ಪ್ಯಾರಿಸ್: ಫ್ರಾನ್ಸ್ನಲ್ಲಿ (France) ಜೀವನ ವೆಚ್ಚ ಏರಿಕೆ, ಗಗನಕ್ಕೇರುತ್ತಿರುವ ವಸತಿ ಮತ್ತು ಬಾಡಿಗೆ ದರಗಳು ಹಾಗೂ ಸರ್ಕಾರದ ನೀತಿಗಳ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಪೊಲೀಸರು 1300ಕ್ಕೂ ಅಧಿಕ ಜನರ ಬಂಧಿಸಿದ್ದಾರೆ.
ಶನಿವಾರ (ಅ.24) ಫ್ರಾನ್ಸ್ನ ಪ್ರಮುಖ ನಗರಗಳಲ್ಲಿ ನಡೆದ ಪ್ರತಿಭಟನೆಯಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಈ ವೇಳೆ 53 ಮಂದಿ ಅಧಿಕಾರಿಗಳು ಗಾಯಗೊಂಡಿದ್ದಾರೆ. ಸದ್ಯ ಪೊಲೀಸರು 1314 ಜನರನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಬೆಲೆ ಏರಿಕೆ, ವಸತಿ ಬಿಕ್ಕಟ್ಟು- ಫ್ರಾನ್ಸ್, ಇಟಲಿ, ಅಲ್ಬೇನಿಯಾ, ಸ್ಪೇನ್, ಪೋರ್ಚುಗಲ್ ಬೃಹತ್ ಜನಾಕ್ರೋಶ
ಒಳನಾಡಿನ ಸಚಿವಾಲಯದ ಪ್ರಕಾರ, ಶನಿವಾರ ನಡೆದ ಪ್ರತಿಭಟನೆ ವೇಳೆ ಪೊಲೀಸರು 75 ಬೆಂಕಿ ಅನಾಹುತಗಳನ್ನು ಎದುರಿಸಿದ್ದಾರೆ. ಜೊತೆಗೆ 24 ಅಂಗಡಿಗಳು ಲೂಟಿಗೆ ಒಳಗಾಗಿವೆ. ಈ ಘಟನೆಗೆ ಸಂಬಂಧಿಸಿದಂತೆ ಅಧಿಕಾರಿಗಳು ತನಿಖೆ ಆರಂಭಿಸಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ ಎಂದು ತಿಳಿಸಿದೆ.
ಗಾಯಗೊಂಡ ಪ್ರತಿಭಟನಾಕಾರರ ಒಟ್ಟು ಸಂಖ್ಯೆಯನ್ನು ಸಚಿವಾಲಯ ಬಹಿರಂಗಪಡಿಸಿಲ್ಲ. ಆದಾಗ್ಯೂ, ಒಳನಾಡಿನ ಸಚಿವ ಲಾರೆಂಟ್ ನುನೆಜ್ ಅವರು ಶನಿವಾರ ತಡರಾತ್ರಿ ವರದಿ ಮಾಡಿದಂತೆ, ಇಬ್ಬರು ಪ್ರತಿಭಟನಾಕಾರರು ಗಂಭೀರವಾಗಿ ಗಾಯಗೊಂಡಿದ್ದಾರೆ. ಒಬ್ಬರು ಟೌಲುಸ್ನಲ್ಲಿ ಮತ್ತು ಮತ್ತೊಬ್ಬರು ಕ್ಲೆರ್ಮಾಂಟ್-ಫೆರಾಂಡ್ನಲ್ಲಿ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಬ್ರೆಜಿಲ್ ಚುನಾವಣೆಯಲ್ಲಿ ಟ್ರಂಪ್ ವಿರೋಧಿ ಲುಲಾಗೆ ಗೆಲುವು: 4ನೇ ಬಾರಿ ಅಧ್ಯಕ್ಷ ಪಟ್ಟ
ಈ ಮಧ್ಯೆ, ಪ್ರಧಾನಿ ಸೆಬಾಸ್ಟಿಯನ್ ಲೆಕೋರ್ನು ಅವರಿಂದು (ಅ.26) ಶಿಕ್ಷಣ ಸಚಿವ ವಾರ್ಡ್ ಗೆಫ್ರೇ ಮತ್ತು ಉನ್ನತ ಶಿಕ್ಷಣ ಸಚಿವ ಫಿಲಿಪ್ ಬ್ಯಾಪ್ಟಿಸ್ಟ್ ಅವರೊಂದಿಗೆ ವಿದ್ಯಾರ್ಥಿ ಪ್ರತಿನಿಧಿಗಳನ್ನು ಭೇಟಿ ಮಾಡುವ ಸಾಧ್ಯತೆಯಿದೆ. ಪ್ಯಾರಿಸ್ನ ಮ್ಯಾಟಿಗ್ನಾನ್ನಲ್ಲಿರುವ ಪ್ರಧಾನಿ ಕಚೇರಿಯಲ್ಲಿ ಈ ಸಭೆಯ ನಡೆಯಲಿದ್ದು, ಸಭೆಯ ನಂತರ ಗೆಫ್ರೇ ಮತ್ತು ಬ್ಯಾಪ್ಟಿಸ್ಟ್ ಅವರು ಮಾಧ್ಯಮದವರನ್ನು ಉದ್ದೇಶಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಲಿದ್ದಾರೆ.
ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯು ಸಮೀಪಿಸುತ್ತಿರುವ ಹಿನ್ನೆಲೆ ಈ ಪ್ರತಿಭಟನೆ ನಡೆಯುತ್ತಿವೆ. ಸಂವಿಧಾನದ ಪ್ರಕಾರ ಎರಡು ಅವಧಿಗಳನ್ನು ಪೂರೈಸಲಿರುವ ಪ್ರಸ್ತುತ ಅಧ್ಯಕ್ಷ ಎಮ್ಯುಮ್ಯುಯೆಲ್ ಮ್ಯಾಕ್ರಾನ್ ಅವರ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಲು ಮತದಾರರು ಸಿದ್ಧರಾಗುತ್ತಿರುವ ಸಮಯದಲ್ಲಿ ಈ ಬೆಳವಣಿಗೆ ನಡೆದಿದೆ.ಇದನ್ನೂ ಓದಿ: 100 ಕೋಟಿ ಹಗರಣ ಕೇಸ್ನಲ್ಲಿ ತಮಿಳುನಾಡಿನ ಮಾಜಿ ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ ಅರೆಸ್ಟ್
