ಮಾಸ್ಕೋ: ರಷ್ಯಾದ ಕಪ್ಪು ಸಮುದ್ರ (Black Sea) ಕರಾವಳಿಯ ಬಳಿ ಕಚ್ಚಾ ತೈಲ ಸಾಗಿಸುತ್ತಿದ್ದ ಲೈಬೀರಿಯಾ ಧ್ವಜ ಹೊಂದಿದ ತೈಲ ಟ್ಯಾಂಕರ್(Crude Oil Tanker) ಮೇಲೆ ಉಕ್ರೇನ್ ನೌಕಾ ಡ್ರೋನ್ (Naval Drone) ಭೀಕರ ದಾಳಿ ನಡೆಸಿದೆ.
ದಾಳಿಯ ಬೆನ್ನಲ್ಲೇ ಹಡಗಿನಲ್ಲಿ ಬೃಹತ್ ಬೆಂಕಿ ಕಾಣಿಸಿಕೊಂಡಿದ್ದು, ಹಡಗಿನಲ್ಲಿದ್ದ ಎಲ್ಲಾ 23 ಮಂದಿ ಭಾರತೀಯ ಸಿಬ್ಬಂದಿಯನ್ನು(Indian Crew Members) ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ರಷ್ಯಾದ(Russia) ಸಾರಿಗೆ ಸಚಿವಾಲಯ ತಿಳಿಸಿದೆ.
ಪ್ರಸಿದ್ಧ ಪ್ರವಾಸಿ ತಾಣವಾದ ಸೋಚಿ(Sochi) ನಗರದ ಸಮೀಪ ಈ ದಾಳಿ ನಡೆದಿದೆ. ಸಮುದ್ರದ ಮಧ್ಯೆ ಹಡಗು ಹೊತ್ತಿ ಉರಿಯುತ್ತಿದ್ದು, ಕಪ್ಪು ಹೊಗೆಯ ದಟ್ಟ ಮೋಡ ಆಕಾಶಕ್ಕೆ ಚಿಮ್ಮುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
🔥🚢 A dramatic view from the Russian Sochi right now, where the burning oil tanker off the port has turned into a massive wall of fire https://t.co/oFKrLRTIuw
— Special Kherson Cat 🐈🇺🇦 (@bayraktar_1love) October 6, 2026
ಬೆಂಕಿಯ ತೀವ್ರತೆ ಹೆಚ್ಚಿರುವ ಕಾರಣ ಅಗ್ನಿಶಾಮಕ ಸಿಬ್ಬಂದಿಗೆ ಸದ್ಯ ಬೆಂಕಿ ನಂದಿಸಲು ಸಾಧ್ಯವಾಗಿಲ್ಲ. ಸಮುದ್ರದ ಮೇಲ್ಮೈಯಲ್ಲಿ ಕಚ್ಚಾ ತೈಲ ವ್ಯಾಪಕವಾಗಿ ಹರಡಿ ಉರಿಯುತ್ತಿದ್ದು, ಜ್ವಾಲೆಯ ತೀವ್ರತೆ ಕಡಿಮೆಯಾದ ನಂತರ ಕಾರ್ಯಾಚರಣೆ ಮುಂದುವರಿಸಲಾಗುವುದು ಎಂದು ರಷ್ಯಾ ತಿಳಿಸಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಸೋಚಿ ನಗರದ ಕಡಲತೀರಗಳಿಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಇದನ್ನೂ ಓದಿ: ಫ್ಲೈದುಬೈ ಹೈಜಾಕ್ ಯತ್ನ – ಶೂಟ್ ಡೌನ್ ಮಾಡಲು ಸಜ್ಜಾಗಿದ್ದ ಇಸ್ರೇಲ್ ಫೈಟರ್ ಜೆಟ್‌ಗಳು!
A man plays his guitar in Sochi Russia tonight with in the background a burning oil tanker hit by drones lighting up the sky. https://t.co/vSiGu3MWep
— WarMonitor🇺🇦🇬🇧 (@WarMonitor3) October 6, 2026
2022ರಲ್ಲಿ ಯುದ್ಧ ಆರಂಭವಾದಾಗಿನಿಂದ ಎರಡೂ ದೇಶಗಳು ಕಪ್ಪು ಸಮುದ್ರ ಮಾರ್ಗದ ವಾಣಿಜ್ಯ ಹಡಗುಗಳನ್ನೇ ಗುರಿಯಾಗಿಸಿಕೊಂಡು ದಾಳಿ ಮುಂದುವರಿಸಿವೆ. ರಷ್ಯಾ ಇತ್ತೀಚೆಗೆ ಧಾನ್ಯ ಸಾಗಿಸುವ ಹಡಗುಗಳು ಮತ್ತು ಕಿವ್ ನಗರದ ಪ್ರಮುಖ ಸೇತುವೆಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದ್ದರೆ, ತನ್ನ ನಗರಗಳ ಮೇಲಿನ ರಷ್ಯಾದ ನಿರಂತರ ದಾಳಿಗೆ ಪ್ರತಿಯಾಗಿ ರಷ್ಯಾದ ತೈಲ ಮೂಲಸೌಕರ್ಯಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಿರುವುದಾಗಿ ಉಕ್ರೇನ್ ಸಮರ್ಥಿಸಿಕೊಂಡಿದೆ.

