ರಿಯಾದ್: ಸೌದಿ ಅರೇಬಿಯಾದ ರಾಜಧಾನಿ ರಿಯಾದ್‌ನ ಕಿಂಗ್ ಖಾಲಿದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಗುರಿಯಾಗಿಸಿಕೊಂಡು ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ (Ballistic Missile Attack) ನಡೆಸಿರುವುದಾಗಿ ಇರಾನ್ ಬೆಂಬಲಿತ ಯೆಮೆನ್‌ನ ಹೌತಿ ಬಂಡುಕೋರರ ಗುಂಪು ಹೇಳಿಕೊಂಡಿದೆ.
ಈ ಬೆಳವಣಿಗೆಯಿಂದ ಪ್ರದೇಶದಲ್ಲಿ ಈಗಾಗಲೇ ಇರುವ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ. ಇದನ್ನೂ ಓದಿ: ರಷ್ಯಾ ಕರಾವಳಿಯಲ್ಲಿ ಉಕ್ರೇನ್ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್, 23 ಭಾರತೀಯ ಸಿಬ್ಬಂದಿ ಪಾರು
ವರದಿಗಳ ಪ್ರಕಾರ, ದಾಳಿಯಿಂದ ವಿಮಾನ ನಿಲ್ದಾಣದ ವಿಮಾನ ಕಾರ್ಯಾಚರಣೆಗಳಿಗೆ ಅಡ್ಡಿಯಾಗಿದೆ. ಬಳಿಕ ನಿಲುಗಡೆಗೊಂಡಿದ್ದ ವಿಮಾನವೊಂದರಿಂದ ಹೊಗೆ ದಟ್ಟವಾಗಿ ಬರುತ್ತಿರುವುದು ಕಂಡುಬಂದಿದೆ. ಸ್ಫೋಟಗಳಿಗೆ ಕಾರಣವೇನು ಎಂಬುದನ್ನು ಸ್ವತಂತ್ರವಾಗಿ ತಕ್ಷಣ ದೃಢಪಡಿಸಲು ಸಾಧ್ಯವಾಗಿಲ್ಲ. ಈ ಕುರಿತು ತಕ್ಷಣದ ಪ್ರತಿಕ್ರಿಯೆ ನೀಡಲು ಸೌದಿ (Riyadh Airport) ಅಧಿಕಾರಿಗಳೂ ಕೂಡ ನಿರಾಕರಿಸಿದ್ದಾರೆ.
ಇರಾನ್, ಸೌದಿ ಅರೇಬಿಯಾ ಮತ್ತು ಯೆಮೆನ್ ನಡುವೆ ವ್ಯಾಪಕ ಉದ್ವಿಗ್ನತೆ ಹೆಚ್ಚುತ್ತಿರುವ ಸಂದರ್ಭದಲ್ಲೇ ಈ ಘಟನೆ ನಡೆದಿದೆ. ಕಳೆದ ಕೆಲವು ದಿನಗಳಿಂದ ಸೌದಿ ಅರೇಬಿಯಾದ ವಿವಿಧ ಗುರಿಗಳ ಮೇಲೆ ದಾಳಿ ನಡೆಸಿರುವುದಾಗಿ ಹೌತಿಗಳು ಪದೇಪದೇ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಫ್ಲೈದುಬೈ ಹೈಜಾಕ್ ಯತ್ನ – ಶೂಟ್ ಡೌನ್ ಮಾಡಲು ಸಜ್ಜಾಗಿದ್ದ ಇಸ್ರೇಲ್ ಫೈಟರ್ ಜೆಟ್‌ಗಳು!
ರಿಯಾದ್ ವಿಮಾನ ನಿಲ್ದಾಣ ಬಂದ್
ಕಿಂಗ್ ಖಾಲಿದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ಕಾರ್ಯಾಚರಣೆಗಳ ಮೇಲೆ ಇತ್ತೀಚಿನ ಬೆಳವಣಿಗೆ ತಕ್ಷಣದ ಪರಿಣಾಮ ಬೀರಿದೆ. ವಿಮಾನಗಳ ಸಂಚಾರ ಪತ್ತೆಹಚ್ಚುವ ಫ್ಲೈಟ್‌ರಾಡಾರ್24 ಸಂಸ್ಥೆ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ವಿಮಾನ ನಿಲ್ದಾಣವನ್ನ ಮತ್ತೆ ಬಂದ್ ಮಾಡಲಾಗಿದೆ ಎಂದು ತಿಳಿಸಿದೆ. ಹೌತಿಗಳು ದಾಳಿ ನಡೆಸುವುದಕ್ಕೆ ಒಂದೂವರೆಗೆ ಗಂಟೆಗೂ ಮುನ್ನ ಕೊನೆಯ ಟೇಕಾಫ್ ಆಗುತ್ತು ಎಂದು ವರಿಗಳು ತಿಳಿಸಿವೆ.

