– ಕನ್ನಡಿಗರಿಗೆ ಥ್ಯಾಂಕ್ಸ್ ಹೇಳಿದ ʻಕಿರಿಕ್ʼ ಬೆಡಗಿ
ಇತ್ತೀಚೆಗೆ ಹಿಂದಿ ಶೋ ‘ಕಾಫಿ ವಿತ್ ಕರಣ್’ ನಲ್ಲಿ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ವಿಜಯ್ ದೇವರಕೊಂಡ (Vijay Devarakonda) ಅವರ ಸಂದರ್ಶನ ಪ್ರಸಾರವಾದ ಮೇಲೆ, ಸೋಶಿಯಲ್ ಮೀಡಿಯಾದಲ್ಲಿ ಇವರ ಮದುವೆ ಪ್ರಪೋಸಲ್ ವಿಚಾರವಾಗಿ ಸಿಕ್ಕಾಪಟ್ಟೆ ಟ್ರೋಲ್ಸ್ ಮತ್ತು ನೆಗೆಟಿವ್ ಕಮೆಂಟ್ಗಳು ಹರಿದಾಡುತ್ತಿದ್ದವು. ಇದೀಗ ಈ ಎಲ್ಲಾ ಟೀಕೆಗಳಿಗೆ ನಟಿ ರಶ್ಮಿಕಾ ಮಂದಣ್ಣ ತಮ್ಮ ಇನ್ಸ್ಟಾಗ್ರಾಮ್ ಮತ್ತು ಫೇಸ್ಬುಕ್ ಪೋಸ್ಟ್ ಮೂಲಕ ನೇರವಾಗಿಯೇ ಟಕ್ಕರ್ ಕೊಟ್ಟಿದ್ದಾರೆ
ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಸಂಬಂಧದ ಬಗ್ಗೆ ಹಬ್ಬಿರುವ ಸುಳ್ಳು ಕಥೆಗಳು ಮತ್ತು ಟ್ರೋಲ್ಗಳಿಗೆ ಬ್ರೇಕ್ ಹಾಕಿರುವ ರಶ್ಮಿಕಾ, ತಮ್ಮ ಪತಿಯ ಪರ ನಿಂತಿದ್ದಾರೆ.
ಸಾಮಾನ್ಯವಾಗಿ ಇಂತಹ ಗಾಳಿ ಸುದ್ದಿಗಳಿಗೆ ತಲೆಕೆಡಿಸಿಕೊಳ್ಳದ ರಶ್ಮಿಕಾ, ಈ ಬಾರಿ ಮಾತ್ರ ಸುಮ್ಮನೆ ಕೂತಿಲ್ಲ. ಸಂದರ್ಶನದ ಬಳಿಕ ನೆಟ್ಟಿಗರು ಆಡಿಕೊಳ್ಳುತ್ತಿರುವ ರೀತಿ ಕೇವಲ ವೈಯಕ್ತಿಕ ಅಭಿಪ್ರಾಯದಂತೆ ಕಾಣುತ್ತಿಲ್ಲ, ಬದಲಾಗಿ ತಮ್ಮ ಸಿಟ್ಟನ್ನು ತೀರಿಸಿಕೊಳ್ಳಲು ಕಾಯುತ್ತಿರುವ ಒಂದು ಉದ್ರಿಕ್ತ ಗುಂಪಿನಂತೆ ಆಡುತ್ತಿದ್ದಾರೆ ಎಂದು ಬೇಸರ ಹೊರಹಾಕಿದ್ದಾರೆ. ತಮ್ಮಿಬ್ಬರ ಮದುವೆ ವಿಚಾರದ ಮೂಲ ಉದ್ದೇಶವನ್ನೇ ಜನ ಮರೆತು ಬಿಟ್ಟಿದ್ದಾರೆ ಎಂದು ಅವರು ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
ಪೋಸ್ಟ್ನಲ್ಲಿ ಪ್ರಪೋಸಲ್ ಬಗ್ಗೆ ಕ್ಲ್ಯಾರಿಟಿ
ಮದುವೆ ಮತ್ತು ಪ್ರಪೋಸಲ್ ಬಗ್ಗೆ ಪೋಸ್ಟ್ನಲ್ಲಿ ಮಾತನಾಡಿದ ಅವರು, ನನಗೆ ಜೀವನದಲ್ಲಿ ಏನು ಬೇಕು ಎಂಬುದು ಕ್ಲಿಯರ್ ಆಗಿ ಗೊತ್ತಿತ್ತು. ಹಾಗೆಯೇ ನನ್ನ ಸಂಗಾತಿಗೆ ಲೈಫ್ನ ಪ್ರಾಕ್ಟಿಕಲ್ ವಿಷಯಗಳ ಬಗ್ಗೆ ಯೋಚಿಸಲು ಕೊಂಚ ಸಮಯ ಬೇಕಿತ್ತು. ಅದರಲ್ಲಿ ಯಾವುದೇ ತಪ್ಪಿಲ್ಲ. ನಮ್ಮ ದೃಷ್ಟಿಯಲ್ಲಿ ಮದುವೆ ಅಂದರೆ ಬರೀ ಮಂಡಿಯೂರಿ ಕುಳಿತು ಉಂಗುರ ತೊಡಿಸುವ ಅಲಂಕಾರಿಕ ಭಾಗವಲ್ಲ; ಇಬ್ಬರೂ ಒಟ್ಟಾಗಿ ಒಂದು ಸುಂದರ ಭವಿಷ್ಯವನ್ನು ಕಟ್ಟಿಕೊಳ್ಳುವುದು ಎಂದು ಆಗಿ ಉತ್ತರಿಸಿದ್ದಾರೆ.
ಹೌದು, ನನಗೆ ನನ್ನ ಗಂಡನ ಮೇಲೆ ಅತಿಯಾದ ಪ್ರೀತಿ (Obsessed) ಇದೆ, ಅದರಲ್ಲಿ ತಪ್ಪೇನಿದೆ? ಅವರು ನನ್ನ ಇಡೀ ಜೀವನದ ಸಂಗಾತಿ, ಬೆಸ್ಟ್ ಫ್ರೆಂಡ್, ನನ್ನ ಮಕ್ಕಳಿಗೆ ತಂದೆ ಮತ್ತು ಕೊನೆಗಾಲದವರೆಗೂ ಜೊತೆಗಿರುವ ವ್ಯಕ್ತಿ. ಮದುವೆಯಾದ ಮೇಲೂ ‘ನಾವು ಮದುವೆಯಾಗೋಣವೇ?’ ಎಂದು ಕೇಳುವಷ್ಟು ಪ್ರೀತಿ ಇರಬೇಕು. ಇದಕ್ಕಾಗಿ ನಾನು ನೂರಲ್ಲ, ಸಾವಿರ ಬಾರಿ ಪ್ರಪೋಸ್ ಮಾಡಲೂ ರೆಡಿ ಇದ್ದೇನೆ ಎಂದು ಟ್ರೋಲರ್ಗಳ ಬಾಯಿ ಮುಚ್ಚಿಸಿದ್ದಾರೆ. ಇದನ್ನೂ ಓದಿ: ಚನ್ನಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿ ನಟ ಧನ್ವೀರ್ ವಿರುದ್ಧ ದೂರು ದಾಖಲು
ಇದೇ ವಿಷಯ ಇಟ್ಟುಕೊಂಡು ರಿಲೇಶನ್ಶಿಪ್ ಸಲಹೆ ಕೊಡುತ್ತಾ ‘ರೀಲ್ಸ್’ ಮಾಡುತ್ತಿರುವ ಕೆಲ ರಶ್ಮಿಕಾ ಟಾಂಗ್ ಕೊಟ್ಟಿದ್ದಾರೆ. ನನ್ನ ಲೈಫ್ ತುಂಬಾ ಕಷ್ಟದಲ್ಲಿದ್ದಾಗ ಇವರ್ಯಾರೂ ನನ್ನ ಜೊತೆ ಇರಲಿಲ್ಲ, ಆದರೆ, ನನ್ನ ಸಂಗಾತಿ ಆಗಲೂ ಇದ್ದರು, ಈಗಲೂ ಇದ್ದಾರೆ ನನ್ನ ಮೂಳೆ ಮುರಿದಾಗ, ಪ್ರತಿ ತಿಂಗಳು ಹೊಟ್ಟೆನೋವಿನಿಂದ ನರಳುವಾಗ, ನಡುರಾತ್ರಿ ಆತಂಕದಿಂದ ಎಚ್ಚರವಾದಾಗ ಇವರ್ಯಾರೂ ಇರಲ್ಲ, ಅವನು ಮಾತ್ರ ಇರುತ್ತಾನೆ. ಈಗ ನಾನಂತೂ ತುಂಬಾ ಹ್ಯಾಪಿಯಾಗಿದ್ದೇನೆ ಎಂದು ರಶ್ಮಿಕಾ ಹೇಳಿದ್ದಾರೆ
ಕೊನೆಯದಾಗಿ ತಮ್ಮ ಬಗ್ಗೆ ಹಬ್ಬುತ್ತಿರುವ ಸುಳ್ಳು ಎಡಿಟ್ಗಳು ಮತ್ತು ಕಲ್ಪಿತ ಕಥೆಗಳನ್ನು ನಂಬಬೇಡಿ ಎಂದು ವಿನಂತಿಸಿರುವ ಅವರು, ತಮ್ಮ ಫ್ಯಾಮಿಲಿ ಎಳೆದು ತರುತ್ತಿರುವವರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ
ಕುಟುಂಬದ ಬಗ್ಗೆ ಕೆಟ್ಟದಾಗಿ ಮಾತನಾಡುವುದು ಸ್ತ್ರೀವಾದ ಅಲ್ಲ, ಅದು ಫೆಮಿನಿಸಂ ಮುಖವಾಡ ಧರಿಸಿದ ಕಿರುಕುಳ ಎಂದಿದ್ದಾರೆ.
ಜೊತೆಗೆ 10 ವರ್ಷಗಳ ನಂತರವೂ ತಮ್ಮನ್ನು ನೆನಪಿಟ್ಟುಕೊಂಡು ಪ್ರೀತಿಸುತ್ತಿರುವ ಕನ್ನಡಿಗರಿಗೂ ರಶ್ಮಿಕಾ ಥ್ಯಾಂಕ್ಸ್ ಹೇಳಿದ್ದಾರೆ. ನಾವಿಬ್ಬರೂ ಮೆಚೂರ್ಡ್ ವ್ಯಕ್ತಿಗಳು, ನಮ್ಮಿಬ್ಬರಿಗೂ ಹೇಗೆ ಬದುಕಬೇಕು ಎಂಬ ಸ್ವಾತಂತ್ರ್ಯವಿದೆ, ನಾವಿಬ್ಬರೂ ಒಬ್ಬರನ್ನೊಬ್ಬರು ಕೊನೆಯವರೆಗೂ ಆಯ್ಕೆ ಮಾಡಿಕೊಳ್ಳುತ್ತಲೇ ಇರುತ್ತೇವೆ ಎಂದು ರಶ್ಮಿಕಾ ಹೇಳಿದ್ದಾರೆ.ಇದನ್ನೂ ಓದಿ: ಬೇಲೂರು ಬಳಿ ಮದಗಜಗಳ ಭೀಕರ ಕಾಳಗ – ಶಾಂತಗೊಳಿಸಲು ಇಟಿಎಫ್ ಸಿಬ್ಬಂದಿ ಹರಸಾಹಸ
