ಬೆಂಗಳೂರು: ಕೆಪಿಎಸ್‌ಸಿ (KPSC Scam) ಹಗರಣ ಪ್ರಕರಣದಲ್ಲಿ ಮತ್ತೊಂದು ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ. ಅಭ್ಯರ್ಥಿ ಬಳಿ 80 ಲಕ್ಷಕ್ಕೆ ಬಸವರಾಜ್ ಕನ್ನಾಳೆ (Basavaraj Kannale) ಬ್ಲ್ಯಾಂಕ್ ಚೆಕ್ ಪಡೆದುಕೊಂಡಿರುವುದು ಗೊತ್ತಾಗಿದೆ.
ಅಭ್ಯರ್ಥಿಗಳ ಜೊತೆಯಲ್ಲಿ ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಸದಸ್ಯೆ ಹಾಗೂ ಮಧ್ಯವರ್ತಿಗಳು ಡೀಲ್‌ಗೆ ಇಳಿದಿದ್ದರು. ಪ್ರತಿಯೊಬ್ಬರು ಕೂಡ 80 ಅಂಕದ ಪ್ರಶ್ನೆಗಳನ್ನು ಪಡೆದಿದ್ದರು. ಪ್ರಶ್ನೆಪತ್ರಿಕೆ ಮಾರಾಟ ಮಾಡುವ ಮುನ್ನ ಬಸವರಾಜ್ ಕನ್ನಾಳೆ ಮುಂಗಡ ಹಣವನ್ನು ಪಡೆದಿದ್ದ. ಇದನ್ನೂ ಓದಿ: ಕೆಪಿಎಸ್‌ಸಿ ಹಗರಣ ಕೇಸ್; ಶಿವಶಂಕರಪ್ಪ, ಗೀತಾ 13 ದಿನ ಇ.ಡಿ ಕಸ್ಟಡಿಗೆ
ಕನ್ನಾಳೆ 80 ಲಕ್ಷಕ್ಕೆ ಬ್ಲ್ಯಾಂಕ್ ಚೆಕ್ ಪಡೆದುಕೊಂಡಿದ್ದ. ಅಭ್ಯರ್ಥಿ ಕಿರಣ್ ಗೌಡ ಬಳಿಯಲ್ಲಿ 80 ಲಕ್ಷದ ಬ್ಲ್ಯಾಂಕ್ ಚೆಕ್ ಪಡೆದಿದ್ದ. ಚೆಕ್‌ನ ಜೊತೆಗೆ ಪ್ರಾಮಿಷರಿ ನೋಟ್ ಅನ್ನು ಕಿರಣ್ ಗೌಡ ಕೊಟ್ಟಿದ್ದ. ಕಿರಣ್ ಗೌಡ ನೀಡಿದ್ದ ಚೆಕ್ ಮತ್ತು ಪ್ರಾಮಿಷರಿ ನೋಟ್ ಅನ್ನು ‘ಪಬ್ಲಿಕ್ ಟಿವಿ’ ರಿವೀಲ್ ಮಾಡಿದೆ.

