಾಗೂ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.ಇದನ್ನೂ ಓದಿ: ಆಂಧ್ರಕ್ಕೆ ಅಪ್ಪಳಿಸಿದ `ಮುರಸು’ – 120 ಕಿ.ಮೀ ವೇಗದಲ್ಲಿ ಗಾಳಿ, ಭಾರೀ ಮಳೆ ಸಾಧ್ಯತೆ
