– ಏರಿಯಾದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟರೆ ನಿಮ್ಮನ್ನು ಸುಮ್ಮನೆ ಬಿಡಲ್ಲ
– ದೂರುದಾರರ ಜೊತೆ ಮಾತನಾಡುವಾಗ ಮಾತಿನ ಮೇಲೆ ನಿಗಾ ಇರಲಿ ಅಂತ ಪೊಲೀಸರಿಗೆ ಎಚ್ಚರಿಕೆ
ಬೆಂಗಳೂರು: ರೌಡಿಗಳನ್ನು ಬರೀ ಅರೆಸ್ಟ್ ಮಾಡಿದ್ರೆ ಸಾಲಲ್ಲ. ಅದು ನನಗೆ ತೃಪ್ತಿ ಕೊಡಲ್ಲ. ಏನು ಮಾಡಬೇಕು ಅಂತ ನಾನು ಬಾಯಿಬಿಟ್ಟು ಹೇಳಬೇಕಿಲ್ಲ ಎಂದು ಎಸಿಪಿ ಮತ್ತುಇನ್ಸ್ಪೆಕ್ಟರ್ಗಳಿಗೆ ಸಭೆಯೊಂದರಲ್ಲಿ ಮುಖ್ಯ ಪೊಲೀಸ್ ಆಯುಕ್ತ ಆರ್.ಹಿತೇಂದ್ರ (R.Hitendra) ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಏರಿಯಾದಲ್ಲಿ ಕಾನೂನು ಸುವ್ಯವಸ್ಥೆ ಹಾಳಾದ್ರೆ ನಾನು ಬಿಡಲ್ಲ. ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವ ರೌಡಿಗಳನ್ನು ಕೇವಲ ಅರೆಸ್ಟ್ ಮಾಡಿದ್ರೆ ಸಾಲದು. ಅದು ನನಗೆ ತೃಪ್ತಿ ತರುವುದಿಲ್ಲ. ಏನು ಮಾಡಬೇಕು ಎಂಬುದನ್ನು ನಾನು ಬಾಯಿಬಿಟ್ಟು ಹೇಳೋಕಾಗಲ್ಲ. ಏರಿಯಾದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟರೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಎಸಿಪಿ ಹಾಗೂ ಇನ್ಸ್ಪೆಕ್ಟರ್ಗಳಿಗೆ ಖಡಕ್ ಎಚ್ಚರಿಕೆ ನೀಡಿದರು. ಸಿವಿಲ್ ವಿವಾದಗಳನ್ನು ಮೈಮೇಲೆ ಎಳೆದುಕೊಂಡರೆ ನಾನು ಜವಾಬ್ದಾರನಲ್ಲ. ಕಾನೂನು ಪ್ರಕಾರವಷ್ಟೇ ಕೆಲಸ ಮಾಡಬೇಕು ಎಂದು ಸೂಚಿಸಿದರು. ಇದನ್ನೂ ಓದಿ: ರಾಮನಗರ | ವಿದ್ಯುತ್ ಶಾಕ್ಗೆ ದ್ವಿತೀಯ ಪಿಯುಸಿ ವಿದ್ಯಾರ್ಥಿ ಬಲಿ
ಹಿರಿಯ ಅಧಿಕಾರಿಗಳ ಮಾತಿಗೆ ಡ್ರಗ್ ಕೇಸ್ ದಾಖಲಿಸುವುದಲ್ಲ. ಎನ್ಡಿಪಿಎಸ್ ಪ್ರಕರಣಗಳಲ್ಲಿ ಮಾದಕವಸ್ತು ವಶಪಡಿಸಿಕೊಂಡು ಆರೋಪಿಗಳನ್ನು ಬಂಧಿಸಿದರೆ ಮಾತ್ರ ಸಾಲದು, ಅದರ ಆಳಕ್ಕೆ ಇಳಿದು ತನಿಖೆ ನಡೆಸಬೇಕು ಎಂದರು.
ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ತುರ್ತು ಕ್ರಮ ಕೈಗೊಳ್ಳಬೇಕು. ದೂರುದಾರರೊಂದಿಗೆ ಮಾತನಾಡುವಾಗ ಮಾತಿನ ಮೇಲೆ ನಿಗಾ ಇರಲಿ. ‘ನಿನ್ನ ಮಗಳನ್ನು ಸರಿಯಾಗಿ ಇಟ್ಟುಕೊಂಡಿದ್ದರೆ ಹೀಗೇಕೆ ಆಗುತ್ತಿತ್ತು’ ಎಂದು ಇನ್ಸ್ಪೆಕ್ಟರ್ ಒಬ್ಬರು ಹೇಳಿರುವುದು ನನ್ನ ಗಮನಕ್ಕೆ ಬಂದಿದೆ. ನೀವು ಏನು ಮಾತನಾಡುತ್ತೀರಿ ಎಂಬುದನ್ನು ಜನ ವೀಡಿಯೊ ಮಾಡುತ್ತಾರೆ. ಸೋಶಿಯಲ್ ಮೀಡಿಯಾ ಬೆಳವಣಿಗೆಗಳನ್ನು ಕೋರ್ಟ್ ಕೂಡ ಗಮನಿಸುತ್ತದೆ. ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಿ ಅಂತಾ ವಾರ್ನಿಂಗ್ ಕೊಟ್ಟರು. ಇದನ್ನೂ ಓದಿ: ಲಾಡ್ಜ್ನಲ್ಲಿ ಪ್ರೇಯಸಿ ಹತ್ಯೆ ಕೇಸ್ – ಬೇರೆಯವನ ಜೊತೆ ಓಡಾಟ ಗೊತ್ತಾಗಿ ಕತ್ತು ಸೀಳಿ ಕೊಲೆ
ನಿಮಗೆ ಯಾವುದೇ ಸಮಸ್ಯೆ ಇದ್ದರೂ ನನ್ನ ಚೇಂಬರ್ ಬಾಗಿಲು ಯಾವಾಗಲೂ ತೆರೆದಿರುತ್ತದೆ ಅಂತಾ ಎಲ್ಲಾ ಅಧಿಕಾರಿಗಳಿಗೆ ಕಾನೂನು ಪ್ರಕಾರವೇ ಕೆಲಸ ಮಾಡುವಂತೆ ಸೂಚಿಸಿದರು.
