ಅಮರಾವತಿ: ಮುರಸು ಚಂಡಮಾರುತ (Murasu Cyclone) (ನ.3) ಆಂಧ್ರಪ್ರದೇಶ (Andhra Pradesh) ಕರಾವಳಿಗೆ ಅಪ್ಪಳಿಸಿದ್ದು, ಪರಿಣಾಮ ಕರಾವಳಿ ಭಾಗದಲ್ಲಿ 120 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದ್ದು, ಭಾರೀ ಮಳೆ ಮುನ್ಸೂಚನೆ ನೀಡಲಾಗಿದೆ.
ಭಾರತೀಯ ಹವಾಮಾನ ಇಲಾಖೆ, ಮಂಗಳವಾರ ಬೆಳಿಗ್ಗೆ 4 ಗಂಟೆ ಸುಮಾರಿಗೆ ಪ್ರಕಾಶಂ ಜಿಲ್ಲೆಯ ಒಂಗೋಲು ಬಳಿ ಮುರಸು ಚಂಡಮಾರುತವು ಆಂಧ್ರ ಕರಾವಳಿಗೆ ಅಪ್ಪಳಿಸಿದೆ. ಇದು ಗಂಟೆಗೆ 100 ರಿಂದ 120 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಭಾರಿ ಮಳೆಯಾಗುವ ಸಾಧ್ಯತೆಯಿದೆ. ಇದನ್ನೂ ಓದಿ: ಬಂಗಾಳಕೊಲ್ಲಿಯಲ್ಲಿ ತೀವ್ರಗೊಂಡ ‘ಮುರುಸು’ ಚಂಡಮಾರುತ; ಆಂಧ್ರ, ತಮಿಳುನಾಡು, ಒಡಿಶಾದಲ್ಲಿ ಹೈ ಅಲರ್ಟ್
Landfall process continues. In the forward sector of cyclone, major part of wall cloud entered into land and eye is entering the coast. https://t.co/tER5mvyiF8
— India Meteorological Department (@Indiametdept) November 2, 2026
ಚಂಡಮಾರುತದ ಪ್ರಭಾವದಿಂದಾಗಿ ದಕ್ಷಿಣ ರಾಜ್ಯದ ಹಲವೆಡೆ ಭಾರೀ ಮಳೆಯಾಗಿದೆ. ಸೋಮವಾರ (ನ.2) ತಡರಾತ್ರಿ ಪ್ರಾರಂಭವಾದ ಮಳೆಯು ಮಂಗಳವಾರ (ನ.3) ಮುಂಜಾನೆಯವರೆಗೆ ಸುರಿದಿದೆ. ಪರಿಣಾಮ ನಗರದ ಹಲವು ಭಾಗಗಳಲ್ಲಿ ನೀರು ನಿಂತುಕೊಂಡಿದ್ದು, ವಾಹನ ಸವಾರರಿಗೆ ಸಮಸ್ಯೆ ಎದುರಾಗಿದೆ.
ಹವಾಮಾನ ಇಲಾಖೆಯ ಪ್ರಕಾರ, ಮುಂದಿನ 12 ಗಂಟೆಗಳ ಕಾಲ ಆಂಧ್ರಪ್ರದೇಶದ ದಕ್ಷಿಣ ಕರಾವಳಿಯ ಉದ್ದಕ್ಕೂ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಪರಿಣಾಮ ದಕ್ಷಿಣ ಆಂಧ್ರಪ್ರದೇಶದ ತಗ್ಗು ಪ್ರದೇಶಗಳು ಜಲಾವೃತಗೊಳ್ಳುವ ಸಾಧ್ಯತೆಯಿದ್ದು, ಸುಮಾರು 1.0 ರಿಂದ 1.5 ಮೀಟರ್ಗಳಷ್ಟು ಚಂಡಮಾರುತದ ಅಲೆ ಏಳಬಹುದು ಎಂದು ಮುನ್ಸೂಚನೆ ನೀಡಿದೆ.ಇದನ್ನೂ ಓದಿ: ದೆಹಲಿಯಲ್ಲಿ ವಾಯು ಗುಣಮಟ್ಟ ಸೂಚ್ಯಂಕ 417ಕ್ಕೆ ಏರಿಕೆ – ಸವಾರರಿಗೆ ಮೊದಲ ದಿನವೇ 68.4 ಲಕ್ಷ ದಂಡ
ಮತ್ತೊಂದೆಡೆ, ಚಂಡಮಾರುತ ಮುರಸು ಕರಾವಳಿದ ಬೆನ್ನಲ್ಲೇ ಯಾವುದೇ ಜೀವಹಾನಿ ಸಂಭವಿಸದಂತೆ ನೋಡಿಕೊಳ್ಳಲು ಮತ್ತು ಅಧಿಕಾರಿಗಳಿಗೆ ಎಚ್ಚರಿಕೆಯಿಂದಿರಲು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನಿರ್ದೇಶನ ನೀಡಿದ್ದಾರೆ. ಪರಿಸ್ಥಿತಿಯನ್ನು ಅವಲೋಕಿಸಿದ ಅವರು, ನೆಲ್ಲೂರು, ಪ್ರಕಾಶಂ ಮತ್ತು ಕೋತಪಟ್ಟಣಂ ಕರಾವಳಿ ಪ್ರದೇಶದಲ್ಲಿ ಮಳೆಯ ತೀವ್ರತೆ ಹಾಗೂ ಗಾಳಿಯ ವೇಗದ ಬಗ್ಗೆ ಮಾಹಿತಿ ಪಡೆದಿದ್ದಾರೆ.ಇದನ್ನೂ ಓದಿ: ರಾಮಮಂದಿರ ಕಾಣಿಕೆ ಕಳವು ಪ್ರಕರಣ – ಸುಪ್ರೀಂನಲ್ಲಿ ಅರ್ಜಿಗಳ ಇತ್ಯರ್ಥ, ವಿಚಾರಣೆಗೆ ಸಹಕರಿಸಲು ಅರ್ಜಿದಾರರಿಗೆ ಅವಕಾಶ
