* 12 ದಿನ ಆಯ್ತು.. ಆ ಹೆಣ್ಣುಮಕ್ಕಳು ಚಳಿ ಮಳೆ ಮಧ್ಯೆ ಅವರೇ: ಸರ್ಕಾರದ ವಿರುದ್ಧ ಕೇಂದ್ರ ಸಚಿವ ಕಿಡಿ
ಬೆಂಗಳೂರು: ಕಳ್ಳರು ಬಂದವರೆ ಅಂತಾ ಸಿಎಂ ಡಿ.ಕೆ.ಶಿವಕುಮಾರ್ (D.K.Shivakumar) ಅವರನ್ನ ಹಳ್ಳಿಯೊಂದರ ಜನ ಮಧ್ಯ ರಾತ್ರಿ ಓಡಿಸಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ಟಾಂಗ್ ಕೊಟ್ಟರು.
ಭ್ರಷ್ಟಾಚಾರ ಮುಕ್ತ ಸರ್ಕಾರ ಎಂಬ ಸಿಎಂ ಹೇಳಿಕೆಗೆ ತಿರುಗೇಟು ನೀಡಿದ ಹೆಚ್ಡಿಕೆ, ಕಳೆದ 15 ದಿನಗಳ ಹಿಂದೆ ಹಳ್ಳಿಯೊಂದಕ್ಕೆ ಜಮೀನು ನೋಡೋಕೆ ಸಿಎಂ ಹೋಗ್ತಾರೆ. ಯಾರೋ ಕಳ್ಳರು ಬಂದವರೆ ಅಂತಾ ಸಿಎಂನಾ ಹಳ್ಳಿ ಜನ ಓಡಿಸವ್ರೆ. ಸೋಂಪುರದ ಹತ್ತಿರ ಹಳ್ಳಿ ಜನರ ಓಡಿಸವ್ರೆ. ಎದ್ನೋ ಬಿದ್ನೋ ಅಂತಾ ಸಿಎಂ ಓಡಿ ಬಂದವರೆ ಗೊತ್ತಾ. ಇದು ಭ್ರಷ್ಟಾಚಾರ ಮುಕ್ತ ಸರ್ಕಾರ ಎಂದು ಲೇವಡಿ ಮಾಡಿದರು. ಇದನ್ನೂ ಓದಿ: 12ನೇ ದಿನಕ್ಕೆ ಕಾಲಿಟ್ಟ `ಆಶಾ’ ಹೋರಾಟ – ಮನವೊಲಿಕೆಗೆ ಮತ್ತೊಂದು ಸುತ್ತಿನ ಪ್ರಯತ್ನಕ್ಕೆ ಮುಂದಾದ ಯುಟಿ ಖಾದರ್
15 ಎಕರೆ ಜಮೀನು ನೋಡೋಕೆ ಸಿಎಂ ಮಧ್ಯರಾತ್ರಿ ಹೋಗಿದ್ರು. ರಾತ್ರೋ ರಾತ್ರಿ ಜಮೀನು ಕಬಳಿಸೋಕೆ ಹೋಗಿ, ಜನ ಕಳ್ಳರು ಅಂತಾ ಓಡಿಸಿಕೊಂಡು ಬಂದವರೆ. ಆ ಜಾಲ ನೆಲಮಂಗಲದ ಸೊಂಪುರ ಇರಬೇಕು ಎಂದು ಮಾತನಾಡಿದರು.
ಭ್ರಷ್ಟಾಚಾರ ಅನ್ನೋದೆ ಗೊತ್ತಿಲ್ಲವ ಅವರಿಗೆ? ಮೊನ್ನೆ ತಾನೆ 20 ಗುಂಟೆ ಜಮೀನಿಗೆ ರೆವಿನ್ಯೂ ಇನ್ಸ್ಪೆಕ್ಟರ್ 50 ಸಾವಿರ ತಗೊಂಡು ಸಸ್ಪೆಂಡ್ ಆಗಿದ್ದಾನೆ. ಅದು ಭ್ರಷ್ಟಾಚಾರ ಅಲ್ವ? ಅವರ ಮಿನಿಸ್ಟರ್ ಹೇಳಿದಂಗೆ ಅದು ಗೌರವಧನನಾ? ಗೌರವಧನದಿಂದ ದುಡ್ಡು ಕೊಡಬೇಕು ಅಂದರಲ್ಲ ಅದು ಭ್ರಷ್ಟಾಚಾರ ಅಂದ್ರೆ. ಎಷ್ಟೇ ಕಡೆ ಕೆಲಸ ಮಾಡೋಕೆ ಹೋಗಿ ದುಡ್ಡು ತಗೊಂಡು ಸಿಕ್ಕಿ ಹಾಕಿಕೊಳ್ಳುತ್ತಿದ್ದಾರೆ. ದಾಖಲೆಗಳು ಟನ್ಗಟ್ಟಲೆ ಇವೆ ಎಂದು ವಾಗ್ದಾಳಿ ನಡೆಸಿದರು.
ಸಿಎಂ ಜಪಾನ್ಗೆ ಹೋದರು. ಕುಮಾರಸ್ವಾಮಿ ಮತ್ತು ದೇವೇಗೌಡರದ್ದು ಸಾಕ್ಷಿ ಗುಡ್ಡೆ ಕೇಳ್ತಾರೆ. ಟೊಯೊಟಾ ಕಂಪನಿ ತಂದದ್ದು ದೇವೇಗೌಡರು. ಹರಿಯಾಣಗೋ, ಮಹಾರಾಷ್ಟ್ರಕ್ಕೋ ಹೋಗ್ತಿತ್ತು. ದೇವೇಗೌಡರು ರಿಕ್ವೆಸ್ಟ್ ಮಾಡಿ ಟೊಯೊಟಾ ತಂದರು. ಕಾಂಗ್ರೆಸ್ ಅವರು ಅದಕ್ಕೆ ಮರಳು, ಇಟ್ಟಿಗೆ ಅಂತಾ ಹೊಡೆದು ದುಡ್ಡು ಮಾಡಿದ್ರು. ಆ ಕೆಲಸ ನಾವು ಮಾಡಲಿಲ್ಲ. ಪ್ರಾಜೆಕ್ಟ್ 4 ಇದೆಯಲ್ಲ ಅದನ್ನ ಮಹಾರಾಷ್ಟ್ರಗೆ ಯಾಕ್ ಇನ್ವೆಸ್ಟ್ ಮಾಡೋದಕ್ಕೆ ಹೋದರು? ಇವರು ಭ್ರಷ್ಟಾಚಾರದ ಬಗ್ಗೆ ಮಾತಾಡೋ ಎಂದು ಗುಡುಗಿದರು. ಇದನ್ನೂ ಓದಿ: ಆಶಾ ಕಾರ್ಯಕರ್ತೆಯರ ಜೊತೆ ಯು.ಟಿ. ಖಾದರ್ ಸಭೆ – 2,000 ರೂ. ಹೆಚ್ಚಳದ ಭರವಸೆಗೂ ಮೂಡದ ಒಮ್ಮತ
ಕೇಂದ್ರ ಸರ್ಕಾರಕ್ಕೆ ಹೇಳಿ ಆಶಾ ಕಾರ್ಯಕರ್ತೆಯರಿಗೆ ಪರಿಹಾರ ಕೊಡಿಸಲಿ ಎಂಬ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿ, ಮುಖ್ಯಮಂತ್ರಿಗಳು ನನ್ನ ಹೆಸರು ರೆಫರ್ ಮಾಡವರೆ. ಕೇಂದ್ರ ಸರ್ಕಾರಕ್ಕೆ ಕೇಳಿ ದುಡ್ಡು ಕೊಡಿಸಿ ಅಂತಾ. ಕೇಂದ್ರ ಸರ್ಕಾರದಿಂದ ಕೊಡುವಂತಹದ್ದು ಬೇರೆ. ರಾಜ್ಯ ಸರ್ಕಾರ ಏನು ಮಾಡಿದೆ ಅದು ಹೇಳಿ. ಮೊದಲು ರಾಜ್ಯ ಸರ್ಕಾರ ಏನು ಕೊಡ್ತಿದೆ ಅದು ಹೇಳಿ. ಈ ಹಿಂದೆ ಅಂಗನವಾಡಿ, ಆಶಾ ಕಾರ್ಯಕರ್ತೆಯರನ್ನ ದೆಹಲಿಯಲ್ಲಿ ಕರೆಸಿ ಎರಡು ಇಲಾಖೆಗಳ ಜೊತೆ ಮಾತನಾಡಿಸಿದ್ದೇನೆ. ಅದು ಏನಾಗುತ್ತೋ ನೋಡೋಣ. 15 ಸಾವಿರ ಕೊಡ್ತೀವಿ ಅಂತಾ ಪ್ರಣಾಳಿಕೆಯಲ್ಲಿ ಹೇಳಿ ನೀವು ಮಾಡ್ತಾ ಇರೋದು ಏನು. 12 ದಿನ ಆಯ್ತು ಆ ಹೆಣ್ಣುಮಕ್ಕಳು ಚಳಿ ಮಳೆ ಮಧ್ಯೆ ಅವರೇ. ಕೇಂದ್ರ ಸರ್ಕಾರ ನೇಮಕ ಮಾಡಿಕೊಂಡಿರುವುದು ಅಂತಾ ಹೇಳ್ತೀರಾ. ನೇಮಕ ಮಾಡಿಕೊಳ್ಳಬೇಕಾದ್ರೆ ಯಾಕ್ ವಿರೋಧ ಮಾಡಲಿಲ್ಲ ಹೇಳಿ? ರಾಜ್ಯ ಸರ್ಕಾರ ಮೊದಲು ಕೊಡಲಿ ಆಮೇಲೆ ಕೇಂದ್ರ ಸರ್ಕಾರದ್ದು ಮಾತಾಡೋಣ ಎಂದು ಸಿಎಂಗೆ ತಿರುಗೇಟು ನೀಡಿದರು.
