– ಕೊಲೆ ಮಾಡಿ ಶವ ಹಾಸಿಗೆಯಲ್ಲಿ ಸುತ್ತಿ ಖಾಲಿ ಸೈಟ್‌ನಲ್ಲಿ ಎಸೆದಿದ್ದ ಪತಿ
ಬೆಂಗಳೂರು: ಖಾಲಿ ಸೈಟ್ ಸ್ವಚ್ಛಗೊಳಿಸುವ ಸರ್ಕಾರದ ನಿಯಮವೇ ಸಂಪಿಗೆಹಳ್ಳಿ ಬಳಿಯ MS ನಗರ ಅಗ್ರಹಾರ ಲೇಔಟ್‌ನಲ್ಲಿ ನಡೆದ ಭೀಕರ ಕೊಲೆ ಪ್ರಕರಣವನ್ನು (Bengaluru Crime) ಬಯಲಿಗೆಳೆದಿದೆ.
ಒಡಿಸ್ಸಾ ಮೂಲದ ಸಾಗರ್ ಚಂದ್ರ ರಾವತ್ (32) ಮತ್ತು ಅನುಸೂಯ (28) ಪ್ರೀತಿಸಿ ಮದುವೆಯಾಗಿದ್ದು, ನಗರದ ಬೇರೆ ಬೇರೆ ಹೋಟೆಲ್‌ಗಳಲ್ಲಿ ಕೆಲಸ ಮಾಡುತ್ತಿದ್ದರು. ಹಣಕಾಸಿನ ವಿಚಾರವಾಗಿ ಆಗಸ್ಟ್ 11ರಂದು ದಂಪತಿ ನಡುವೆ ಗಲಾಟೆ ನಡೆದು, ಪತಿ ಸಾಗರ್ ಪತ್ನಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದ. ಮೂರು ದಿನ ಶವದ ಜೊತೆಯೇ ಮನೆಯಲ್ಲಿದ್ದು, ನಂತರ ಹಾಸಿಗೆಯಲ್ಲಿ ಸುತ್ತಿ ಖಾಲಿ ಸೈಟ್‌ನಲ್ಲಿ ಎಸೆದಿದ್ದ.
ಖಾಲಿ ಜಾಗ ಸ್ವಚ್ಛಗೊಳಿಸಲು ಸೈಟ್ ಮಾಲೀಕರು ಕಾರ್ಮಿಕರನ್ನು ಕಳುಹಿಸಿದಾಗ ಕೊಳೆತ ಸ್ಥಿತಿಯಲ್ಲಿದ್ದ ನಾಯಿಗಳು ಕಚ್ಚಿ ತಿಂದ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿತ್ತು. ಇದನ್ನೂ ಓದಿ: ಸಿಕ್ಕಿಂನಲ್ಲಿ ಮಧ್ಯರಾತ್ರಿ ಭೀಕರ ಭೂಕುಸಿತ; ನಾಲ್ವರು ಮೃತ, 128ಕ್ಕೂ ಹೆಚ್ಚು ಜನ ಸ್ಥಳಾಂತರ
ಪ್ರಕರಣ ದಾಖಲಿಸಿಕೊಂಡ ಸಂಪಿಗೆಹಳ್ಳಿ ಪೊಲೀಸರಿಗೆ ಶವದ ಮೇಲಿದ್ದ ಮಾಲ್ ಒಂದರ ಬಟ್ಟೆ ಟ್ಯಾಗ್ ಸಿಕ್ಕಿತ್ತು. ಅದರ ಬಿಲ್ ಆಧಾರದ ಮೇಲೆ ತನಿಖೆ ನಡೆಸಿ, ಮೃತರ ಗುರುತು ಪತ್ತೆಹಚ್ಚಿದ ಪೊಲೀಸರು, ಕೊಲೆ ನಡೆದು 20 ದಿನಗಳ ನಂತರ ಆರೋಪಿ ಪತಿ ಸಾಗರ್ ಚಂದ್ರ ರಾವತ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಇದನ್ನೂ ಓದಿ: ಕೆ.ಆರ್ ಪೇಟೆ ಪುರಸಭೆಯ 18,093 ರೂ. ಗಳ ಚೆಕ್ ಬೌನ್ಸ್; ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಸಾರ್ವಜನಿಕರಲ್ಲಿ ಆತಂಕ!

