Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Search

Archives

  • November 2026
  • October 2026
  • September 2026
  • August 2026
  • July 2026
  • June 2026
  • May 2026
  • April 2026
  • March 2026
  • February 2026
  • January 2026
  • December 2025
  • November 2025
  • October 2025
  • September 2025
  • August 2025
  • July 2025
  • June 2025
  • May 2025
  • April 2025
  • March 2025
  • February 2025
  • January 2025
  • December 2024
  • November 2024
  • October 2024
  • September 2024
  • August 2024
  • July 2024
  • June 2024
  • May 2024
  • April 2024
  • March 2024
  • February 2024
  • January 2024
  • December 2023
  • November 2023
  • October 2023
  • September 2023
  • August 2023
  • July 2023
  • June 2023
  • May 2023
  • April 2023
  • March 2023
  • February 2023
  • January 2023
  • December 2022
  • November 2022
  • October 2022
  • September 2022
  • August 2022
  • July 2022
  • June 2022
  • May 2022
  • April 2022
  • March 2022
  • February 2022
  • January 2022
  • December 2021
  • November 2021
  • October 2021
  • September 2021
  • August 2021
  • July 2021
  • June 2021
  • May 2021
  • April 2021
  • March 2021
  • February 2021
  • January 2021
  • December 2020
  • November 2020
  • October 2020
  • September 2020
  • August 2020
  • July 2020
  • June 2020
  • May 2020
  • April 2020
  • March 2020
  • February 2020
  • January 2020
  • December 2019
  • November 2019
  • October 2019
  • September 2019
  • August 2019
  • July 2019
  • June 2019
  • May 2019
  • April 2019
  • March 2019
  • February 2019
  • January 2019
  • December 2018
  • November 2018
  • October 2018
  • September 2018
  • August 2018
  • July 2018
  • June 2018
  • May 2018
  • April 2018
  • March 2018
  • February 2018
  • January 2018
  • December 2017
  • November 2017
  • October 2017
  • September 2017
  • August 2017
  • July 2017
  • June 2017
  • May 2017
  • April 2017
  • March 2017
  • February 2017

Categories

  • 31 Districts
  • Advertisement
  • Astrology
  • Automobile
  • Ayodhya Ram Mandir
  • Ayodhya Updates
  • Bagalkot
  • BELAKU
  • Belgaum
  • Bellary
  • Bengaluru City
  • Bengaluru Rural
  • Bidar
  • Big Bulletin
  • Bollywood
  • Chamarajanagar
  • Chikkaballapur
  • Chikkamagaluru
  • Chitradurga
  • Cinema
  • Column
  • Corona
  • Court
  • Cricket
  • Crime
  • Dakshina Kannada
  • Davanagere
  • Delhi Election 2025
  • Dharwad
  • Dina Bhavishya
  • Districts
  • Education
  • Election News
  • Entertainment Videos
  • Explainer
  • Fashion
  • Featured
  • Food
  • Gadag
  • Hassan
  • Haveri
  • Health
  • Kalaburagi
  • Karnataka
  • Karnataka Budget 2022
  • Karnataka Budget 2023
  • Karnataka Budget 2024
  • Karnataka Election
  • Karnataka Election 2023
  • Kodagu
  • Kolar
  • Koppal
  • Latest
  • Main Post
  • Mandya
  • Monsoon
  • Most Shared
  • Mysuru
  • National
  • News Videos
  • Non Veg
  • Other Sports
  • Out of the box
  • Photos
  • Political News
  • Public Hero
  • Raichur
  • Ramanagara
  • Rameshwaram Cafe
  • Sandalwood
  • Shivamogga
  • Smartphones
  • South cinema
  • Special
  • Sports
  • States
  • Stories
  • Tech
  • Telangana
  • Telecom
  • Top Stories
  • Travel
  • Tumakuru
  • TV Shows
  • Udupi
  • Uncategorized
  • Uttara Kannada
  • Veg
  • Videos
  • Vijayapura
  • World
  • Yadgir
  • ಆತ್ಮಹತ್ಯೆ
  • ಟ್ರೆಂಡಿಂಗ್ ನ್ಯೂಸ್ ( Trending News )
  • Privacy Policy
  • CSR-Policy
  • Terms of Service
  • POSH POLICY
  • Complaints Redressal
  • Terms and Conditions
  • Contact
© Public TV. Design Company Knowtable. All Rights Reserved.
Reading: ಜಾಗತಿಕ ವ್ಯಾಪಾರದಲ್ಲಿ ‘ಉಕ್ಕಿನ ಕೋಟೆ’ ಕಟ್ಟಲು ಸಜ್ಜಾದ ಭಾರತ: ಚೀನಾ ಏಕಸ್ವಾಮ್ಯಕ್ಕೆ ಸಡ್ಡು!
Notification Show More
Font ResizerAa
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • POSH POLICY
  • Complaints Redressal
  • Terms and Conditions
  • Contact
© Public TV. Design Company Knowtable. All Rights Reserved.

Home | Special | ಜಾಗತಿಕ ವ್ಯಾಪಾರದಲ್ಲಿ ‘ಉಕ್ಕಿನ ಕೋಟೆ’ ಕಟ್ಟಲು ಸಜ್ಜಾದ ಭಾರತ: ಚೀನಾ ಏಕಸ್ವಾಮ್ಯಕ್ಕೆ ಸಡ್ಡು!

Special

ಜಾಗತಿಕ ವ್ಯಾಪಾರದಲ್ಲಿ ‘ಉಕ್ಕಿನ ಕೋಟೆ’ ಕಟ್ಟಲು ಸಜ್ಜಾದ ಭಾರತ: ಚೀನಾ ಏಕಸ್ವಾಮ್ಯಕ್ಕೆ ಸಡ್ಡು!

Last updated: November 2, 2026 4:07 pm
By
Public TV
Share
7 Min Read
Countering China Why Indias Rs 10000 Crore Container Manufacturing Scheme Matters

ನೀವು ರಸ್ತೆಯಲ್ಲಿ ಅಥವಾ ರೈಲಿನಲ್ಲಿ ಸಾಗುವ ಬೃಹತ್ ಶಿಪ್ಪಿಂಗ್ ಕಂಟೈನರ್‌ಗಳನ್ನು ನೋಡಿರಬಹುದು. ಸಾಮಾನ್ಯ ಕಬ್ಬಿಣದ ಪೆಟ್ಟಿಗೆಯಂತೆ ಕಾಣುವ ಇವುಗಳ ಹಿಂದೆ ಜಾಗತಿಕ ಮಟ್ಟದ ಬೃಹತ್ ರಾಜಕೀಯ ಮತ್ತು ಆರ್ಥಿಕ ಸಾಮ್ರಾಜ್ಯವೇ ಅಡಗಿದೆ ಎಂಬುದು ನಿಮಗೆ ಗೊತ್ತೇ? ಇಡೀ ವಿಶ್ವದ ರಫ್ತು ಮಾರುಕಟ್ಟೆಯನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿರುವ ಚೀನಾದ(China) ಕಂಟೈನರ್ ಏಕಸ್ವಾಮ್ಯವನ್ನು ಮುರಿಯಲು ಭಾರತ(India) ಈಗ ಬೃಹತ್ ಹೆಜ್ಜೆ ಇಟ್ಟಿದೆ. 10,000 ಕೋಟಿ ರೂ. ವೆಚ್ಚದ ಉತ್ತೇಜನಾ ಯೋಜನೆಯ ಮೂಲಕ ದೇಶೀಯವಾಗಿ ವಾರ್ಷಿಕ 7.5 ಲಕ್ಷ ಕಂಟೈನರ್ ಉತ್ಪಾದಿಸುವ ಗುರಿಯೊಂದಿಗೆ ಭಾರತ ಹೊರಟಿದ್ದು, ಇದು ದೇಶದ ರಫ್ತುದಾರರಿಗೆ ಮತ್ತು ಆರ್ಥಿಕತೆಗೆ ವರದಾನವಾಗಲಿದೆ. ಹೀಗಾಗಿ ಏನಿದು ಈ ಯೋಜನೆ? ಸವಾಲುಗಳೇನು ಇತ್ಯಾದಿ ವಿಚಾರಗಳನ್ನು ಇಲ್ಲಿ ತಿಳಿಸಲಾಗಿದೆ.

ಚೀನಾದ ಏಕಸ್ವಾಮ್ಯ
ವಿಶ್ವದ ಒಟ್ಟು ಶಿಪ್ಪಿಂಗ್ ಕಂಟೈನರ್‌ಗಳಲ್ಲಿ(Shipping Container) 95% ಕ್ಕಿಂತ ಹೆಚ್ಚು ಚೀನಾದಲ್ಲೇ ತಯಾರಾಗುತ್ತವೆ. ಭಾರತದ ಪರಿಸ್ಥಿತಿ ಇನ್ನೂ ಭಿನ್ನವಾಗಿದ್ದು, ಇಲ್ಲಿ ಬಳಕೆಯಾಗುವ ಸುಮಾರು 99% ಕಂಟೈನರ್‌ಗಳು ಚೀನಾ ನಿರ್ಮಿತವಾಗಿವೆ. ಭಾರತದ ಸರ್ಕಾರಿ ಸ್ವಾಮ್ಯದ ಕಂಟೈನರ್ ಕಾರ್ಪೊರೇಷನ್ ಆಫ್ ಇಂಡಿಯಾ (CONCOR) ಕೂಡ ಕಂಟೈನರ್‌ಗಳಿಗಾಗಿ ಚೀನಾವನ್ನೇ ನೆಚ್ಚಿಕೊಂಡಿತ್ತು. 2020 ರ ಗಡಿ ಸಂಘರ್ಷದ ನಂತರ, ಈ ಸಂಪೂರ್ಣ ಅವಲಂಬನೆಯು ದೇಶದ ಭದ್ರತೆ ಮತ್ತು ವ್ಯಾಪಾರಕ್ಕೆ ಅಪಾಯಕಾರಿ ಎಂದು ಭಾರತ ಅರಿತುಕೊಂಡಿದೆ.

ದಿಢೀರ್‌ ದರ ಏರಿಕೆ
ಕೋವಿಡ್ ಸಮಯ ಹಾಗೂ ಇತ್ತೀಚಿನ ಜಾಗತಿಕ ಸಂಘರ್ಷಗಳ ಸಂದರ್ಭದಲ್ಲಿ ಕಂಟೈನರ್‌ಗಳ ತೀವ್ರ ಅಭಾವ ಸೃಷ್ಟಿಯಾಗಿತ್ತು. ಒಂದು ಕಂಟೈನರ್‌ನ ಬಾಡಿಗೆ ದರ 2,000 ಡಾಲರ್‌ನಿಂದ 20,000 ಡಾಲರ್‌ವರೆಗೆ ಗಗನಕ್ಕೇರಿತ್ತು. ಇದರಿಂದಾಗಿ ಭಾರತದ ರಫ್ತುದಾರರ ಸರಕುಗಳು ಕಂಟೈನರ್ ಸಿಗದೆ ಗೋದಾಮುಗಳಲ್ಲೇ ಉಳಿಯುವಂತಾಗಿತ್ತು. ಸ್ವಂತ ಕಂಟೈನರ್ ಉತ್ಪಾದನೆಯಿಂದಾಗಿ ಜಾಗತಿಕ ಬಿಕ್ಕಟ್ಟುಗಳ ನಡುವೆಯೂ ಭಾರತದ ವ್ಯಾಪಾರ ಸರಾಗವಾಗಿ ಸಾಗಲು ಸಹಾಯವಾಗುತ್ತದೆ.

 

More Read

Bread Egg Puff
ಬ್ರೆಡ್‌ ಬಳಸಿ ಮನೆಯಲ್ಲೇ ಮಾಡಿ ಬೇಕರಿ ಸ್ಟೈಲ್‌ ರುಚಿಕರ ಎಗ್ ಪಫ್
daily horoscope dina bhavishya 5
ದಿನ ಭವಿಷ್ಯ 03-11-2026
WEATHER 1 e1679398614299 11
ರಾಜ್ಯದ ಹವಾಮಾನ ವರದಿ 03-11-2026

container ship 1

ದೇಶೀಯ ಉದ್ಯಮಗಳಿಗೆ ಉತ್ತೇಜನ
ಕಂಟೈನರ್‌ಗಳನ್ನು ತಯಾರಿಸಲು ವಿಶೇಷ ತರಹದ ಉಕ್ಕನ್ನು (Steel) ಬಳಸಲಾಗುತ್ತದೆ. ಭಾರತದಲ್ಲೇ ಇವುಗಳ ಉತ್ಪಾದನೆ ಆರಂಭವಾಗುವುದರಿಂದ ಟಾಟಾ ಸ್ಟೀಲ್, ಜೆಎಸ್‌ಡಬ್ಲ್ಯೂ ಸ್ಟೀಲ್ ಮತ್ತು ಸೈಲ್ (SAIL) ನಂತಹ ದೇಶೀಯ ಉಕ್ಕಿನ ಕಂಪನಿಗಳಿಗೆ ಭಾರಿ ಬೇಡಿಕೆ ಬರಲಿದೆ. ಇದರೊಂದಿಗೆ ಸ್ಥಳೀಯವಾಗಿ ಪೇಂಟ್, ಪ್ಲೈವುಡ್ ಮತ್ತು ಇತರ ಬಿಡಿಭಾಗಗಳ ಉದ್ಯಮಗಳೂ ಬೆಳೆಯಲಿವೆ.

ಉದ್ಯೋಗ ಸೃಷ್ಟಿ ಮತ್ತು ಆರ್ಥಿಕ ಪ್ರಗತಿ
ಈ 10,000 ಕೋಟಿ ರೂ. ಯೋಜನೆಯ ಮೂಲಕ ಸರ್ಕಾರವು ದೊಡ್ಡ ಮಟ್ಟದ ಆರ್ಥಿಕ ಬದಲಾವಣೆಯನ್ನು ನಿರೀಕ್ಷಿಸುತ್ತಿದೆ. ಇದರಿಂದ 3,000 ನೇರ ಉತ್ಪಾದನಾ ಉದ್ಯೋಗಗಳು ಸೃಷ್ಟಿಯಾಗಲಿವೆ. ಪೂರೈಕೆ ಸರಪಳಿಯಲ್ಲಿ 50,000 ಕ್ಕೂ ಹೆಚ್ಚು ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ. 2040ರ ವೇಳೆಗೆ ದೇಶದ ಆರ್ಥಿಕತೆಗೆ 75,000 ಕೋಟಿ ರೂ. ಕೊಡುಗೆ ಸಿಗಲಿದೆ.

10,000 ಕೋಟಿ ಯೋಜನೆ ಹೇಗೆ ಕೆಲಸ ಮಾಡುತ್ತದೆ?
ಚೀನಾದ ಅಗ್ಗದ ಕಂಟೈನರ್‌ಗಳ ಎದುರು ಭಾರತೀಯ ಕಂಪನಿಗಳು ಸಮರ್ಥವಾಗಿ ಪೈಪೋಟಿ ನಡೆಸಲು ಅನುಕೂಲವಾಗುವಂತೆ, ಪ್ರತಿ ಕಂಟೈನರ್ ಉತ್ಪಾದನೆಗೆ ನೇರ ಹಣಕಾಸು ನೆರವು ನೀಡಲು 8,891 ಕೋಟಿ ರೂ. ಮೊತ್ತದ ಕಾರ್ಯಾಚರಣೆ ವೆಚ್ಚದ ಬೆಂಬಲವನ್ನು ಮೀಸಲಿಡಲಾಗಿದೆ. ಇದರೊಂದಿಗೆ, ದೇಶದಲ್ಲಿ ಹೊಸ ಕಂಟೈನರ್ ಕಾರ್ಖಾನೆಗಳನ್ನು ಸ್ಥಾಪಿಸಲು ಅಥವಾ ಹಾಲಿ ಘಟಕಗಳನ್ನು ವಿಸ್ತರಿಸಲು ಉದ್ಯಮಿಗಳು ಬ್ಯಾಂಕುಗಳಿಂದ ಪಡೆಯುವ ಸಾಲದ ಮೇಲಿನ ಬಡ್ಡಿಯಲ್ಲಿ ರಿಯಾಯಿತಿ ನೀಡಲು 859 ಕೋಟಿ ರೂ. ಹಂಚಿಕೆ ಮಾಡಲಾಗಿದೆ.

ಅಷ್ಟೇ ಅಲ್ಲದೆ ಭಾರತದಲ್ಲೇ ತಯಾರಾಗುವ ಕಂಟೈನರ್‌ಗಳ ಗುಣಮಟ್ಟವನ್ನು ಅಂತಾರಾಷ್ಟ್ರೀಯ ದರ್ಜೆಗೆ ತಕ್ಕಂತೆ ಪರೀಕ್ಷಿಸಿ ಪ್ರಮಾಣೀಕರಣ ನೀಡಲು ಅತ್ಯಾಧುನಿಕ ಪ್ರಯೋಗಾಲಯಗಳನ್ನು ಸ್ಥಾಪಿಸುವ ಸಲುವಾಗಿ 150 ಕೋಟಿ ರೂ. ಅನುದಾನ ನಿಗದಿಪಡಿಸಲಾಗಿದೆ. ಒಟ್ಟಾರೆಯಾಗಿ ಈ ಯೋಜನೆಯು ಸ್ಥಳೀಯ ಉತ್ಪಾದನೆಯನ್ನು ಹೆಚ್ಚಿಸಿ, ಜಾಗತಿಕ ಮಾರುಕಟ್ಟೆಯಲ್ಲಿ ಭಾರತೀಯ ಕಂಟೈನರ್‌ಗಳಿಗೆ ಭದ್ರ ನೆಲೆ ಒದಗಿಸುವ ಗುರಿ ಹೊಂದಿದೆ.

 

Dubai Port

ಸವಾಲುಗಳು ಏನು?
ಕಂಟೈನರ್ ತಯಾರಿಕೆಯಲ್ಲಿ ಅತ್ಯಂತ ಪ್ರಮುಖವಾದದ್ದು ಅದರ ಕಚ್ಚಾ ವಸ್ತು. ಸಾಮಾನ್ಯ ಉಕ್ಕಿನಿಂದ ಕಂಟೈನರ್ ಮಾಡಿದರೆ ಸಮುದ್ರದ ಉಪ್ಪುನೀರಿನ ಗಾಳಿಗೆ ಅದು ಬೇಗನೆ ತುಕ್ಕು ಹಿಡಿಯುತ್ತದೆ.ಇದಕ್ಕಾಗಿ ‘ಕಾರ್ಟನ್ ಸ್ಟೀಲ್’ (Weathering Steel) ಎಂಬ ವಿಶೇಷ ತರಹದ ಮಿಶ್ರಲೋಹದ ಉಕ್ಕನ್ನು ಬಳಸಲಾಗುತ್ತದೆ. ಇದು ಹವಾಮಾನದ ಏರುಪೇರುಗಳನ್ನು ತಡೆದುಕೊಳ್ಳುತ್ತದೆ ಮತ್ತು ತುಕ್ಕು ಹಿಡಿಯುವುದಿಲ್ಲ.

ಹಿಂದೆ ಭಾರತದಲ್ಲಿ ಇದನ್ನು ತಯಾರಿಸುತ್ತಿರಲಿಲ್ಲ. ಆದರೆ ಈಗ ಭಾರತೀಯ ಉಕ್ಕಿನ ಕಂಪನಿಗಳಾದ ಟಾಟಾ ಸ್ಟೀಲ್, ಜೆಎಸ್‌ಡಬ್ಲ್ಯೂ ಸ್ಟೀಲ್ ಮತ್ತು ಸೈಲ್ (SAIL) ಭಾರತದಲ್ಲೇ ಈ ವಿಶೇಷ ಉಕ್ಕನ್ನು ಉತ್ಪಾದಿಸಲು ಆರಂಭಿಸಿವೆ. ಇದು ಭಾರತಕ್ಕೆ ಕಂಟೈನರ್ ತಯಾರಿಕೆಯಲ್ಲಿ ಸ್ವಾವಲಂಬಿಯಾಗಲು ದೊಡ್ಡ ಶಕ್ತಿಯಾಗಿದೆ.

ಕಂಟೈನರ್ ತಯಾರಿಸಿದ ತಕ್ಷಣ ಅದನ್ನು ಸಮುದ್ರದ ಹಡಗಿಗೆ ಹತ್ತಿಸಲು ಬರುವುದಿಲ್ಲ. ಅದಕ್ಕೆ ಕಠಿಣವಾದ ಅಂತಾರಾಷ್ಟ್ರೀಯ ನಿಯಮಗಳಿವೆ. ಪ್ರತಿಯೊಂದು ಕಂಟೈನರ್ ಕೂಡ ISO (International Organization for Standardization) ನಿಯಮಗಳಿಗೆ ಒಳಪಟ್ಟಿರಬೇಕು. ಇವು ಸಮುದ್ರದ ಭಾರಿ ಅಲೆಗಳು, ಚಂಡಮಾರುತ ಮತ್ತು ಸಾವಿರಾರು ಟನ್ ತೂಕವನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿರಬೇಕು.

ಪ್ರತಿ ಕಂಟೈನರ್ ಮೇಲೆ CSC (Convention for Safe Containers) ಎಂಬ ಸುರಕ್ಷತಾ ಪ್ಲೇಟ್ ಇರಬೇಕು. ಭಾರತ ಸರ್ಕಾರವು ಇದಕ್ಕಾಗಿಯೇ ತನ್ನ ಯೋಜನೆಯಲ್ಲಿ 150 ಕೋಟಿ ರೂ. ಮೀಸಲಿಟ್ಟಿದ್ದು, ಭಾರತೀಯ ಕಂಟೈನರ್‌ಗಳಿಗೆ ಜಾಗತಿಕ ಮನ್ನಣೆ ಸಿಗುವಂತೆ ದೇಶದಲ್ಲೇ ಟೆಸ್ಟಿಂಗ್ ಲ್ಯಾಬ್‌ಗಳನ್ನು ಸ್ಥಾಪಿಸುತ್ತಿದೆ.

Transport 3

ಭವಿಷ್ಯದ ಬೃಹತ್ ಬಂದರುಗಳ ಜೊತೆ ಲಿಂಕ್
ಕಂಟೈನರ್ ತಯಾರಿಕೆ ಕೇವಲ ಫ್ಯಾಕ್ಟರಿಗೆ ಸೀಮಿತವಾಗಿಲ್ಲ. ಇದು ಭಾರತದ ಭವಿಷ್ಯದ ಮೆಗಾ ಪ್ರಾಜೆಕ್ಟ್‌ಗಳಿಗೆ ಪೂರಕವಾಗಿದೆ. ಮಹಾರಾಷ್ಟ್ರದಲ್ಲಿ ನಿರ್ಮಾಣವಾಗುತ್ತಿರುವ ಈ ಹೊಸ ದೀಪ್-ವಾಟರ್ ಬಂದರು ವಿಶ್ವದ ಟಾಪ್ 10 ಬಂದರುಗಳಲ್ಲಿ ಒಂದಾಗಲಿದೆ. ಭಾರತವು ತನ್ನದೇ ಆದ ಕಂಟೈನರ್ ಮತ್ತು ಬಂದರುಗಳನ್ನು ಹೊಂದಿದಾಗ, ವಿಶ್ವದ ದೊಡ್ಡ ಹಡಗುಗಳು ಭಾರತಕ್ಕೆ ಬರಲು ಪ್ರಾರಂಭಿಸುತ್ತವೆ. ಇದರಿಂದ ಭಾರತವು ಕೇವಲ ಸರಕು ಕಳುಹಿಸುವ ದೇಶವಾಗಿ ಉಳಿಯದೆ, ಸಿಂಗಾಪುರ ಮತ್ತು ದುಬೈ ತರಹ ಜಾಗತಿಕ ವ್ಯಾಪಾರದ ಪ್ರಮುಖ ಕೇಂದ್ರವಾಗಲಿದೆ.

ಭಾರತವು ಸ್ವಂತವಾಗಿ ಕಂಟೈನರ್ ತಯಾರಿಸುವುದರಿಂದ ಸರಕು ಸಾಗಣೆಗೆ ಕಂಟೈನರ್‌ಗಳ ಕೊರತೆಯಾಗುವುದಿಲ್ಲ ನಿಜ. ಆದರೆ ಇದರಿಂದ ತಕ್ಷಣವೇ ಶಿಪ್ಪಿಂಗ್ ದರಗಳು ಕಡಿಮೆಯಾಗುವುದಿಲ್ಲ. ಏಕೆಂದರೆ ಜಾಗತಿಕ ಶಿಪ್ಪಿಂಗ್ ದರಗಳು ಹಡಗಿನ ಸಾಮರ್ಥ್ಯ, ಇಂಧನ ಬೆಲೆ ಮತ್ತು ಬಂದರುಗಳ ದಕ್ಷತೆಯ ಮೇಲೆ ನಿರ್ಧಾರವಾಗುತ್ತವೆ. ಚೀನಾದ ಬೃಹತ್ ಉತ್ಪಾದನಾ ಸಾಮರ್ಥ್ಯ ಮತ್ತು ಕಡಿಮೆ ಬೆಲೆಗೆ ಪೈಪೋಟಿ ನೀಡುವುದು ಭಾರತೀಯ ಕಂಪನಿಗಳಿಗೆ ಆರಂಭದಲ್ಲಿ ದೊಡ್ಡ ಸವಾಲಾಗಿರಲಿದೆ.

ಭಾರತಕ್ಕೆ ಏನು ಲಾಭ?
ಶಿಪ್ಪಿಂಗ್ ಕಂಟೈನರ್‌ ಉದ್ಯಮದಲ್ಲಿ ಭಾರತಕ್ಕೆ ಸ್ವಾವಲಂಬನೆ ಸಾಧಿಸುವುದು ಕೇವಲ ಒಂದು ಆರ್ಥಿಕ ನೀತಿಯಲ್ಲ; ಬದಲಿಗೆ ಇದು ಭಾರತವನ್ನು ಜಾಗತಿಕ ಉತ್ಪಾದನಾ ಮತ್ತು ರಫ್ತು ಸೂಪರ್ ಪವರ್ (Global Manufacturing Hub) ಮಾಡಲು ಅತ್ಯಗತ್ಯವಾದ ಅಡಿಪಾಯವಾಗಿದೆ.

ಭಾರತ ಸರ್ಕಾರವು ಮುಂಬರುವ ವರ್ಷಗಳಲ್ಲಿ 2 ಟ್ರಿಲಿಯನ್ ಡಾಲರ್ ಮೌಲ್ಯದ ಸರಕು ಮತ್ತು ಸೇವೆಗಳನ್ನು ರಫ್ತು ಮಾಡುವ ಬೃಹತ್ ಗುರಿಯನ್ನು ಹೊಂದಿದೆ: ಭಾರತದಲ್ಲಿ ಮೊಬೈಲ್, ಆಟೋಮೊಬೈಲ್, ಫಾರ್ಮಾ
ಸ್ಯುಟಿಕಲ್ಸ್ (ಔಷಧಗಳು) ಮತ್ತು ಜವಳಿ ಉತ್ಪಾದನೆ ಎಷ್ಟೇ ಹೆಚ್ಚಾದರೂ, ಅವುಗಳನ್ನು ವಿದೇಶಕ್ಕೆ ಕಳುಹಿಸಲು ಕಂಟೈನರ್‌ಗಳು ಬೇಕೇ ಬೇಕು.ಬೇರೆ ದೇಶಗಳ ಕಂಟೈನರ್‌ಗಳ ಮೇಲೆ ಅವಲಂಬಿತರಾದರೆ, ಸಮಯಕ್ಕೆ ಸರಿಯಾಗಿ ಪೂರೈಕೆ ಮಾಡಲು ಸಾಧ್ಯವಾಗುವುದಿಲ್ಲ. ಸ್ವಂತ ಕಂಟೈನರ್ ಇದ್ದರೆ ಭಾರತೀಯ ರಫ್ತುದಾರರು ಜಾಗತಿಕ ಮಾರುಕಟ್ಟೆಯಲ್ಲಿ ಧೈರ್ಯವಾಗಿ ಪೈಪೋಟಿ ನಡೆಸಬಹುದು.

ಭಾರತವು ಜಾಗತಿಕ ಸಮುದ್ರ ಮಾರ್ಗದ (Global Sea Lines of Communication) ಅತ್ಯಂತ ಆಯಕಟ್ಟಿನ ಜಾಗದಲ್ಲಿದೆ. ಮಲಕ್ಕಾ ಜಲಸಂಧಿಯಿಂದ ಸುಯೆಜ್ ಕಾಲುವೆಯವರೆಗೆ ಸಾಗುವ ವಿಶ್ವದ ಪ್ರಮುಖ ಹಡಗು ಮಾರ್ಗಗಳು ಭಾರತದ ಕರಾವಳಿಯ ಸಮೀಪದಲ್ಲೇ ಹಾದುಹೋಗುತ್ತವೆ.

ಭಾರತವು ಮಹಾರಾಷ್ಟ್ರದ ವಧಾವನ್ (Vadhavan) ಮತ್ತು ಕೇರಳದ ವಿಝಿಂಜಂ (Vizhinjam) ನಂತಹ ದೈತ್ಯ ‘ಟ್ರಾನ್ಸ್‌ಶಿಪ್‌ಮೆಂಟ್’ ಬಂದರುಗಳನ್ನು ಅಭಿವೃದ್ಧಿಪಡಿಸುತ್ತಿದೆ. ಈ ಬಂದರುಗಳಿಗೆ ಲಕ್ಷಾಂತರ ಕಂಟೈನರ್‌ಗಳ ಅಗತ್ಯವಿದ್ದು, ಭಾರತವೇ ಇವುಗಳನ್ನು ಪೂರೈಸಿದರೆ ದೇಶದ ಲಾಜಿಸ್ಟಿಕ್ಸ್ ಶಕ್ತಿ ದುಪ್ಪಟ್ಟಾಗುತ್ತದೆ.

ಸಂಘರ್ಷ ಅಥವಾ ರಾಜತಾಂತ್ರಿಕ ಬಿಕ್ಕಟ್ಟು ಉಂಟಾದಾಗ, ಚೀನಾ ಉದ್ದೇಶಪೂರ್ವಕವಾಗಿ ಭಾರತದ ಕಡೆಗೆ ಬರುವ ಕಂಟೈನರ್‌ಗಳನ್ನು ತಡೆದು ಭಾರತದ ಆರ್ಥಿಕತೆಗೆ ಪೆಟ್ಟು ನೀಡಬಹುದು. ಭಾರತವು ತನ್ನದೇ ಆದ ಕಂಟೈನರ್‌ಗಳನ್ನು ಹೊಂದಿದ್ದರೆ, ಚೀನಾದ ಯಾವುದೇ ರೀತಿಯ ಆರ್ಥಿಕ ಒತ್ತಡ ಅಥವಾ ‘ಲಾಜಿಸ್ಟಿಕ್ಸ್ ಬ್ಲ್ಯಾಕ್‌ಮೇಲ್’ ತಂತ್ರಗಳಿಗೆ ಮಣಿಯುವ ಅಗತ್ಯವಿರುವುದಿಲ್ಲ.

Worlds largest container ship MSC IRINA docks at Vizhinjam International Seaport Thiruvananthapuram Kerala 1

ಸದ್ಯಕ್ಕೆ ಭಾರತದ ಕಂಪನಿಗಳು ಕಂಟೈನರ್‌ಗಳನ್ನು ಖರೀದಿಸಲು ಮತ್ತು ಬಾಡಿಗೆಗೆ ಪಡೆಯಲು ಪ್ರತಿವರ್ಷ ಕೋಟ್ಯಂತರ ಡಾಲರ್ ಹಣವನ್ನು ವಿದೇಶಿ ಕಂಪನಿಗಳಿಗೆ (ಮುಖ್ಯವಾಗಿ ಚೀನಾಕ್ಕೆ) ಪಾವತಿಸುತ್ತವೆ. ಭಾರತದಲ್ಲೇ ಕಂಟೈನರ್ ತಯಾರಿಕೆ ಆರಂಭವಾದರೆ, ವಿದೇಶಕ್ಕೆ ಹರಿದು ಹೋಗುತ್ತಿದ್ದ ಭಾರಿ ಪ್ರಮಾಣದ ವಿದೇಶಿ ವಿನಿಮಯ (Foreign Exchange) ದೇಶದಲ್ಲೇ ಉಳಿಯುತ್ತದೆ. ಇದು ಭಾರತದ ಆರ್ಥಿಕತೆಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ.

ಭಾರತದಲ್ಲಿ ಸದ್ಯಕ್ಕೆ ಜಿಡಿಪಿಯ ಸುಮಾರು 13-14% ಹಣ ಲಾಜಿಸ್ಟಿಕ್ಸ್ (ಸರಕು ಸಾಗಣೆ) ವೆಚ್ಚಕ್ಕೆ ವ್ಯಯವಾಗುತ್ತದೆ. ಇದನ್ನು 9% ಕ್ಕಿಂತ ಕೆಳಗೆ ತರಲು ಸರ್ಕಾರ ಪ್ರಯತ್ನಿಸುತ್ತಿದೆ. ರೈಲ್ವೆ, ರಸ್ತೆ ಮತ್ತು ಒಳನಾಡಿನ ಜಲಮಾರ್ಗಗಳ (Inland Waterways) ಮೂಲಕ ಒಂದೇ ಕಂಟೈನರ್‌ನಲ್ಲಿ ದೇಶದ ಯಾವುದೇ ಮೂಲೆಗೆ ಸರಕನ್ನು ಸುಲಭವಾಗಿ ತಲುಪಿಸಬಹುದು. ಇದರಿಂದ ದೇಶದ ಒಳಗೂ ವ್ಯಾಪಾರ ಸರಳವಾಗುತ್ತದೆ.

ಜಾಗತಿಕ ರಂಗದಲ್ಲಿ ಕಂಟೈನರ್ ತಯಾರಿಕೆಯಲ್ಲಿ ಸ್ವಾವಲಂಬನೆ ಸಾಧಿಸುವುದು ಭಾರತಕ್ಕೆ ಕೇವಲ ಒಂದು ಕೈಗಾರಿಕಾ ಯೋಜನೆಯಲ್ಲ; ಬದಲಿಗೆ ಅದು ರಾಷ್ಟ್ರೀಯ ಭದ್ರತೆ ಮತ್ತು ಆರ್ಥಿಕ ಸಾರ್ವಭೌಮತ್ವದ ರಕ್ಷಾಕವಚ. ಚೀನಾದ ದಶಕಗಳ ಏಕಸ್ವಾಮ್ಯ ಹಾಗೂ ಕಡಿಮೆ ದರದ ಉತ್ಪಾದನಾ ಸಾಮರ್ಥ್ಯಕ್ಕೆ ಪೈಪೋಟಿ ನೀಡುವುದು ಆರಂಭದಲ್ಲಿ ಸುಲಭವಲ್ಲದಿದ್ದರೂ, ವಧಾವನ್ ಮತ್ತು ವಿಝಿಂಜಂನಂತಹ ಮೆಗಾ ಬಂದರುಗಳ ನಿರ್ಮಾಣ, ಕಾರ್ಟನ್ ಸ್ಟೀಲ್‌ನ ದೇಶೀಯ ಲಭ್ಯತೆ ಮತ್ತು ₹10,000 ಕೋಟಿಯ ಸರ್ಕಾರದ ಬಲವಾದ ಬೆಂಬಲ ಭಾರತವನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸುತ್ತಿವೆ. ಸರಕು ಸಾಗಣೆಯ ಈ ಉಕ್ಕಿನ ಪೆಟ್ಟಿಗೆಗಳು ಭಾರತದ ರಫ್ತುದಾರರಿಗೆ ಸ್ವಾತಂತ್ರ್ಯ ನೀಡುವುದರ ಜೊತೆಗೆ, ಮುಂಬರುವ ದಿನಗಳಲ್ಲಿ ಭಾರತವನ್ನು ಕೇವಲ ಆಮದು-ರಫ್ತಿನ ತಾಣವಾಗಿ ಮಾತ್ರವಲ್ಲದೆ ಜಾಗತಿಕ ಲಾಜಿಸ್ಟಿಕ್ಸ್‌ನ ಪ್ರಮುಖ ಕೇಂದ್ರವನ್ನಾಗಿ (Global Maritime Hub) ರೂಪಿಸಲಿವೆ. ಇದು ‘ಮೇಕ್ ಇನ್ ಇಂಡಿಯಾ’ ಪರಿಕಲ್ಪನೆಯನ್ನು ಕಡಲಿನ ಅಲೆಗಳ ಮೇಲೆ ಜಗತ್ತಿಗೆ ಪರಿಚಯಿಸುವ ಐತಿಹಾಸಿಕ ಪಯಣ.

Share This Article
Facebook Whatsapp Whatsapp Telegram Copy Link
Cinema News
Amitabh bacchan
ಬಚ್ಚನ್‌ ಮನೆ ಮೇಲೆ ಬಾಂಬ್ ಬೆದರಿಕೆ – ಬುಲೆಟ್‌ಪ್ರೂಫ್‌ ಗ್ಲಾಸ್‌ ಭದ್ರತೆಯಲ್ಲಿ ಫ್ಯಾನ್ಸ್‌ ಮೀಟಾದ ಬಿಗ್‌ ಬಿ
Dhanveer Vijayalakshmi
ನಟ ಧನ್ವೀರ್ ವಿರುದ್ಧ ಮಾನಹಾನಿ ಮೊಕದ್ದಮೆ ದಾಖಲಿಸಿದ ವಿಜಯಲಕ್ಷ್ಮಿ
Bigg Boss Kumari
ಬಿಗ್‌ಬಾಸ್ ಮನೆಯಿಂದ ಅಗ್ನಿಪರೀಕ್ಷೆಯ ಕುಮಾರಿ ಔಟ್ – ಕಣ್ಣೀರಿಟ್ಟ ಕಿರಣ್ ಶಾಸ್ತ್ರಿ
Simple Suni Lambodara 2 0
ಲಂಬೋದರ 2.0 ಟ್ರೇಲರ್ ಔಟ್: ನೈಜ ಹ್ಯೂಮನಾಯ್ಡ್ ರೋಬೋಟ್ ನಟನೆ

You Might Also Like

Visakhapatnam oil refinery

ವಿಶಾಖಪಟ್ಟಣಂ ತೈಲ ಸಂಸ್ಕರಣಾಗಾರದಲ್ಲಿ ಭಾರೀ ಸ್ಫೋಟ; ಮುಗಿಲೆತ್ತರಕ್ಕೆ ಚಿಮ್ಮಿದ ಬೆಂಕಿ

8 hours ago
Rahul Gandhi Priyanka Gandhi

ರಾಷ್ಟ್ರೀಯ ಕಾಂಗ್ರೆಸ್‌ ಇಬ್ಭಾಗವಾಗಿದೆ – ಸಹೋದರಿಯ ರಾಜಕೀಯ ಏಳಿಗೆಗೆ ರಾಹುಲ್‌ ಅಡ್ಡಿ: ಬಿಜೆಪಿ ಆರೋಪ

8 hours ago
DK Shivakumar 4

ಚಂಡಮಾರುತ ಪೀಡಿತ ಆಂಧ್ರ ಪ್ರದೇಶಕ್ಕೆ ಕರ್ನಾಟಕ ಸರ್ಕಾರದ ನೆರವಿನ ಹಸ್ತ: ಡಿ.ಕೆ ಶಿವಕುಮಾರ್

9 hours ago
Basvaraj Rayareddi

ಜ್ಞಾನಸೇತು ಯೋಜನೆಯ MoU ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಸಹಕಾರಿ: ಬಸವರಾಜ ರಾಯರಡ್ಡಿ

9 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
© Public TV. Design Company Knowtable. All Rights Reserved.
  • Privacy Policy
  • CSR-Policy
  • Terms of Service
  • POSH POLICY
  • Complaints Redressal
  • Terms and Conditions
  • Contact