ಬೆಂಗಳೂರು: ನಟ ದರ್ಶನ್ (Actor Darshan) ಹಾಗೂ ಅವರ ಕುಟುಂಬದ ವಿರುದ್ಧ ಮಾತನಾಡದಂತೆ ಕೋರ್ಟ್ ಆದೇಶಿಸಿದ ಬೆನ್ನಲ್ಲೇ ಇದೀಗ ವಿಜಯಲಕ್ಷ್ಮೀ ದರ್ಶನ್ ನಟ ಧನ್ವೀರ್ (Actor Dhanveer) ವಿರುದ್ಧ ಮಾನಹಾನಿ ಮೊಕದ್ದಮೆ ದಾಖಲಿಸಿದ್ದಾರೆ.
ನಟ ಧನ್ವೀರ್ ವಿಜಯಲಕ್ಷ್ಮಿ ಹಾಗೂ ದರ್ಶನ್ ಕುಟುಂಬದ ವಿರುದ್ಧ ನಾಲಿಗೆ ಹರಿಬಿಟ್ಟಿದ್ದರು ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಬೆಂಗಳೂರಿನ ಸೆಷನ್ಸ್ ಕೋರ್ಟ್ಗೆ ವಿಜಯಲಕ್ಷ್ಮೀ ಮಾನಹಾನಿ ಮೊಕದ್ದಮೆ ದಾಖಲಿಸಿದ್ದು, ಅರ್ಜಿ ವಿಚಾರಣೆ ನ.30ಕ್ಕೆ ನಿಗದಿಯಾಗಿದೆ. ಇದನ್ನೂ ಓದಿ: ಪುತ್ರನ ಬರ್ತ್ಡೇಗೆ ಜೈಲಲ್ಲೇ ಸಿಗೋ ಚಾಕೋಲೇಟ್ ಕೊಟ್ಟು ವಿಶ್ ಮಾಡಿದ ದರ್ಶನ್
ಈ ಹಿಂದೆ ತನ್ನ ಕುಟುಂಬದ ವಿರುದ್ಧ ಮಾತನಾಡದಂತೆ ದರ್ಶನ್ ಪ್ರತಿಬಂಧಕಾಜ್ಞೆ ಪಡೆದಿದ್ದರು. ಇದೀಗ ಈ ಬೆಳವಣಿಗೆಯ ಮುಂದುವರಿದ ಭಾಗವಾಗಿ ಕ್ರಿಮಿನಲ್ ಮಾನಹಾನಿ ಮೊಕದ್ದಮೆ ದಾಖಲಾಗಿದೆ.
