ಬಾಂಬ್ ಬೆದರಿಕೆ ಮಧ್ಯೆಯೂ ಅಮಿತಾಬ್ ಬಚ್ಚನ್ ಭಾನುವಾರ ಬುಲೆಟ್ಪ್ರೂಫ್ ಗ್ಲಾಸ್ ಸುರಕ್ಷತೆಯೊಂದಿಗೆ ತಮ್ಮ ಅಭಿಮಾನಿಗಳನ್ನು ಭೇಟಿಯಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಭಾರೀ ವೈರಲ್ ಆಗುತ್ತಿದೆ.
ಇತ್ತೀಚೆಗೆ ಅಮಿತಾಬ್ ಮನೆ ಮೇಲೆ ಬಾಂಬ್ ದಾಳಿ ಮಾಡುವುದಾಗಿ ಇ-ಮೇಲ್ ಬೆದರಿಕೆ ಬಂದಿತ್ತು. ಇದಾದ ನಂತರ ಬಿಗ್ಬಿಯ ಮುಂಬೈ ಮನೆಯ ಹೊರಗೆ ಹೆಚ್ಚುವರಿ ಭದ್ರತೆಯನ್ನು ನಿಯೋಜಿಸಲಾಗಿದೆ. ಆದರೆ, ಅಮಿತಾಬ್ ಬಚ್ಚನ್ ಪ್ರತೀ ಭಾನುವಾರ ಅವರ ಫ್ಯಾನ್ಸ್ಗಳನ್ನು ಮೀಟ್ ಆಗುತ್ತಾರೆ. ಆದ್ದರಿಂದ ಈ ಭಾನುವಾರವೂ ಕೂಡ ಅವರ ಮನೆಯ ಮುಂದೆ ಜನರು ನೆರೆದಿದ್ದರು. ಆದರೆ, ಈ ಬಾರಿ ಮುನ್ನೆಚ್ಚರಿಕಾ ಕ್ರಮವಾಗಿ ಅಮಿತಾಬ್ ಬಚ್ಚನ್ ಅವರ ಸುತ್ತ ಬುಲೆಟ್ಪ್ರೂಫ್ ಗ್ಲಾಸ್ಗಳನ್ನು ಬಳಸಲಾಗಿದೆ. ಈ ಸಂದರ್ಭದಲ್ಲಿ ಮಗ ಅಭಿಷೇಕ್ ಬಚ್ಚನ್ ಕೂಡ ತಂದೆಯ ಹತ್ತಿರದಲ್ಲಿ ನಿಂತು ಭದ್ರೆತೆಯನ್ನು ಗಮನಿಸಿದ್ದಾರೆ. ಇದನ್ನೂ ಓದಿ: ಬಿಗ್ಬಾಸ್ ಮನೆಯಿಂದ ಅಗ್ನಿಪರೀಕ್ಷೆಯ ಕುಮಾರಿ ಔಟ್ – ಕಣ್ಣೀರಿಟ್ಟ ಕಿರಣ್ ಶಾಸ್ತ್ರಿ
ಕೆಲ ವಾರಗಳ ಹಿಂದಷ್ಟೇ ಟೈಗರ್ ಶ್ರಾಫ್ ಕಾರಿನ ಮೇಲೆ ಗುಂಡಿನ ದಾಳಿ ಆಗಿತ್ತು. ಘಟನೆಯಲ್ಲಿ ನಟ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದರು. ಈ ಎಲ್ಲ ಬೆಳವಣಿಗೆಗಳ ನಂತರ ಅಮಿತಾಬ್ ಬಚ್ಚನ್, ಅಕ್ಷಯ್ ಕುಮಾರ್ ಸೇರಿದಂತೆ ಹಲವು ಸೆಲೆಬ್ರಿಟಿಗಳ ಮನೆಗೆ ಬಿಗಿ ಭದ್ರತೆ ಒದಗಿಸಲಾಗಿದೆ. ಬೆದರಿಕೆಗಳ ಹೊರತಾಗಿಯೂ, ಅಮಿತಾಬ್ ಕೆಲಸದಲ್ಲಿ ನಿರತರಾಗಿದ್ದಾರೆ. ಅವರು ಪ್ರಸ್ತುತ ಕೌನ್ ಬನೇಗಾ ಕರೋಡ್ಪತಿ ಸೀಸನ್ 18ರ ರಿಯಾಲಿಟಿ ಶೋನಲ್ಲಿ ಬ್ಯುಸಿಯಾಗಿದ್ದಾರೆ. ಇದನ್ನೂ ಓದಿ: ನಟ ಧನ್ವೀರ್ ವಿರುದ್ಧ ಮಾನಹಾನಿ ಮೊಕದ್ದಮೆ ದಾಖಲಿಸಿದ ವಿಜಯಲಕ್ಷ್ಮಿ
