– ನೆತನ್ಯಾಹು – ಸೇನಾ ಮುಖ್ಯಸ್ಥರ ನಡುವೆ ಬಿರುಕು; ವರದಿ ತಳ್ಳಿಹಾಕಿದ ಇಸ್ರೇಲ್
ಟೆಲ್ಅವಿವ್: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu) ಅವರು ಅಕ್ಟೋಬರ್ 27ರ ಚುನಾವಣೆಗೆ ಮುನ್ನವೇ ಇರಾನ್ ಮೇಲೆ ಜಂಟಿ ದಾಳಿ ನಡೆಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ಬೆಂಬಲ ಕೋರಿದ್ದರು ಎಂದು ಉನ್ನತ ಮೂಲಗಳನ್ನಾಧರಿಸಿ ಮಾಧ್ಯಮಗಳು ವರದಿ ಮಾಡಿವೆ. ಆದ್ರೆ ದಾಳಿಗೆ ಟ್ರಂಪ್ ತತಕ್ಷಣದ ಒಪ್ಪಿಗೆ ನೀಡಿಲ್ಲ ಎಂದು ಹೇಳಲಾಗಿದೆ.
ಅಮೆರಿಕ-ಇಸ್ರೇಲ್ ಒಟ್ಟಿಗೆ ಸೇರಿ ಇರಾನ್ ಮೇಲೆ ದಾಳಿ ನಡೆಸಲು ಇಸ್ರೇಲ್ (Israel) ಕಳೆದ ಒಂದು ವಾರದಿಂದಲೂ ಪ್ರಯತ್ನಿಸುತ್ತಿತ್ತು. ಅದಕ್ಕಾಗಿ ಅಮೆರಿಕದ ಒಪ್ಪಿಗೆಯನ್ನೂ ಕೇಳಿತ್ತು ವರದಿಯಾಗಿದೆ. ಇದನ್ನೂ ಓದಿ: ಫ್ರಾನ್ಸ್ನಲ್ಲಿ 1300ಕ್ಕೂ ಹೆಚ್ಚು ಪ್ರತಿಭಟನಾಕಾರರ ಬಂಧನ – ವಿದ್ಯಾರ್ಥಿ ನಾಯಕರ ಜೊತೆ ಇಂದು ಪ್ರಧಾನಿ ಸಭೆ ಸಾಧ್ಯತೆ
ದಾಳಿಯಿಂದ ಚುನಾವಣೆ ಮುಂದೂಡಿಕೆ ಭೀತಿ?
ಇರಾನ್ ಮೇಲೆ ದಾಳಿ ನಡೆಸಿದರೆ ಇಸ್ರೇಲ್ನಲ್ಲಿ ಅಕ್ಟೋಬರ್ 27ರಂದು ನಡೆಯಬೇಕಿರುವ ಸಂಸತ್ ಚುನಾವಣೆ ಮುಂದೂಡಿಕೆಯಾಗುವ ಸಾಧ್ಯತೆಯ ಬಗ್ಗೆ ಇಸ್ರೇಲ್ ರಕ್ಷಣಾ ಪಡೆಗಳ ಮುಖ್ಯಸ್ಥ ಎಯಾಲ್ ಝಮೀರ್ ಎಚ್ಚರಿಕೆ ನೀಡಿದ್ದರು.
ಅಲ್ಲದೇ, ಇರಾನ್ ಹಾಗೂ ಯೆಮನ್ನ ಹೌತಿ ಬಂಡುಕೋರರಿಂದ ಕ್ಷಿಪಣಿ ದಾಳಿ ನಡೆದರೆ, ಅದನ್ನು ಎದುರಿಸಲು ಇಸ್ರೇಲ್ಗೆ ಅಮೆರಿಕದ ನೆರವು ಅಗತ್ಯವಾಗಬಹುದು. ಈ ಹಿನ್ನೆಲೆ ದಾಳಿಯನ್ನು ಮುಂದೂಡುವಂತೆ ಅಮೆರಿಕ ಹೇಳಿತ್ತು ಎಂದು ವರದಿಗಳು ತಿಳಿಸಿವೆ.
ಅದ್ರೆ, ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರ ಕಚೇರಿ ಈ ವರದಿಯನ್ನ ತಳ್ಳಿಹಾಕಿದೆ. ಇದೆಲ್ಲವೂ ಸುಳ್ಳು ಸುದ್ದಿ ಎಂದು ಹೇಳಿದೆ. ಅಲ್ಲದೇ, ಇರಾನ್ ವಿರುದ್ಧ ಮಿಲಿಟರಿ ಕ್ರಮ ತೆಗೆದುಕೊಳ್ಳುವ ವಿಚಾರದಲ್ಲಿ ನೆತನ್ಯಾಹು ಮತ್ತು ಇಸ್ರೇಲ್ ಸೇನಾ ಮುಖ್ಯಸ್ಥರ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು ಅನ್ನೋ ವರದಿಯೂ ಅಪ್ಪಟ ಸುಳ್ಳು ಎಂದು ಸಾರಾ ಸಗಟಾಗಿ ತಿರಸ್ಕಾರ ಮಾಡಿದೆ. ಇದನ್ನೂ ಓದಿ: ಬ್ರೆಜಿಲ್ ಚುನಾವಣೆಯಲ್ಲಿ ಟ್ರಂಪ್ ವಿರೋಧಿ ಲುಲಾಗೆ ಗೆಲುವು: 4ನೇ ಬಾರಿ ಅಧ್ಯಕ್ಷ ಪಟ್ಟ
ಇರಾನ್ಗೆ ಟ್ರಂಪ್ ಎಚ್ಚರಿಕೆ
ಈ ಮಧ್ಯೆ ಇರಾನ್ ಒಪ್ಪಂದಕ್ಕೆ ಬರದಿದ್ದರೆ ಮತ್ತೆ ಮಿಲಿಟರಿ ಕ್ರಮ ಕೈಗೊಳ್ಳುವುದಾಗಿ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಆದರೆ, ತಕ್ಷಣದ ದಾಳಿಯನ್ನು ತಾನು ತಡೆದಿರುವುದಾಗಿ ಭಾನುವಾರ ಹೇಳಿದ್ದರು. ಆದರೂ, ಆದೇಶ ನೀಡಿದ 96 ಗಂಟೆಗಳೊಳಗೆ ದೊಡ್ಡ ಪ್ರಮಾಣದ ಮಿಲಿಟರಿ ಕಾರ್ಯಾಚರಣೆ ಆರಂಭವಾಗುವ ಸಾಧ್ಯತೆಯ ಬಗ್ಗೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ ಎಂದು ವರದಿಯಾಗಿದೆ.

