ಹಾಸನ: ಬೇಲೂರಿನ (Belur) ಜಗಬೋರನಹಳ್ಳಿ ಗ್ರಾಮದ ಬಳಿ ಎರಡು ದೈತ್ಯ ಮದಗಜಗಳು (Elephant) ಕಾಳಗಕ್ಕಿಳಿದಿವೆ. ಕಾಡಾನೆಯನ್ನು ಶಾಂತಗೊಳಿಸಲು ಇಟಿಎಫ್ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.
ಗುಂಪಿನಿಂದ ಹೊರ ಬಂದಿರುವ ಪ್ರಾಯದ ಮದಗಜಗಳು ಭಾರೀ ಕಾಳಗದಲ್ಲಿ ತೊಡಗಿವೆ. ಕಾಡಾನೆಗಳ ಕಾಳಗ ಕಂಡು ನಾಯಿಗಳ ಗುಂಪು ಅವುಗಳ ಸುತ್ತ ಬೊಗಳುತ್ತ ಸುತ್ತುವರೆದಿವೆ. ಈ ವೇಳೆ ನಾಯಿಗಳ ಮೇಲೂ ಕಾಡಾನೆಗಳು ದಾಳಿ ಮಾಡಲು ಮುಂದಾಗಿವೆ. ಇದನ್ನೂ ಓದಿ: ಇಟಿಎಫ್ ಸಿಬ್ಬಂದಿಯನ್ನು ಅಟ್ಟಾಡಿಸಿದ ಒಂಟಿ ಸಲಗ
ಸ್ಥಳದಲ್ಲೇ ಮದಗಜಗಳು ಬೀಡುಬಿಟ್ಟಿದ್ದು, ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಕಾಡಾನೆಗಳನ್ನು ಬೇರ್ಪಡಿಸಲು ಇಟಿಎಫ್ ಸಿಬ್ಬಂದಿ ಹರಸಾಹಸಪಡುತ್ತಿದ್ದಾರೆ. ಯಾವುದೇ ಅನಾಹುತ ಸಂಭವಿಸದಂತೆ ಇಟಿಎಫ್ ಸಿಬ್ಬಂದಿ ಮುನ್ನೆಚ್ಚರಿಕೆ ವಹಿಸಿದ್ದಾರೆ.
ಕಾಡಾನೆಗಳು ಮದದಲ್ಲಿರುವುದರಿಂದ ಗ್ರಾಮಸ್ಥರು ಹಾಗೂ ಸಾರ್ವಜನಿಕರು ಆ ಭಾಗದಲ್ಲಿ ಓಡಾಡುವಾಗ ಎಚ್ಚರಿಕೆಯಿಂದ ಇರಬೇಕು. ಅನಗತ್ಯವಾಗಿ ಆ ಭಾಗದಲ್ಲಿ ಓಡಾಡಬಾರದು. ಆನೆಗಳ ಫೋಟೋ ತೆಗೆಯುವುದು, ಸೆಲ್ಫಿ ಕ್ಲಿಕ್ಕಿಸುವುದು ಹಾಗೂ ಆನೆಗಳಿಗೆ ತೊಂದರೆ ಕೊಡದಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಸಿಟ್ಟಿಗೆದ್ದು ಅಟ್ಟಾಡಿಸಿದ ಕಾಡಾನೆ – ಓಡಿ ಓಡಿ ಪಾರಾದ ಇಟಿಎಫ್ ಸಿಬ್ಬಂದಿ!
