ಬೆಂಗಳೂರು: ಡಿಆರ್‌ಐ (DRI) ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ, ಲಗೇಜ್ ಟ್ರ್ಯಾಲಿಯಲ್ಲಿ ಸಾಗಿಸುತ್ತಿದ್ದ ಚಿನ್ನದ (Gold) ಬಿಸ್ಕೆಟ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
1.80 ಕೋಟಿ ಮೌಲ್ಯದ 1.3 ಕೆಜಿ ಚಿನ್ನದ ಬಿಸ್ಕೆಟ್ ಅನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ವಿದೇಶದಿಂದ ಇಬ್ಬರು ಆರೋಪಿಗಳು ಚಿನ್ನ ತಂದಿದ್ದರು. ಇದನ್ನೂ ಓದಿ: ಕೆಪಿಎಸ್‌ಸಿ ಹಗರಣ; ಅಭ್ಯರ್ಥಿ ಬಳಿ 80 ಲಕ್ಷಕ್ಕೆ ಬ್ಲ್ಯಾಂಕ್ ಚೆಕ್ ಪಡೆದುಕೊಂಡಿದ್ದ ಬಸವರಾಜ್ ಕನ್ನಾಳೆ
ಆರೋಪಿಗಳೂ ಯಾವುದೋ ಯಾವುದೋ ಟ್ರ್ಯಾಲಿಗೆ ಚಿನ್ನದ ಬಿಸ್ಕೆಟ್ ಅಂಟಿಸಿ ಬಿಡ್ತಾ ಇದ್ದರು. ಅಮಾಯಕ ಪ್ರಯಾಣಿಕರು ಟ್ರ್ಯಾಲಿ ತೆಗೆದುಕೊಂಡು ಕಸ್ಟಮ್ಸ್ ದಾಟುತ್ತಾ ಇದ್ದರು. ಟ್ರ್ಯಾಲಿ ತೆಗೆದುಕೊಂಡು ಹೋದ ಜನರ ಹಿಂಬಾಲಿಸಿ ಬಳಿಕ ಟ್ರ್ಯಾಲಿಯಲ್ಲಿ ಚಿನ್ನ ತೆಗೆದುಕೊಳ್ಳುತ್ತಿದ್ದರು.
ಪ್ರಯಾಣಿಕರು ತಮಗೆ ಅರಿವಿಲ್ಲದೇ ಚಿನ್ನ ಸಾಗಾಟ ಮಾಡುತ್ತಿದ್ದರು. ಮಾಹಿತಿ ತಿಳಿದ DRI ಅಧಿಕಾರಿಗಳು ಚಿನ್ನ ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಮಲೇಷ್ಯಾದ ಕೌಲಾಲಂಪುರದಿಂದ ಚಿನ್ನ ಸಾಗಾಟ ಮಾಡುತ್ತಿದ್ದರು. ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್- ಸುಪ್ರೀಂನಲ್ಲೂ ದರ್ಶನ್‌ಗೆ ಬಿಗ್ ಶಾಕ್

