ಬೆಂಗಳೂರು: ಚಿಕ್ಕಬಳ್ಳಾಪುರದಲ್ಲಿ (Chikkaballapura) ಟೆಲಿಗ್ರಾಮ್ (Telegram) ಆಪ್ ಉಪಯೋಗ ಮಾಡಿಕೊಂಡು ಭಯೋತ್ಪಾದಕ ಕೃತ್ಯ ಮಾಡಲು ಗ್ರೂಪ್ ಮಾಡಲು ಮುಂದಾಗಿದ್ರು ಎಂಬ ವಿಚಾರದ ಮಾಹಿತಿ ಇಲ್ಲ ಅಂತ ಡಿಸಿಎಂ ಪರಮೇಶ್ವರ್ (DCM Parameshwar) ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತಾಡಿದ ಅವರು, ಈ ವಿಚಾರದ ಬಗ್ಗೆ ಗೃಹ ಸಚಿವರನ್ನು ಕೇಳಿ. ನಾನು ಈಗ EX ಗೃಹ ಸಚಿವ ಆಗಿರೋದ್ರೀಂದ ನನಗೆ ಮಾಹಿತಿ ಕೊಡಲ್ಲ. ಹೀಗಾಗಿ ಈ ಬಗ್ಗೆ ಮಾಹಿತಿ ನನಗೆ ಇಲ್ಲ. ಆಗ ಗೃಹ ಸಚಿವ ಇದ್ದೆ ಮಾಹಿತಿ ಕೊಡುತ್ತಿದ್ರು. ಈಗ ಆ ಗೃಹ ಸಚಿವರಿಗೆ ಮಾಹಿತಿ ಕೊಡ್ತಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ಭಯೋತ್ಪಾದನೆಗೆ ಪಿತೂರಿ – ಮಾಸ್ಟರ್ ಮೈಂಡ್ ಶಬ್ಬೀರ್ ಸಿಕ್ಕಿಬಿದ್ದಿದ್ದು ಹೇಗೆ?
ಏನಿದು ಪ್ರಕರಣ?
ಪ್ರಕರಣದ ಮಾಸ್ಟರ್ ಮೈಂಡ್ ಶಬ್ಬೀರ್ ಇನ್ಸ್ಟಾಗ್ರಾಮ್ ನಲ್ಲಿ ಉಗ್ರರ ಪೋಸ್ಟ್ಗಳಿಗೆ ಲೈಕ್ ಮತ್ತು ಕಾಮೆಂಟ್ ಮಾಡಿ ಬೆಂಬಲಿಸುತ್ತಿದ್ದ. ಇದರಿಂದ ಅನುಮಾನಗೊಂಡಿದ್ದ ಗುಪ್ತಚರ ಇಲಾಖೆ, ಶಬ್ಬೀರ್ ಇನ್ಸ್ಟಾ ಐಡಿ ಫಾಲೂ ಮಾಡಿ ಸದ್ದಿಲ್ಲದೇ ತನಿಖೆ ನಡೆಸೋದಕ್ಕೆ ಶುರು ಮಾಡಿತ್ತು. ಈ ಬಗ್ಗೆ ಚಿಕ್ಕಬಳ್ಳಾಪುರ ನಗರ ಪೊಲೀಸರಿಗೆ (Chikkaballapura City Police) ಮಾಹಿತಿ ಕೂಡ ನೀಡಲಾಗಿತ್ತು.
ರಾಜ್ಯ ಗುಪ್ತಚರ ಇಲಾಖೆ ಮಾಹಿತಿ ಮೇರೆಗೆ ಶಬ್ಬೀರ್ ಬಂಧನಕ್ಕೆ ಪೊಲೀಸರು ಪ್ಲ್ಯಾನ್ ಮಾಡಿಕೊಂಡಿದ್ದರು. ಅದರಂತೆ ಚಿಕ್ಕಬಳ್ಳಾಪುರ ನಗರ ಪೊಲೀಸರು ಶಬ್ಬೀರ್ನನ್ನ ಬಂಧನ ಮಾಡಿ ಮೊಬೈಲ್ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಅಲ್ಲದೇ ಮೊಬೈಲ್ ಪರಿಶೀಲನೆ ವೇಳೆ ಇನ್ಸ್ಟಾ, ಟೆಲಿಗ್ರಾಂ ಆಪ್ಗಳನ್ನೂ ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಬೆಬ್ಬಿಬೀಳುವ ಮಾಹಿತಿಗಳು ಲಭ್ಯವಾಗಿವೆ. ಭಯೋತ್ಪಾದನೆಗೆ ಪಿತೂರಿ ನಡೆಸಿರುವುದು ಬಯಲಿಗೆ ಬಂದಿದೆ.ಇದನ್ನೂ ಓದಿ: ಏಷ್ಯನ್ ಗೇಮ್ಸ್ನಲ್ಲಿ ಭಾರತಕ್ಕೆ ಡಬಲ್ ಧಮಾಕ – ಚಿನ್ನ, ಬೆಳ್ಳಿಗೆ ಶೂಟ್
ಈ ಬಗ್ಗೆ ಚಿಕ್ಕಬಳ್ಳಾಪುರ ಎಸ್ಪಿ ಪದ್ಮಿನಿ ಸಾಹು ʻಪಬ್ಲಿಕ್ ಟಿವಿʼ ಜೊತೆಗೆ ಮಾತನಾಡಿ, ಸಾಮಾಜಿಕ ಜಾಲತಾಣದ ಕ್ಲೋಸ್ಡ್ ಗ್ರೂಪ್ ನಲ್ಲಿ ಪ್ರಚೋದನಕಾರಿ ಮೆಸೇಜ್ ಗಳು ಸಿಕ್ಕಿವೆ. ಪ್ರಚೋದನಕಾರಿ ಸಂದೇಶಗಳ ಆಧಾರದ ಮೇಲೆ ಪ್ರಕರಣ ದಾಖಲಿಸಿ ಆರೋಪಿ ಬಂಧಿಸಿದ್ದೇವೆ. ಆರೋಪಿ ಹಿನ್ನೆಲೆ, ಪ್ರಕರಣ ಸಂಬಂಧ ಇನ್ನೂ ಹೆಚ್ಚಿನ ತನಿಖೆ ಆಗತ್ಯವಿದೆ. ಪೊಲೀಸ್ ಕಸ್ಟಡಿಗೆ ಪಡೆದು ಆರೋಪಿಯನ್ನ ಹೆಚ್ಚಿನ ವಿಚಾರಣೆ ಮಾಡಲಿದ್ದೇವೆ. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ಕೇಸ್ ದಾಖಲಿಸಿದ್ದೇವೆ. ಮೊಬೈಲ್ನಲ್ಲಿ ನಡೆದಿರುವ ಚರ್ಚೆ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಿ ತನಿಖೆ ನಡೆಸಲಿದ್ದೇವೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಸರ್ಕಾರದ ನಿಯಮದಂತೆ ಸೈಟ್ ಕ್ಲೀನಿಂಗ್ ವೇಳೆ ಬಯಲಾಯ್ತು ಪತ್ನಿಯ ಭೀಕರ ಕೊಲೆ ರಹಸ್ಯ

